This page has not been fully proofread.

ಸಂಗ್ರಹರಾಮಾಯಣ
 
೧೩
 
ವೇದನೆಯಿಂದ ಸಾವರಿಸಿಕೊಳ್ಳಬಹುದು. ಮನೆಗೆ ತೆರಳಿ ನಿನ್ನ ಕೊನೆಯ
ಬಯಕೆಗಳನ್ನು ತೀರಿಸಿಕೋ, ಬಂಧುಗಳನ್ನು ಕಂಡು ಮಾಡಬೇಕಾದುದನ್ನೆಲ್ಲ
ಪೂರಯಿಸಿ ಮರಳಿ ಬಾ, ಮತ್ತೆ ಹಿಂತೆರಳದಿರುವುದಕ್ಕಾಗಿ ಮರಳಿ ರಣಕ್ಕೆ ಬಾ.
ಮರಣದ ಕಣಕ್ಕೆ ಬಾ.?
 
ರಾಮಚಂದ್ರನ ಮಾತನ್ನಾಲಿಸಿದ ರಾವಣ ತಗ್ಗಿಸಿದ ತಲೆಯನ್ನೆತ್ತದೆ,
ಮುಚ್ಚಿದ ತುಟಿಯನ್ನು ಬಿಚ್ಚದೆ ರಾಜಧಾನಿಗೆ ಹಿಂತೆರಳಿದನು! ರಾಮಚಂದ್ರನ
ಬಾಣ ಪ್ರಹಾರಗಳನ್ನು ನೆನೆದರೆ ಆತನಿಗೆ ನಡುಕವುಂಟಾಗುತ್ತಿತ್ತು !
 
ರಾವಣನ ಬಾಣಗಳಿಂದ ಗಾಯಗೊಂಡ ಕಪಿಗಳಿಗೆ ರಾಮಭದ್ರನ ಅಮೃತ
ಮಧುರವಾದ ನೋಟವೇ ಮದ್ದಾಯಿತು. ಜಗತ್ರಭುವಿನ ಕರುಣಾದೃಷ್ಟಿಗೆ
ಪಾತ್ರರಾದ ಕಪಿಗಳಲ್ಲಿ ಮತ್ತೆ ವೀರತ್ವದ ಚೈತನ್ಯ ಸಂಚಾರವಾಯಿತು.
 
ನಿದ್ರೆಯಿಂದ ಎಚ್ಚೆತ್ತರೆ ದೀರ್ಘನಿದ್ರೆ ಕಾಡಿದೆ
 
ಬಂದ
 
ಅರಮನೆಗೆ ಮರಳಿದ ರಾವಣನು ಕುಂಭಕರ್ಣನನ್ನು ಎಬ್ಬಿಸುವಂತೆ
ರಾಕ್ಷಸರಿಗೆ ಆಜ್ಞಾಪಿಸಿದ. ಕುಂಭಕರ್ಣನ ನಿದ್ರೆಯೆಂದರೇನು ಸಾಮಾನ್ಯವೆ ?
ರಾಕ್ಷಸರ ಒಂದು ಪಡೆಯೇ ಅವನನ್ನು ಎಬ್ಬಿಸುವುದಕ್ಕಾಗಿ ತೆರಳಿತು.
ರಕ್ಕಸರು ಕೂಗಿದರೂ, ಹೊಡೆದರೂ, ಬಡಿದರೂ ಕುಂಭಕರ್ಣ ನಿದ್ರಿಸಿಯೇ ಇದ್ದ!
ಕಿವಿಯ ಬಳಿ ಜಾಗಟೆ ಬಾರಿಸಿದರೂ ಅವನಿಗೆ ಎಚ್ಚರವಾಗಲಿಲ್ಲ. ಸಿಟ್ಟಿನಿಂದ ಅವನ
ಮೇಲೆ ಓಡಾಡಿದರು. ಕುಂಭಕರ್ಣ ಮಲಗಿಯೇ ಇದ್ದ ! ವಿವಿಧ ಆಯುಧ
ಗಳಿಂದ ಗಾಸಿಗೊಳಿಸಿದರು, ಕಬ್ಬಿಣದ ಸಲಾಕೆಯಿಂದ ಕುಕ್ಕಿದರು. ಕುಂಭಕರ್ಣ
ಏಳಲಿಲ್ಲ !
 
ಹೀಗೆ ಅನವರತವಾದ ಪ್ರಯತ್ನದಿಂದ ಕೊನೆಗೆ ಹೇಗೆ ಕುಂಭಕರ್ಣನಿಗೆ
ಎಚ್ಚರವಾಯಿತು. ಅವನಿಗಾಗಿ ಮೊದಲೇ ಸಿದ್ಧಗೊಳಿಸಿದ್ದ ಮಾಂಸದ ರಾಶಿ-
ಯನ್ನೂ ಕಳ್ಳಿನ ಕೊಡಗಳನ್ನೂ ಹೊಟ್ಟೆ ಬಾಕನಾದ ಕುಂಭಕರ್ಣ ಕ್ಷಣಾರ್ಧ
ದಲ್ಲಿ ಕಬಳಿಸಿ ಮುಗಿಸಿದ.
 
ರಾವಣನಿಂದ ಕರೆ ಬಂತು.
ನಿಗೆ ವಂದಿಸಿ ವಿಜ್ಞಾಪಿಸಿಕೊಂಡನು:
 
Ĵ
 
ಕುಂಭಕರ್ಣ ರಾಜಸಭೆಗೆ ಬಂದು ರಾವಣ