This page has been fully proofread once and needs a second look.

ಸಂಗ್ರಹರಾಮಾಯಣ
 
೧೩
 
ವೇದನೆಯಿಂದ ಸಾವರಿಸಿಕೊಳ್ಳಬಹುದು. ಮನೆಗೆ ತೆರಳಿ ನಿನ್ನ ಕೊನೆಯ
ಬಯಕೆಗಳನ್ನು ತೀರಿಸಿಕೋ, ಬಂಧುಗಳನ್ನು ಕಂಡು ಮಾಡಬೇಕಾದುದನ್ನೆಲ್ಲ
ಪೂರಯಿಸಿ ಮರಳಿ ಬಾ, ಮತ್ತೆ ಹಿಂತೆರಳದಿರುವುದಕ್ಕಾಗಿ ಮರಳಿ ರಣಕ್ಕೆ ಬಾ.
ಮರಣದ ಕಣಕ್ಕೆ ಬಾ.?
 
"
 
ರಾಮಚಂದ್ರನ ಮಾತನ್ನಾಲಿಸಿದ ರಾವಣ ತಗ್ಗಿಸಿದ ತಲೆ- ಯನ್ನೆತ್ತದೆ,
ಮುಚ್ಚಿದ ತುಟಿಯನ್ನು ಬಿಚ್ಚದೆ ರಾಜಧಾನಿಗೆ ಹಿಂತೆರಳಿದನು! ರಾಮಚಂದ್ರನ
ಬಾಣ ಪ್ರಹಾರಗಳನ್ನು ನೆನೆದರೆ ಆತನಿಗೆ ನಡುಕವುಂಟಾಗುತ್ತಿತ್ತು !
 

 
ರಾವಣನ ಬಾಣಗಳಿಂದ ಗಾಯಗೊಂಡ ಕಪಿಗಳಿಗೆ ರಾಮ- ಭದ್ರನ ಅಮೃತ
ಮಧುರವಾದ ನೋಟವೇ ಮದ್ದಾಯಿತು. ಜಗತ್ಪ್ರಭುವಿನ ಕರುಣಾದೃಷ್ಟಿಗೆ
ಪಾತ್ರರಾದ ಕಪಿಗಳಲ್ಲಿ ಮತ್ತೆ ವೀರತ್ವದ ಚೈತನ್ಯ ಸಂಚಾರವಾಯಿತು.
 

 
ನಿದ್ರೆಯಿಂದ ಎಚ್ಚೆತ್ತರೆ ದೀರ್ಘನಿದ್ರೆ ಕಾಡಿದಿದೆ
 
ಬಂದ
 

 
ಅರಮನೆಗೆ ಮರಳಿದ ರಾವಣನು ಕುಂಭಕರ್ಣನನ್ನು ಎಬ್ಬಿಸುವಂತೆ
ರಾಕ್ಷಸರಿಗೆ ಆಜ್ಞಾಪಿಸಿದ. ಕುಂಭಕರ್ಣನ ನಿದ್ರೆ- ಯೆಂದರೇನು ಸಾಮಾನ್ಯವೆ ?
ರಾಕ್ಷಸರ ಒಂದು ಪಡೆಯೇ ಅವ- ನನ್ನು ಎಬ್ಬಿಸುವುದಕ್ಕಾಗಿ ತೆರಳಿತು.
ಬಂದ ರಕ್ಕಸರು ಕೂಗಿದರೂ, ಹೊಡೆದರೂ, ಬಡಿದರೂ ಕುಂಭಕರ್ಣ ನಿದ್ರಿಸಿಯೇ ಇದ್ದ!
ಕಿವಿ- ಯ ಬಳಿ ಜಾಗಟೆ ಬಾರಿಸಿದರೂ ಅವನಿಗೆ ಎಚ್ಚರವಾಗಲಿಲ್ಲ. ಸಿಟ್ಟಿ ನಿಂದ ಅವನ
ಮೇಲೆ ಓಡಾಡಿದರು. ಕುಂಭಕರ್ಣ ಮಲಗಿಯೇ ಇದ್ದ ! ವಿವಿಧ ಆಯುಧ
ಗಳಿಂದ ಗಾಸಿಗೊಳಿಸಿದರು, ಕಬ್ಬಿಣದ ಸಲಾಕೆಯಿಂದ ಕುಕ್ಕಿದರು. ಕುಂಭಕರ್ಣ
ಏಳಲಿಲ್ಲ !
 

 
ಹೀಗೆ ಅನವರತವಾದ ಪ್ರಯತ್ನದಿಂದ ಕೊನೆಗೆ ಹೇಗೆಗೋ ಕುಂಭಕರ್ಣನಿಗೆ
ಎಚ್ಚರವಾಯಿತು. ಅವನಿಗಾಗಿ ಮೊದಲೇ ಸಿದ್ಧ ಗೊಳಿಸಿದ್ದ ಮಾಂಸದ ರಾಶಿ-
ಯನ್ನೂ ಕಳ್ಳಿನ ಕೊಡಗಳನ್ನೂ ಹೊಟ್ಟೆ ಬಾಕನಾದ ಕುಂಭಕರ್ಣ ಕ್ಷಣಾರ್ಧ
ದಲ್ಲಿ ಕಬಳಿಸಿ ಮುಗಿಸಿದ.
 

 
ರಾವಣನಿಂದ ಕರೆ ಬಂತು.
ಕುಂಭಕರ್ಣ ರಾಜಸಭೆಗೆ ಬಂದು ರಾವಣನಿಗೆ ವಂದಿಸಿ ವಿಜ್ಞಾಪಿಸಿಕೊಂಡನು:
 
Ĵ
 
ಕುಂಭಕರ್ಣ ರಾಜಸಭೆಗೆ ಬಂದು ರಾವಣ