This page has been fully proofread once and needs a second look.

ಮಿಂಚಿನಬಳ್ಳಿ
 
ಕಪಿಗಳನ್ನು ಪೀಡಿಸುತ್ತ ಮುನ್ನುಗ್ಗುತ್ತಿರುವ ಯುದ್ದೋನ್ಮತ್ತನೂ,
ಮತ್ತನೂ ಮಾರುತಿಯ ಒಂದೇ ಏಟಿಗೆ ಜೀವಕಳೆದುಕೊಂಡರು ! ಈಗ ತ್ರಿಶಿರನ
ಸರದಿ. ಮೊದಲು ಮಾರುತಿ ಅವನ ವಾಹನವನ್ನು ಪುಡಿಮಾಡಿದನು. ಅವನ
ಕೈಯಲ್ಲಿದ್ದ ಚಾಪವನ್ನೂ ಖಡ್ಗವನ್ನೂ ಕಸಿದುಕೊಂಡು ಮೊದಲ ಸೋದರ ರೆಡೆಗೆ
ಅವನನ್ನೂ ಕಳಿಸಿಕೊಟ್ಟನು. ತ್ರಿಶಿರನ ಮೂರು ಶಿರಸ್ಸು- ಗಳೂ ನೆಲಕ್ಕುರುಳಿ-
ದವು !
 
AL
 

 
ರಾಮಭದ್ರನ ಪರಮ ಪ್ರಿಯನಾದ ಮಾರುತಿಯಿಂದ ಕಪಿಗಳು ಜಯದ
ಪಥವನ್ನು ಕಂಡರು; ಅವನ ಸಿಂಹನಾದದಲ್ಲಿ ಭಗವಂತನ ಗುಣಗಾನವನ್ನು
ಕಂಡರು.
 

 
ಅತಿಕಾಯ-ಮಕರಾಕ್ಷರೂ ಮಡಿದರು
 

 
ಸೋದರರ ಸಾವು ಅತಿಕಾಯನಿಗೆ ಸಂತಾಪವನ್ನುಂಟು ಮಾಡಿತು.
ಅವನು ಬ್ರಹ್ಮನು ಕರುಣಿಸಿದ ರಥವನ್ನೇರಿ ಬಂದನು. ಬ್ರಹ್ಮನ ವರದಿಂದ
ಮತ್ತೇರಿದ ಅತಿಕಾಯನ ಆಟೋಪವೇ ಭಯಾನಕವಾಗಿತ್ತು. ಕುಮುದ-ವಿವಿದ
ಮೈಂದ ಮೊದಲಾದ ಎಲ್ಲ ಕಪಿ ಪ್ರಧಾನರನ್ನೂ ಸೋಲಿಸಿ, ಅವನು ನೇರಾಗಿ
ರಾಮ- ನಿದ್ದೆಡೆಗೆ ನಡೆದನು. ನಡುದಾರಿಯಲ್ಲಿ ಲಕ್ಷ್ಮಣನ ಶರವರ್ಷ ಅವನನ್ನು
ತಡೆಯಿತು. ಸಿಟ್ಟುಗೊಂಡ ಅತಿಕಾಯ ಲಕ್ಷ್ಮಣನನ್ನು ಗದರಿಸಿದನು:
 

 
"ಸುಮಿತ್ರೆಯ ಮಗನೆ ! ನೀನಿನ್ನೂ ಹಸುಳೆ, ನಿನ್ನಲ್ಲಿ ತ್ರಾಣವೂ ಇಲ್ಲ.
ಅಸ್ತ್ರವಿದ್ಯೆಯ ಪರಿಜ್ಞಾನವೂ ಇಲ್ಲ. ಹೊರಟುಹೋಗು ನನ್ನೆದುರಿನಿಂದ.
ಹರೆಯದಲ್ಲಿ ಸಾಯಬೇಕೆಂದು ಹರಕೆ ಹೊತ್ತಿ- ರುವೆಯೇನು ?"
 

 
"ನಾನು ಸಣ್ಣವನಿರಬಹುದು. ಆದರೆ ನನ್ನ ಪರಾಕ್ರಮ ಸಣ್ಣದಲ್ಲ. ಓ
ಅತಿಕಾಯನೆ, ದೇಹದ ಉದ್ದಗಲಗಳಿಂದ ವ್ಯಕ್ತಿಯ ಶಕ್ತಿಯನ್ನಳೆವುದಲ್ಲ.
ಬಾಲಕ ಟುವಾದ ವಾಮನನೆ ಬಲಿ- ಯೆದುರು ತ್ರಿವಿಕ್ರಮನಾಗಲಿಲ್ಲವೆ ? ನನ್ನ
ಕೈಯಲ್ಲಿ ಜೀವ ಬಿಡುವ ಮುನ್ನ ನಿನ್ನ ಪರಾಕ್ರಮದ ಪ್ರದರ್ಶನ ನಡೆಯಲಿ."
 

 
ಅತಿಕಾಯನೆಸೆದ ಆರು ಬಾಣಗಳನ್ನೂ ಅರ್ಧ ಮಾರ್ಗದಲ್ಲಿ ಲಕ್ಷ್ಮಣನು
ತುಂಡರಿಸಿ ಅವನೆಡೆಗೆ ಒಂದು ನಿಶ್ಚಿತವಾದ ಬಾಣವ- ನ್ನೆಸೆದನು. ಅದು ಅತಿ
ಕಾಯನ ಹಣೆಯಲ್ಲಿ ನಾಟಿತು. ಆದರೂ ಅವನು ಹೇಗೋ ಚೇತರಿಸಿಕೊಂಡು