This page has been fully proofread once and needs a second look.

ಸಂಗ್ರಹರಾಮಾಯಣ
 
ಮತ್ತೆ ಒಂಬತ್ತು ಬಾಣಗಳನ್ನು ಎಸೆದನು. ಲಕ್ಷ್ಮಣನು ಅವುಗಳ- ನ್ನೂ ತುಂಡ
ರಿಸಿದನು. ಮತ್ತೆ ಮಹಾಶರವೊಂದನ್ನು ಅತಿಕಾಯ ಪ್ರಯೋಗಿಸಿದನು. ಅದು
ಲಕ್ಷ್ಮಣನ ಎದೆಯನ್ನು ಗಾಯಗೊಳಿ- ಸಿತು. ಆದರೂ ಅವನು ಕಂಗೆಡದೆ ಶತ್ರು
ವಿನ ಮೇಲೆ ಬಾಣಗಳ ಮಳೆಯನ್ನೆ ಸುರಿಸಿದನು. ಪ್ರತಿಯಾಗಿ ಅತಿಕಾಯನೂ
ಅಸಂಖ್ಯ ಬಾಣಗಳನ್ನು ಪ್ರಯೋಗಿಸಿದನು. ಮುಗಿಲು ಬಾಣಗಳಿಂದ ಮುಚ್ಚಿ

ಕತ್ತಲೆ ಕವಿಯಿತು.
 
C62
 

 
ಲಕ್ಷ್ಮಣನು ಆಗೇಗ್ನೇಯ ಮಂತ್ರವನ್ನು ಜಪಿಸಿ ಬಾಣವನ್ನು ಹೂಡಿದನು.
ಮಂತ್ರ ಪ್ರಭಾವದಿಂದಲೇ ಅತಿಕಾಯನು ಅದನ್ನು ಶಾಂತಗೊಳಿಸಿ ಯಾಮ್ಯಾಸ್ತ್ರ
ವನ್ನು ಲಕ್ಷ್ಮಣನ ಮೇಲೆ ಪ್ರಯೋಗಿಸಿ ದನು. ಲಕ್ಷ್ಮಣನ ವಾಯವ್ಯಾಸ್ತ್ರ ಅದನ್ನೂ
ಪರಾಭವಗೊಳಿಸಿತು. ಹೀಗೆ ಹೊತ್ತು ಕಳೆವುದು ಸೌಮಿತ್ರಿಗೆ ಸರಿಬರಲಿಲ್ಲ.
ಅವನು ಹರಿತವಾದ ಬಾಣಗಳಿಂದ ಅತಿಕಾಯನ ತಲೆ-ತೋಳುಗಳನ್ನು ಕತ್ತ
ರಿಸಿಬಿಟ್ಟನು. ಆದರೆ ಅಚ್ಚರಿ ! ಅತಿಕಾಯನು ಸಾಯಲಿಲ್ಲ. ಒಂದು ತಲೆಯ
ಬದಲು ಎರಡು ತಲೆಗಳು. ಎರಡು ತೋಳುಗಳ ಬದಲು, ನಾಲ್ಕು ತೋಳುಗಳೂ
ಮೂಡಿವೆ. ಅವುಗಳನ್ನೂ ಕತ್ತರಿಸಿದರೆ ಮತ್ತೆ ಇಮ್ಮಡಿಯಾಗಿ ಬೆಳೆಯುತ್ತಿದ್ದವು.
ಬಿಟ್ಟ ಬಾಣ- ಗಳು ಅವನ ಮೈಯಲ್ಲಿ ಮರಿಯಿಡುತ್ತಿದ್ದುವೇನೊ !
 

 
ಸೌಮಿತ್ರಿಗೆ ಬಗೆಹರಿಯದ ಸಮಸ್ಯೆಯಾಯಿತು. ಈ ಪಾಪಿಯನ್ನು
- ಯನ್ನುಕೊಲ್ಲುವ ಬಗೆ ಹೇಗೆ ? ಶತ್ರುವನ್ನು ಸೋಲಿಸಲಾರದೆ ಕೈ ಚೆಲ್ಲಿ ಕುಳಿತು
ಕೊಳ್ಳುವುದೆ ? ವಾಯುದೇವನು ಅಶರೀರನಾಗಿ ಆಕಾಶದಲ್ಲಿ ನುಡಿದ ಮಾತು
ಈ ಸಮಸ್ಯೆಯನ್ನು ಪರಿಹರಿಸಿತು:
 

 
"ಲಕ್ಷ್ಮಣ ! ಬ್ರಹ್ಮಾಸ್ತ್ರದಿಂದಲ್ಲದೆ ಬೇರೆ ಅಸ್ತ್ರಗಳಿಂದ ಇವನಿಗೆ ಸಾವಿಲ್ಲ.
ಬ್ರಹ್ಮಾಸ್ತ್ರವನ್ನು ಹೂಡು."
 

 
ಪ್ರಾಣದೇವನು ನಡೆಸಿದ ಈ ಚಮತ್ಕಾರ ಅತಿಕಾಯನಿಗೆ ತಿಳಿಯಲೇ
ಇಲ್ಲ. ಲಕ್ಷ್ಮಣನ ಬ್ರಹ್ಮಾಸ್ತ್ರ ಪರಿವಾರ ಸಮೇತನಾದ ಅತಿಕಾಯನ್ನು
ನನ್ನು ಸುಟ್ಟು ಬಿಟ್ಟಿತು. ಶತ್ರುವಿಜಯದಿಂದ ಸಂತಸ ಗೊಂಡ ಲಕ್ಷ್ಮಣನು ರಾಮನೆಡೆಗೆ
ಬಂದು ಕಾಲಿಗೆರಗಿದನು. ಲಕ್ಷ್ಮಣನು ರಾಮಚಂದ್ರನ ಪ್ರೇಮಾಲಿಂಗನವನ್ನು
ಪಡೆವ ಭಾಗ್ಯವಂತನಾದನು.