2023-03-15 15:35:54 by ambuda-bot
This page has not been fully proofread.
ಸಂಗ್ರಹರಾಮಾಯಣ
ಆದರೆ ಕಾಲಪುರುಷನಂತೆ ಎದುರು ಬಂದು ನಿಂತ ನರಾಂತಕನನ್ನು
ಕಂಡು ಕಪಿಗಳೂ ಕಂಗಾಲಾದರು. ಅವನೆಸೆದ ಒಂದು ಈಟಿ ನೂರಾರು
೧೫
ಮಂಗಗಳನ್ನು ಕಂಗೆಡಿಸಿತು. ಒಡನೆ ಸುಗ್ರೀವನು ನರಾಂತಕನೊಡನೆ
ಹೋರಾಡಲು ಅಂಗದನನ್ನು ಕಳಿಸಿದನು. ಅಂಗದ ಮುಂದೆ ಬಂದು
ಗರ್ಜಿಸಿದನು :
* ದುರ್ಬಲರ ಮೇಲೇಕೆ ಪೌರುಷವನ್ನು ತೋರಿಸುವೆ ? ನಿನ್ನ ಈಟಿ ನನ್ನ
ಎದೆಯ ಮೇಲೆರಗಲಿ, "
ನರಾಂತಕನು ಬಲವಾಗಿ ಬೀಸಿದ ಈಟ ಅಂಗದನ ಎದೆಗೆ ನಾಟ
ಮುರಿದು ಬಿತ್ತು. ಜತೆಗೆ ಅಂಗವನ ಪ್ರಹಾರವನ್ನು ಸಹಿಸಲಾರದ ನರಾಂತಕನ
ಕುದುರೆಯೂ ಕುಸಿದುಬಿತ್ತು. ನರಾಂತಕನು ಬಿಗಿದ ಏಟು ಅಂಗದನಿಗೆ
ಮೂರ್ಛ ಬರಿಸಿದರೂ ಕೂಡಲೆ ಅವನು ಎಚ್ಚತ್ತು, ಶತ್ರುವಿಗೆ ಪ್ರತಿಪ್ರಹಾರ-
ವನ್ನಿತ್ತನು. ನರಾಂತಕನು ಸಿಡಿದೆದ್ದು ಖಡ್ಗವನ್ನು ಝಳಪಿಸಿದನು. ಅಂಗದನು
ಅದನ್ನು ಕಸಿದುಕೊಂಡು ಆ ಕತ್ತಿಯಿಂದಲೇ ನರಾಂತಕನನ್ನು ಅಂತಕನೆಡೆಗೆ
ಕಳಿಸಿದನು.
ನರಾಂತಕನ ಸಾವಿನಿಂದ ಕೆರಳಿದ ದೇವಾಂತಕನನ್ನು ಕಂಡು ಜಾಂಬ,
ವಂತನೇ ಮೊದಲಾದ ಮಹಾವೀರ ಕಾತರರಾದರು ! ಅಂಗದನೆಸೆದ
ಎಲ್ಲ ಮರಗಳನ್ನೂ ದೇವಾಂತಕನು ಬಾಣಗಳಿಂದ ಭೇದಿಸಿ ಅಂಗದನನ್ನೂ
ಗಾಸಿಗೊಳಿಸಿದನು. ಆಗ ಸುಗ್ರೀವನು ಮರಗಳಿಂದ ತುಂಬಿದ ದೊಡ್ಡ ಬೆಟ್ಟ-
ವೊಂದನ್ನೆ ಕಿತ್ತು ತಂದನು. ದೇವಾಂತಕನ ಒಂದು ಬಾಣದಿಂದ ಬೆಟ್ಟ ಮಣ್ಣು
ಪಾಲಾಯಿತು. ಇನ್ನೊಂದು ಬಾಣ ಸುಗ್ರೀವನ ಎದೆಗೆ ನಾಟಿ ಅವನನ್ನು
ಎಚ್ಚರ ತಪ್ಪಿಸಿತು !
ದೇವಾಂತಕನ ಅಸಾಧಾರಣವಾದ ಪರಾಕ್ರಮವನ್ನು ಕಂಡು ಮಾರು-
ತಿಯೆ ಅವನಿಗೆ ಯುದ್ಧಾ ಹ್ವಾನವನ್ನಿತ್ತನು. ದೇವಾಂತಕನು ಮುನ್ನುಗ್ಗುತ್ತಿರು
ವಂತೆ ಅವನ ರಥ, ಕುದುರೆ, ಸಾರಥಿ, ಧನಸ್ಸು ಎಲ್ಲವನ್ನೂ ಮಾರುತಿ ಪುಡಿ-
ಮಾಡಿದನು. ಆಗ ದೇವಾಂತಕನು ಖಡ್ಗವನ್ನೆತ್ತಿಕೊಂಡನು. ಅವನನ್ನು ತೀರಿ
ಸಲು ಮಾರುತಿಗೆ ಎಷ್ಟು ಹೊತ್ತು ? ಕ್ಷಣಾರ್ಧದಲ್ಲಿ ಅವನನ್ನು ನೆಲಕ್ಕುರುಳಿಸಿ
ಅವನ ನೆತ್ತಿಯನ್ನು ತುಳಿದು ನಿಂತನು. ದೇವತೆಗಳು, ಕಪಿಗಳು ಅವನನ್ನು
ಕಣ್ಣುಂಬಕಂಡು ಮನವಾರೆ ಹರಸಿದರು.