This page has not been fully proofread.

ಸಂಗ್ರಹರಾಮಾಯಣ
 
* ಶೂರರಿಗೆ ಬಾಯಿಬಡಕತನ ಸಲ್ಲದು. ನಿನ್ನ ಪರಾಕ್ರಮಕ್ಕೆ ಧನುಸ್ಸಿನ
 
ಪುರಾವೆ ದೊರಕಲಿ, "
 
OFO
 
ರಾವಣನೆಸೆದ ಏಳು ಬಾಣಗಳನ್ನೂ ಕತ್ತರಿಸಿದ ಲಕ್ಷ್ಮಣ ರಾವಣನ
ಮೇಲೆ ಬಾಣಗಳನ್ನು ಸುರಿದನು. ರಾವಣ ಅವುಗಳನ್ನು ಭೇದಿಸಿದನು.
ಇಬ್ಬರಲ್ಲೂ ಅಸಂಖ್ಯ ಬಾಣಗಳ ವಿನಿಮಯ ನಡೆಯಿತು. ಯಾವೊಬ್ಬನೂ
ಕಳೆಗುಂದಲಿಲ್ಲ. ಕೊನೆಗೆ ರಾವಣನು ಬ್ರಹ್ಮದತ್ತವಾದ ಅಮೋಘಾಸ್ತ್ರ-
ವೊಂದನ್ನು ಪ್ರಯೋಗಿಸಿದನು. ಅದು ಲಕ್ಷ್ಮಣನ ಹಣೆಯನ್ನು ಭೇದಿಸಿತು.
ಮೂರ್ಛಿತನಾದ ಸೌಮಿತ್ರಿ ನೆಲದಮೇಲೆ ಕುಸಿದು ಬಿದ್ದನು.
 
ರಾವಣನು ಸರನೆ ರಥದಿಂದಿಳಿದು ಲಕ್ಷ್ಮಣನನ್ನು ಎತ್ತಿಕೊಂಡು
ಹೋಗಲು ಪ್ರಯತ್ನಿಸಿದನು. ಆಗ ಲಕ್ಷ್ಮಣನು ತನ್ನ ನಿಜರೂಪವಾದ ಶೇಷ-
ನನ್ನು ಸ್ಮರಿಸಿಕೊಂಡನು. ರಾವಣನ ಇಪ್ಪತ್ತು ತೋಳುಗಳೂ ಕೂಡಿ ಲಕ್ಷ್ಮಣ
ನನ್ನು ಒಂದಂಗುಲ ಕದಲಿಸಲೂ ಅಸಮರ್ಥವಾದವು ! ಪ್ರತಿಯಾಗಿ ರಾವಣನ
ದೈತ್ಯ ವೇಗದ ಸೆಳೆತಕ್ಕೆ ಗಿರಿ, ಸಮುದ್ರಗಳಿಂದ ಕೂಡಿದ ಭೂಮಂಡಲವೇ
ಹೆದರಿದ ಹೆಣ್ಣಿನಂತೆ ಕಂಪಿಸಿತು !
 
ಸಾವಿರ ತಲೆಯ ಶೇಷನಲ್ಲವೆ ಅವನು ? ಅವನ ಒಂದು ತಲೆಯಲ್ಲಿ
ಇಡಿಯ ಭೂಮಂಡಲವು ಸಾಸಿವೆಕಾಳಿನಂತೆ ಕಂಗೊಳಿಸುವುದಲ್ಲವೆ? ಅಂಥ ಆದಿ-
ಶೇಷನನ್ನು ನಲುಗಿಸುವುದು ಯಾರಿಗೆ ಸಾಧ್ಯ? ಅವನನ್ನು ಬಲಪ್ರಯೋಗದಿಂದ
ಕೊಂಡೊಯ್ಯುವ ಅದಟು ಯಾರಿಗಿದೆ ?
 
ಲಕ್ಷ್ಮಣನು ಮೂರ್ಛಿತನಾದುದನ್ನು ಕಂಡು ಕುಪಿತನಾದ ಮಾರುತಿ
ವೇಗವಾಗಿ ಬಂದು ರಾವಣನಿಗೆ ಬಲವಾದ ಏಟೊಂದನ್ನು ಬಿಗಿದನು. ರಾವಣ
ನಿಗೆ ಬವಳಿ ಬಂದಂತಾಯಿತು. ಅವನು ಎಲ್ಲ ಮೋರೆಗಳಿಂದ ನೆತ್ತರು ಕಾರುತ್ತ
ಸತ್ತವರಂತೆ ಬಿದ್ದು ಕೊಂಡನು. ಅಷ್ಟರಲ್ಲಿ ಮಾರುತಿ ಲಕ್ಷ್ಮಣನ ಮೇಲಣ ಪ್ರೀತಿ
ಯಿಂದ ಅವನನ್ನೆತ್ತಿಕೊಂಡು ರಾಮಚಂದ್ರನ ಬಳಿ ತಂದಿರಿಸಿದನು, ಮಗುವನ್ನು
ತಂದೆಯಬಳಿ ಇರಿಸುವಂತೆ. ಕರುಣೆ ತುಂಬಿದ ರಾಮಚಂದ್ರ ತನ್ನ ಪ್ರೀತಿಯ
ತಮ್ಮನ ಮೈಯಮೇಲೆ ಕೈಯಾಡಿಸಿ ಹಣೆಗೆ ನಾಟಿದ ಬಾಣವನ್ನು ಕಿತ್ತೆಳೆದನು.
ರಾಮಚಂದ್ರನ ಅಮೃತಸ್ಪರ್ಶದಿಂದ ಲಕ್ಷ್ಮಣನ ವೇದನೆ ಪರಿಹಾರವಾಯಿತು.
ಚಂದ್ರನಿಗೆ ಹಿಡಿದಿದ್ದ ರಾಹು ತೊಲಗಿತು. ಮತ್ತೆ ಚಂದ್ರ ಮುಗಿಲಲ್ಲಿ
ಬೆಳಗಿದನು.