This page has been fully proofread once and needs a second look.

ಸಂಗ್ರಹರಾಮಾಯಣ
 
ಆದರೆ ಕಾಲಪುರುಷನಂತೆ ಎದುರು ಬಂದು ನಿಂತ ನರಾಂತಕನನ್ನು
ಕಂಡು ಕಪಿಗಳೂ ಕಂಗಾಲಾದರು. ಅವನೆಸೆದ ಒಂದು ಈಟಿ ನೂರಾರು
 
೧೫
 
ಮಂಗಗಳನ್ನು ಕಂಗೆಡಿಸಿತು. ಒಡನೆ ಸುಗ್ರೀವನು ನರಾಂತಕನೊಡನೆ
ಹೋರಾಡಲು ಅಂಗದನನ್ನು ಕಳಿಸಿದನು. ಅಂಗದ ಮುಂದೆ ಬಂದು
ಗರ್ಜಿಸಿದನು :
 
*

 
"
ದುರ್ಬಲರ ಮೇಲೇಕೆ ಪೌರುಷವನ್ನು ತೋರಿಸುವೆ ? ನಿನ್ನ ಈಟಿ ನನ್ನ
ಎದೆಯ ಮೇಲೆರಗಲಿ,. "
 

 
ನರಾಂತಕನು ಬಲವಾಗಿ ಬೀಸಿದ ಈಟಿ ಅಂಗದನ ಎದೆಗೆ ನಾ
ಟಿ
ಮುರಿದು ಬಿತ್ತು. ಜತೆಗೆ ಅಂಗನ ಪ್ರಹಾರವನ್ನು ಸಹಿಸಲಾರದ ನರಾಂತಕನ
ಕುದುರೆಯೂ ಕುಸಿದುಬಿತ್ತು. ನರಾಂತಕನು ಬಿಗಿದ ಏಟು ಅಂಗದನಿಗೆ
 
ಮೂರ್ಛೆ ಬರಿಸಿದರೂ ಕೂಡಲೆ ಅವನು ಎಚ್ಚೆತ್ತು, ಶತ್ರುವಿಗೆ ಪ್ರತಿಪ್ರಹಾರ-
ವನ್ನಿತ್ತನು. ನರಾಂತಕನು ಸಿಡಿದೆದ್ದು ಖಡ್ಗವನ್ನು ಝಳಪಿಸಿದನು. ಅಂಗದನು
ಅದನ್ನು ಕಸಿದುಕೊಂಡು ಆ ಕತ್ತಿಯಿಂದಲೇ ನರಾಂತಕನನ್ನು ಅಂತಕನೆಡೆಗೆ
ಕಳಿಸಿದನು.
 

 
ನರಾಂತಕನ ಸಾವಿನಿಂದ ಕೆರಳಿದ ದೇವಾಂತಕನನ್ನು ಕಂಡು ಜಾಂಬ,
ವಂತನೇ ಮೊದಲಾದ ಮಹಾವೀರ ಕಾತರರಾದರು ! ಅಂಗದನೆಸೆದ
 
ಎಲ್ಲ ಮರಗಳನ್ನೂ ದೇವಾಂತಕನು ಬಾಣಗಳಿಂದ ಭೇದಿಸಿ ಅಂಗದನನ್ನೂ
ಗಾಸಿಗೊಳಿಸಿದನು. ಆಗ ಸುಗ್ರೀವನು ಮರಗಳಿಂದ ತುಂಬಿದ ದೊಡ್ಡ ಬೆಟ್ಟ-
ವೊಂದನ್ನೆ ಕಿತ್ತು ತಂದನು. ದೇವಾಂತಕನ ಒಂದು ಬಾಣದಿಂದ ಬೆಟ್ಟ ಮಣ್ಣು
ಪಾಲಾಯಿತು. ಇನ್ನೊಂದು ಬಾಣ ಸುಗ್ರೀವನ ಎದೆಗೆ ನಾಟಿ ಅವನನ್ನು
ಎಚ್ಚರ ತಪ್ಪಿಸಿತು !
 

 
ದೇವಾಂತಕನ ಅಸಾಧಾರಣವಾದ ಪರಾಕ್ರಮವನ್ನು ಕಂಡು ಮಾರು-
ತಿಯೆ ಅವನಿಗೆ ಯುದ್ಧಾ ಹ್ವಾನವನ್ನಿತ್ತನು. ದೇವಾಂತಕನು ಮುನ್ನುಗ್ಗುತ್ತಿರು
ವಂತೆ ಅವನ ರಥ, ಕುದುರೆ, ಸಾರಥಿ, ಧನಸ್ಸು ಎಲ್ಲವನ್ನೂ ಮಾರುತಿ ಪುಡಿ-
ಮಾಡಿದನು. ಆಗ ದೇವಾಂತಕನು ಖಡ್ಗವನ್ನೆತ್ತಿಕೊಂಡನು. ಅವನನ್ನು ತೀರಿ
ಸಲು ಮಾರುತಿಗೆ ಎಷ್ಟು ಹೊತ್ತು ? ಕ್ಷಣಾರ್ಧದಲ್ಲಿ ಅವನನ್ನು ನೆಲಕ್ಕುರುಳಿಸಿ
ಅವನ ನೆತ್ತಿಯನ್ನು ತುಳಿದು ನಿಂತನು. ದೇವತೆಗಳು, ಕಪಿಗಳು ಅವನನ್ನು

ಕಣ್ಣುಂತುಂ ಕಂಡು ಮನವಾಸಾರೆ ಹರಸಿದರು.