This page has been fully proofread once and needs a second look.

ಮಿಂಚಿನಬಳ್ಳಿ
 
" ರಾವಣ ! ಇದು ಮಿದುವಾದ ಪೆಟ್ಟು. ಅದರಿಂದ ನೀನು ಬದುಕಿದೆ.
ನಾನು ಬಲವಾಗಿ ಪ್ರಹರಿಸುತ್ತಿದ್ದರೆ ನನ್ನನ್ನು ಪ್ರಶಂಸಿ- ಸಲಿಕ್ಕೆ ನೀನೆಲ್ಲಿರುತ್ತಿದ್ದೆ ?
ನನ್ನ ದೃಢವಾದ ಮುಷ್ಟಿ ಪ್ರಹಾರಕ್ಕೆ ನಿನ್ನ ಎಲುವು ಹಿಟ್ಟಾದೀತು. ತಿಳಿದಿರಲಿ."
 
OFO
 

 
"ನೀನು ಮತ್ತನಿರುವೆ. ನನ್ನ ಪ್ರಹಾರದ ರುಚಿಯನ್ನೂ ನೀನು ನೋಡ
ಬೇಕು." ಎಂದವನೆ ರಾವಣನೂ ಸರ್ವ ಪ್ರಯತ್ನದಿಂದ ಹನುಮಂತನಿಗೆ ಬಲ
ವಾಗಿ ಗುದ್ದಿದನು. ಹನುಮಂತನು ಅದರಿಂದ ವಿಹ್ವಲನಾದಂತೆ ಕುಳಿತು
ಕೊಂಡನು. ರಾವಣನು ಇದೇ ಸಮಯವೆಂದು ಬಗೆದು ಅಲ್ಲಿಂದ ತಪ್ಪಿಸಿಕೊಂಡು
ನಡೆ ದನು. "ಕದ್ದು ಓಡಿ ಹೋಗಬೇಡ ನಿಲ್ಲು" ಎಂದು ಹನುಮಂತನು ಗದರಿ-
ಸುತ್ತಿದ್ದಂತೆಯೇ ರಾವಣ ನೀಲನ ಮೇಲೆ ಬಾಣಗಳನ್ನು ಸುರಿಸುತ್ತ ಮುಂದೆ
ಸಾಗಿದನು. ನೀಲನಿಗೆ ರಾವಣನೊಡನೆ ಹೋರಾಡುವುದಕ್ಕಿಂತ ಅವನಿಗೆ
ಕೀಟಲೆ ಮಾಡುವುದು ಉಚಿತ ವೆನಿಸಿತು.
ಕೂಡಲೆ ರಾವಣನ ಮುಂದಿದ್ದ
 
ನೀಲ ಅವನ ರಥದ ಧ್ವಜದ ಮೇಲೇರಿ ಕುಳಿತುಕೊಂಡನು. ಒಮ್ಮೆ ಕುದುರೆ
ಗಳ ಮೇಲೆ, ಒಮ್ಮೆ ರಥದ ಮೇಲೆ, ಒಮ್ಮೆ ಧನುಸ್ಸಿನ ತುದಿಯಲ್ಲಿ ಹಾರಾಡಿ
ಮರುಳುಗೊಳಿಸಿದನು. ನನ್ನೊಡನೆ ಹೋರಾಡುತ್ತಿದ್ದ ಆ ಕಪಿ- ಯೆಲ್ಲಿ ? ಎಂದು
ರಾವಣನು ಅತ್ತಿತ್ತ ಕಣ್ಣು ಹಾಯಿಸುತ್ತಿದ್ದಾಗ ನೀಲನು ರಾವಣನ ತಲೆಗಳ
ಮೇಲೇರಿ ಕುಳಿತಿದ್ದನು. ರಾಕ್ಷಸ- ರಾಜನು ಕುಪಿತನಾದುದನ್ನು ಕಂಡು ನೀಲ
ಇನ್ನಷ್ಟು ಗರ್ಜಿಸಿ- ದನು. ರಾವಣ ದಿಟ್ಟೂಙ್ಮೂಢನಾದನು. ಕಪಿಗಳೆಲ್ಲ ಕೈ ತಟ್ಟಿ
ನಕ್ಕು- ಬಿಟ್ಟರು. ಇದು ರಾವಣನಿಗೆ ಸಹಿಸಲಾಗಲಿಲ್ಲ. ಅವನು ನೀಲನನ್ನು
- ನನ್ನು ಗದರಿಸಿ ನುಡಿದನು :
 

 
"ಮಂಗಗಳ ಬುದ್ಧಿಯನ್ನು ನನ್ನೆದುರು ತೋರಬೇಡ. ನಿನ್ನಲ್ಲಿ ಕಸುವಿರುವು
ದಾದರೆ ನನ್ನ ಬಾಣದಿಂದ ನಿನ್ನನ್ನು ಕಾಪಾಡಿಕೋ." ಎಂದು ಆಗೇಯಾಸ್ತ್ರ
ವನ್ನು ನೀಲನ ಮೇಲೆ ಪ್ರಯೋಗಿಸಿದನು. ನೀಲ ಅಗ್ನಿಯ ಮಗನಲ್ಲವೆ ! ಅಗ್ನಿ
ಸ್ವರೂಪನಲ್ಲವೆ? ಅವನಿಗೆ ಆಗೇಯಾಸ್ತ್ರ ಏನು ಮಾಡಬಲ್ಲದು ? ರಾವಣನ
ಶಿರಸ್ಸಿನಿಂದ ಕೆಳಗೆ ಬಿದ್ದರೂ ಅವನ ಮೈ ಅಗ್ನಿ ದಗ್ಧವಾಗಿರಲಿಲ್ಲ.
 

 
ರಾವಣ ರಾಮನೆಡೆಗೆ ನಡೆದನು. ನಡುದಾರಿಯಲ್ಲಿ ಲಕ್ಷ್ಮಣ ತಡೆದು
ನಿಲ್ಲಿಸಿದನು. "ನನ್ನ ಕಣ್ಣಿಗೆ ಬಿದ್ದೆಯಾ, ಇಲ್ಲಿಗೆ ನಿನ್ನ ಆಯುಸ್ಸು ಮುಗಿಯಿತು."
ಎಂದ ರಾವಣ. ಲಕ್ಷ್ಮಣ ಅದಕ್ಕೆ ಸಮರ್ಪಕವಾಗಿಯೇ ಉತ್ತರಿಸಿದನು :