This page has been fully proofread once and needs a second look.

ಸಂಗ್ರಹರಾಮಾಯಣ
 
ಲಂಕೇಶ್ವರನೂ ತಲೆ ತಗ್ಗಿಸಿದನು !
 

 
ಮಕರಾಕ್ಷನ ಮರಣದಿಂದ ದಶಕಂಠನು ದುಃಖಿತನೂ ಆದ; ಕುಪಿತನೂ
ಆದ. ಸೇನಾಸನ್ನಾಹವೆಲ್ಲ ನಡೆಯಿತು. ಸ್ವಯಂ ರಾವಣನೇ ಕದನ ಕಣ-
ಕ್ಕಿಳಿದನು. ರಾಜಾಲಂಕಾರಗಳಿಂದ ಅಲಂಕೃತನಾದ ಲಂಕಾನಾಥನನ್ನು ಹೊತ್ತ
ಭಾಸುರವಾದ ರಥ ಯುದ್ಧದ ಬೀದಿಯಲ್ಲಿ ಸಾಗಿತು. ರಾವಣನ ಕರ್ರಗಿನ
ಮೈಗೆ ಬೆಳ್ಕೊಗೊಡೆಯು ಒಪ್ಪವಿಟ್ಟಿತ್ತು. ಕಪಿಗಳು ರಾವಣನನ್ನು ಕಂಡೇ ಹೆದರಿ
ಓಡಿದರು ! ಹತ್ತು ತಲೆಗಳು; ಕೋಪದಿಂದ ಕಿಡಿ ಕಾರುವ ಇಪ್ಪತ್ತು ಕಣ್ಣುಗಳು;
ಮಹಾಸರ್ಪಗಳಂತೆ ತೊನೆಯುತ್ತಿರುವ ಇಪ್ಪತ್ತು ತೋಳುಗಳು ! ಈ ಅಪೂರ್ವಾ
ಕೃತಿಯ 'ಪ್ರಾಣಿ'ಯನ್ನು ಕಂಡು ಕಪಿಗಳಿಗೆ ಅಚ್ಚರಿಯೂ ಭಯವೂ ಜತೆಗೇ
 
ಉಂಟಾಯಿತು.
 
COSE
 

 
ಗಜ, ಗವಯ, ಗವಾಕ್ಷ, ಗಂಧಮಾದನ, ವೃಷ, ಕಣ್ಣಿತ್ಥನ ಈ ಆರು

ಮಂದಿ ಕಪಿಪ್ರವೀರರು ರಾವಣ ಸೇನೆಯನ್ನು ಸಂಹರಿಸತೊಡಗಿ ದರು. ಆದರೆ
ರಾವಣನ ಆರು ಬಾಣಗಳು ಅವರನ್ನು ಸಂಕಟ- ಕ್ಕೀಡುಮಾಡಿದವು.
 

 
ಮೈಂದ, ವಿವಿದ, ಜಾಂಬವಂತರು ಬಂಡೆಗಳನ್ನು ಅವನ ಮೇಲೆಸೆದರು.
ರಾವಣನು ಅವುಗಳನ್ನು ಭೇದಿಸಿ ಈ ಕಪಿವೀರ- ರನ್ನೂ ರಣಾಂಗಣಕ್ಕೆ ಕೆಡವಿದನು.
ಮುಂದೆಬಂದ ಅಂಗದನಿಗೂ ಇದೇ ಗತಿಯಾಯಿತು. ಹೆಚ್ಚೇನು ? ಕಪಿರಾಜ
ಸುಗ್ರೀವನಿಗೂ ರಾವಣನ ಪೆಟ್ಟಿನಿಂದ ಚೇತರಿಸಿಕೊಳ್ಳುವುದಾಗಲಿಲ್ಲ.
 

 
ಅನಂತರ ಹನುಮಂತನು ತೋಳನ್ನೆತ್ತಿ ರಾವಣನಿಗೆ ಒಂದು ಮೃದುವಾದ
ಪ್ರಹಾರವನ್ನಿತ್ತನು. ಅವನಿಗೆ ಆ ಪ್ರಹಾರವೇ ಅಸಹ್ಯವಾಯಿತು. ಅವನ
ಹತ್ತು ಬಾಯಿಗಳೂ ರಕ್ತವನ್ನು ಕಾರ- ತೊಡಗಿದವು. ಅದನ್ನು ಕಂಡವರು
ಲಾವಾರಸವನ್ನು ಸುರಿಯು- ತ್ತಿರುವ ಪರ್ವತದ ಗುಹೆಗಳನ್ನು ನೆನೆದುಕೊಂಡರು !
 

 
ಕಣ್ಣು ಕತ್ತಲೆ ಕವಿದಂತಾಗಿ ಕ್ಷಣಕಾಲ ಕುಕ್ಕರಿಸಿದ ರಾವಣ ತಟ್ಟನೆ
ಎದ್ದು ನಿಂತು ಅಚ್ಚರಿಯಿಂದ ನುಡಿದನು :
 

 
"ಹನುಮನ್ ! ನಿನ್ನ ಪೌರುಷ ಅದ್ಭುತವಾಗಿದೆ; ಅಪಾರ ವಾಗಿದೆ. ನನಗೆ
ಮೂರ್ಛೆ ಬರಿಸುವಂಥ ಪ್ರಹಾರವನ್ನು ಕೊಡು- ವುದು ಇನ್ನಾರಿಗೆ ಸಾಧ್ಯ !
ನಿನ್ನಂಥ ವೀರನು ಇನ್ನೊಬ್ಬನಿರ- ಲಾರನು !"