This page has been fully proofread once and needs a second look.

ಸಂಗ್ರಹರಾಮಾಯಣ
 
*
" ಶೂರರಿಗೆ ಬಾಯಿಬಡಕತನ ಸಲ್ಲದು. ನಿನ್ನ ಪರಾಕ್ರಮಕ್ಕೆ ಧನುಸ್ಸಿನ
 
ಪುರಾವೆ ದೊರಕಲಿ,. "
 
OFO
 

 
ರಾವಣನೆಸೆದ ಏಳು ಬಾಣಗಳನ್ನೂ ಕತ್ತರಿಸಿದ ಲಕ್ಷ್ಮಣ ರಾವಣನ
ಮೇಲೆ ಬಾಣಗಳನ್ನು ಸುರಿದನು. ರಾವಣ ಅವುಗಳನ್ನು ಭೇದಿಸಿದನು.
ಇಬ್ಬರಲ್ಲೂ ಅಸಂಖ್ಯ ಬಾಣಗಳ ವಿನಿಮಯ ನಡೆಯಿತು. ಯಾವೊಬ್ಬನೂ
ಕಳೆಗುಂದಲಿಲ್ಲ. ಕೊನೆಗೆ ರಾವಣನು ಬ್ರಹ್ಮದತ್ತವಾದ ಅಮೋಘಾಸ್ತ್ರ-
ವೊಂದನ್ನು ಪ್ರಯೋಗಿಸಿದನು. ಅದು ಲಕ್ಷ್ಮಣನ ಹಣೆಯನ್ನು ಭೇದಿಸಿತು.
ಮೂರ್ಛಿತನಾದ ಸೌಮಿತ್ರಿ ನೆಲದಮೇಲೆ ಕುಸಿದು ಬಿದ್ದನು.
 

 
ರಾವಣನು ಸರ್ರನೆ ರಥದಿಂದಿಳಿದು ಲಕ್ಷ್ಮಣನನ್ನು ಎತ್ತಿ- ಕೊಂಡು
ಹೋಗಲು ಪ್ರಯತ್ನಿಸಿದನು. ಆಗ ಲಕ್ಷ್ಮಣನು ತನ್ನ ನಿಜ ರೂಪವಾದ ಶೇಷ-
ನನ್ನು ಸ್ಮರಿಸಿಕೊಂಡನು. ರಾವಣನ ಇಪ್ಪತ್ತು ತೋಳುಗಳೂ ಕೂಡಿ ಲಕ್ಷ್ಮಣ
ನನ್ನು ಒಂದಂಗುಲ ಕದಲಿಸಲೂ ಅಸಮರ್ಥವಾದವು ! ಪ್ರತಿಯಾಗಿ ರಾವಣನ
ದೈತ್ಯ ವೇಗದ ಸೆಳೆತಕ್ಕೆ ಗಿರಿ, ಸಮುದ್ರಗಳಿಂದ ಕೂಡಿದ ಭೂಮಂಡಲವೇ

ಹೆದರಿದ ಹೆಣ್ಣಿನಂತೆ ಕಂಪಿಸಿತು !
 

 
ಸಾವಿರ ತಲೆಯ ಶೇಷನಲ್ಲವೆ ಅವನು ? ಅವನ ಒಂದು ತಲೆ- ಯಲ್ಲಿ
ಇಡಿಯ ಭೂಮಂಡಲವು ಸಾಸಿವೆಕಾಳಿನಂತೆ ಕಂಗೊಳಿಸು ವುದಲ್ಲವೆ? ಅಂಥ ಆದಿ-
ಶೇಷನನ್ನು ನಲುಗಿಸುವುದು ಯಾರಿಗೆ ಸಾಧ್ಯ? ಅವನನ್ನು ಬಲಪ್ರಯೋಗದಿಂದ
ಕೊಂಡೊಯ್ಯುವ ಅದಟು ಯಾರಿಗಿದೆ ?
 

 
ಲಕ್ಷ್ಮಣನು ಮೂರ್ಛಿತನಾದುದನ್ನು ಕಂಡು ಕುಪಿತನಾದ ಮಾರುತಿ
ವೇಗವಾಗಿ ಬಂದು ರಾವಣನಿಗೆ ಬಲವಾದ ಏಟೊಂ- ದನ್ನು ಬಿಗಿದನು. ರಾವಣ
ನಿಗೆ ಬವಳಿ ಬಂದಂತಾಯಿತು. ಅವನು ಎಲ್ಲ ಮೋರೆಗಳಿಂದ ನೆತ್ತರು ಕಾರುತ್ತ
ಸತ್ತವರಂತೆ ಬಿದ್ದು- ಕೊಂಡನು. ಅಷ್ಟರಲ್ಲಿ ಮಾರುತಿ ಲಕ್ಷ್ಮಣನ ಮೇಲಣ ಪ್ರೀತಿ
-
ಯಿಂದ ಅವನನ್ನೆತ್ತಿಕೊಂಡು ರಾಮಚಂದ್ರನ ಬಳಿ ತಂದಿರಿ- ಸಿದನು, ಮಗುವನ್ನು
ತಂದೆಯಬಳಿ ಇರಿಸುವಂತೆ. ಕರುಣೆ ತುಂಬಿದ ರಾಮಚಂದ್ರ ತನ್ನ ಪ್ರೀತಿಯ
ತಮ್ಮನ ಮೈಯಮೇಲೆ ಕೈಯಾಡಿಸಿ ಹಣೆಗೆ ನಾಟಿದ ಬಾಣವನ್ನು ಕಿತ್ತೆಳೆದನು.
ರಾಮ
ರಾಮ- ಚಂದ್ರನ ಅಮೃತಸ್ಪರ್ಶದಿಂದ ಲಕ್ಷ್ಮಣನ ವೇದನೆ ಪರಿಹಾರ- ವಾಯಿತು.
ಚಂದ್ರನಿಗೆ ಹಿಡಿದಿದ್ದ ರಾಹು ತೊಲಗಿತು. ಮತ್ತೆ ಚಂದ್ರ ಮುಗಿಲಲ್ಲಿ
ಬೆಳಗಿದನು.