This page has not been fully proofread.

ಮಿಂಚಿನಬಳ್ಳಿ
 
ಇತ್ತ ರಾವಣನಿಗೂ ತಿಳಿವುಬಂತು. ಅವನು ಎದ್ದು ನಿಂತು ರಾಮನಿದ್ದೆಡೆಗೆ
ಸಾಗಿದನು; ಸಿಂಹದೊಡನೆ ಹೋರಾಡುವ ಚಪಲದಿಂದ ಧಾವಿಸುವ ಆನೆಯಂತೆ
ರಾವಣನು ಮುನ್ನುಗ್ಗಿ ಬರುತ್ತಿರುವುದನ್ನು ಕಂಡ ರಾಮಭದ್ರನು ಧನುರ್ಧಾರಿ-
ಯಾಗಿ ನಿಂತು ಮುಗುಳು ನಗುತ್ತ ನುಡಿದನು :
 
೧೯೨
 
"ರಾವಣ, ಬ್ರಹ್ಮಾದಿಗಳನ್ನು ಮೊರೆ ಹೊಕ್ಕರೂ ಇನ್ನು ನಿನಗೆ ಬಿಡುಗಡೆ
ಯಿಲ್ಲ. ನಿನ್ನ ಪಾಪ ಪರಿಪೂರ್ಣವಾಗಿದೆ. ಇನ್ನು ಹೆಚ್ಚು ಕಾಲ ನೀನು ಭೂಮಿ
ಯಲ್ಲಿರುವುದು ಸರಿಯಲ್ಲ."
 
ಯುದ್ಧ ಆರಂಭವಾಯಿತು. ರಾವಣನು ರಥದ ಮೇಲೆ ಕುಳಿತಿದ್ದರೆ
ರಾಮಚಂದ್ರ ಬರಿ ನೆಲದಮೇಲೆ ಬರಿಗಾಲಿನಲ್ಲಿ ನಿಂತು ಯುದ್ಧ ಮಾಡುತ್ತಿದ್ದಾನೆ.
ಇದು ಪ್ರಭುವಿನ ಪರಮಭಕ್ತನಾದ ಮಾರುತಿಗೆ ಸಹನೆಯಾಗಲಿಲ್ಲ. ಅವನು
ರಾಮಚಂದ್ರನನ್ನು ತನ್ನ ಹೆಗಲಮೇಲಿರಿಸಿಕೊಂಡ.
 
ರಾವಣನ ಬಾಣಗಳು ಮುಗಿಲನ್ನು ಮುಚ್ಚಿದವು. ನಡು ಹಗಲಿನಲ್ಲಿ
ಕತ್ತಲು ಕವಿಯಿತು. ಅನಂತರ ರಾವಣನು ಹನುಮಂತನ ಮೇಲೆ ಭಯಾನಕ
ಗಳಾದ ಬಾಣಗಳನ್ನೆಸೆದನು. ಬೆಂಕಿಗೆ ತುಪ್ಪ ಸುರಿದಂತೆ ಹನುಮಂತನ ತೇಜಸ್ಸು
ಅದರಿಂದ ಮತ್ತಷ್ಟು ಉಜ್ವಲವಾಯಿತು.
 
ರಾಮಚಂದ್ರನು ಮಂದಹಾಸವನ್ನು ಬೀರುತ್ತಲೆ ಬಾಣಗಳನ್ನೆಸೆಯುತ್ತಿ-
ದ್ದನು. ರಾಮಚಂದ್ರನ ಒಂದೊಂದು ಬಾಣಕ್ಕೆ ರಾವಣನ ಒಂದೊಂದು ವೈಭವ
ಬಲಿಯಾಗುತ್ತಿತ್ತು ! ಕುದುರೆಗಳು ಸತ್ತವು. ಸೂತ ನೆಲಕ್ಕುರುಳಿದ. ಪತಾಕೆ
ಹರಿದು ಬಿತ್ತು. ರಥ ಮುರಿದು ಬಿತ್ತು. ರಾಕ್ಷಸನ ರಾಜ್ಯಶ್ರೀಯ ಸಂಕೇತವಾದ
ಬೆಳ್ಕೊಡೆ ವಿಜಯದ ಆಸೆಯೊಡನೆ ಪುಡಿಯಾಯಿತು. ಇಪ್ಪತ್ತು ಕೈಗಳು ಹೊತ್ತಿ
ರುವ ಆಯುಧಗಳೂ ತ್ರಿಲೋಕ ವಿಜಯದ ಹೆಮ್ಮೆಯೊಡನೆ ಮಣ್ಣು ಮುಕ್ಕಿದವು.
ತಲೆ ಭಾರವಾಯಿತು. ಕಣ್ಣುಗುಡ್ಡೆ ತಿರುಗಿದಂತಾಯಿತು. ಮೈ ಬವಳಿ ಬಂದು
ಕುಸಿಯಿತು ! ರತ್ನಖಚಿತವಾದ ಬಂಗಾರದ ಕಿರೀಟ ತಲೆಯಿಂದ ಸರಿದು ಕೆಳಗೆ
ಬಿತ್ತು !
 
D
 
ಹಲ್ಲುಕಿತ್ತ ಹಾವಿನಂತೆ ಬೆಪ್ಪಾಗಿ ಕುಳಿತಿರುವ ರಾವಣನನ್ನು ರಾಮ-
ಚಂದ್ರನೇ ಎಚ್ಚರಿಸಿದನು :
 
ಅವಿವೇಕಿಯಾದ ರಾಜನೆ ! ರಾಮಚಂದ್ರ ಅನುಜ್ಞೆ ಕೊಡುತ್ತಿದ್ದಾನೆ.
ನೀನು ಯುದ್ಧರಂಗದಿಂದ ನಗರಕ್ಕೆ ಹಿಂತೆರಳಬಹುದು. ನನ್ನ ಬಾಣಗಳ ಪೆಟ್ಟಿನ