2023-03-15 15:35:54 by ambuda-bot
This page has not been fully proofread.
ಮಿಂಚಿನಬಳ್ಳಿ
ಪುತ್ರಶೋಕದಿಂದ ದುಃಖಿತನಾದ ರಾವಣ ತಾನೇ ಯುದ್ಧಕ್ಕೆ ಹೊರಟು
ನಿಂತನು. ಆಗ ಖರಾಸುರನ ಮಗನಾದ ಮಕರಾಕ್ಷನು ಮುಂದೆ ಬಂದು
ವಿಜ್ಞಾಪಿಸಿಕೊಂಡನು:
ಆಶ
"ಮಹಾರಾಜ ರಣಪಂಡಿತನಾದ ನನಗೆ ಅಪ್ಪಣೆಯಾಗಬೇಕು. ನನ್ನ
ತಂದೆಯ ವೈರಿಯಾದ ರಾಮಚಂದ್ರನಿಗೆ ಬುದ್ಧಿಗಲಿಸುವ ಸುಯೋಗವನ್ನು
ನನಗೆ ದಯಪಾಲಿಸಬೇಕು."
ರಾವಣನ ಒಪ್ಪಿಗೆಯನ್ನು ಪಡೆದು ಮಕರಾಕ್ಷನು ಕೊಳುಗುಳಕ್ಕಿಳಿದನು.
ಅವನ ಅನುಯಾಯಿಗಳಾದ ರಾಕ್ಷಸರೂ ಕಸಿಗಳ ಹೊಡೆತವನ್ನು ತಿನ್ನಲು
ಸಿದ್ಧರಾದರು. ಮಕರಾಕ್ಷನ ಬಾಣವನ್ನು ಎದುರಿಸುವುದು ಕಪಿಗಳಿಗೆ ಅಸಾಧ್ಯ
ವಾಯಿತು. ಲಕ್ಷ್ಮಣನ ಬಾಣಗಳನ್ನು ಕೂಡ ಲೆಕ್ಕಿಸದೆ ಅವನು ರಾಮನೆಡೆಗೆ
ಸಾಗಿ ಗರ್ಜಿಸಿದನು:
"ರಾಮಭದ್ರ ! ನನ್ನ ತಂದೆಯನ್ನು ಕೊಂದವನು ನೀನೇ ಅಲ್ಲವೆ ? ಅದಕ್ಕೆ
ತಕ್ಕ ಪ್ರತೀಕಾರವನ್ನು ಮಾಡಲು ನಾನು ಬಂದಿದ್ದೇನೆ. ನೀನು ಮಾಡಿದ
ಉಪಕಾರದ ಋಣ ತೀರಿಸಲು ಬಂದಿದ್ದೇನೆ."
ರಾಮಚಂದ್ರನೂ ನಗುತ್ತಲೆ ಉತ್ತರಿಸಿದನು:
"ನನ್ನ ಬಾಣಗಳಿಗೆ ಬಲಿಯಾದ ಮೇಲೆ ನೀನು ನಿನ್ನ ಮಾಂಸಗಳಿಂದ
ರಣಹದ್ದುಗಳ ಋಣವನ್ನು ಮಾತ್ರ ತೀರಿಸುವುದು ಸಾಧ್ಯ."
ಇಬ್ಬರೂ ಅನ್ನೋನ್ಯವಾಗಿ ಬಾಣಗಳನ್ನು ಸುರಿಸತೊಡಗಿದರು. ಮಕ
ರಾಕ್ಷನ ಬಾಣಗಳನ್ನೆಲ್ಲ ನಡುದಾರಿಯಲ್ಲಿ ರಾಮನ ಬಾಣಗಳು ಮುಗಿಸಿಬಿಡು
ತಿದ್ದವು. ರಾಮಚಂದ್ರ ಇನ್ನೊಂದು ಬಾಣವಂತೂ ಶತ್ರುವಿನ ರಥ, ಸಾರಥಿ
ಗಳನ್ನೂ ನಾಶಗೊಳಿಸಿತು. ಆಗ ಮಕರಾಕ್ಷನು ಶೂಲಧಾರಿಯಾಗಿ ಆಕಾಶಕ್ಕೆ
ನೆಗೆದನು. ರಾಮನ ಬಾಣ ಅವನ ಶೂಲವನ್ನು ಮಾತ್ರವಲ್ಲದೆ ತಲೆಯನ್ನೂ
ಕತ್ತರಿಸಿತು ! ಇತ್ತ ಮಕರಾಕ್ಷನ ಸೈನಿಕರೂ ಕಸಿಗಳ ಪೆಟ್ಟನ್ನು ತಾಳಲಾರದೆ
ಜೀವ ತೊರೆಯುತ್ತಿದ್ದರು. ಬದುಕಿ ಉಳಿದವರು ಕಾಲಿಗೆ ಬುದ್ಧಿ ಹೇಳಿದರು.
ಭಗವಂತನ ಲೀಲೆಯನ್ನು ಕಾಣಲು ಮುಗಿಲಲ್ಲಿ ಮುತ್ತಿದ ದೇವತೆಗಳೂ
ಮುನಿಗಳೂ ಭಕ್ತಿ ಪುಲಕಿತರಾಗಿ ಕೈಮುಗಿದರು.