This page has been fully proofread once and needs a second look.

ಮಿಂಚಿನಬಳ್ಳಿ
 
ನಿಕುಂಭನು ತನ್ನ ಕೈಯಲ್ಲಿದ್ದ ಭಾರಿ ಪ್ರಮಾಣದ ಕಬ್ಬಿಣದ ಸಲಾಕೆ
ಯನ್ನು ತಿರುಗಿಸಿ ಮಾರುತಿಯ ಎದೆಗೆ ಹೊಡೆದನು. ವಜ್ರ ಸಾರನಾದ ಪವಮಾನ
ತನಯನ ಎದೆಗೆ ಕಬ್ಬಿಣದ ಪೆಟ್ಟು ನಾಟು ವುದೆ ? ಸಲಾಕೆಯೆ ಮುರಿದು
ಕೆಳಗೆ ಬಿತ್ತು. ಮಾರುತಿಯ ಬಲ ವಾದ ಮುಷ್ಟಿ ಪ್ರಹಾರದಿಂದ ನಿಕುಂಭ
ಮೂರ್ಛಿತನಾಗಿ ಬಿದ್ದ. ಕ್ಷಣದಲ್ಲಿ ಅವನು ಚೇತರಿಸಿಕೊಂಡು ಹನುಮಂತನನ್ನು

ಹೆಗಲಿಗೇರಿಸಿ ಓಡತೊಡಗಿದನು. ಇದನ್ನು ಕಂಡು ಗಾವಿಲರಾದ ಕಪಿಗಳ
ಕೂಗು-, ಮಾರುತಿ ನಿಕುಂಭನನ್ನು ಹೊಡೆದು ಬೀಳಿಸಿದಾಗ- ಪರಿಹಾಸದಲ್ಲಿ
ಕೊನೆಗೊಂಡಿತು.
 
೧೮೪
 

 
ರಣಯಜ್ಞದಲ್ಲಿ ನಿಕುಂಭನೆಂಬ ಪಶುವನ್ನು ಹೋಮಿಸಿ ಹನುಮಂತನು
ಯಕ್ಷೇ
ಯಜ್ಞೇಶ್ವರನನ್ನು ಸಂತಸಗೊಳಿಸಿದನು. ಕುಂಭಕರ್ಣನಿಗೆ ಸಮಬಲನೆನಿಸಿದ
ನಿಕುಂಭನ ಮರಣದಿಂದ ರಾಕ್ಷಸಕುಲ ಗೋಳಿಟ್ಟಿತು. ದೇವಕುಲ ಸಂತಸದಲ್ಲಿ
ನಲಿದಾಡಿತು. ಹನುಮಂತನನ್ನು ಲೋಕವೇ ಕೊಂಡಾಡಿತು.
 

 
ಸುಪ್ತಘ್ನ, ಯಜ್ಞಕೋಪ, ಮಹಾಪಾರ್ಶ್ವ, ಮಹೋದರ, ಮಹಾ-

ಕಾಯ, ಶುಕ, ಸಾರಣ ಮೊದಲಾದ ಮುಖ್ಯ ಸೇನಾನಾಯಕರೆಲ್ಲ ರಾಮನ
ಬಾಣಕ್ಕೆ ಅಸು ನೀಗಿದರು. ಸಿಂಹದ ಬಾಯಿಗೆ ಸಿಕ್ಕ ಮೃಗಗಳಂತಾಯಿತು
ರಾಕ್ಷಸರ ಪಾಡು !
 

 
ತನ್ನ ಸೇನೆ ಬಡವಾಗುತ್ತಿರುವದನ್ನು ಕಂಡು ರಾವಣ ಚಿಂತಾತುರ-
ನಾದನು. ಆಗ ಅವನ ಮಕ್ಕಳಾದ ತ್ರಿಶಿರ, ಅತಿಕಾಯ, ದೇವಾಂತಕ,
ನರಾಂತಕರು ತಂದೆಯನ್ನು ಸಂತೈಸಿ ಯುದ್ಧಕ್ಕೆ ತೆರಳಿದರು. ರಾವಣನ
ಸೋದರರಾದ ಮತ್ತ-ಯುದ್ಧೋನ್ಮತ್ತ ಎಂಬಿಬ್ಬರು ಅವರ ಜತೆಗಾರರಾದರು.
ಈ ವೀರರ ನೇತೃತ್ವದಲ್ಲಿ ದೈತ್ಯಸೇನೆ ಕಪಿಗಳನ್ನು ಪೀಡಿಸತೊಡಗಿತು.
 
ಕಸಿ

 
ಕಪಿ
ಗಳಿಗೆ ಕೈಗೆ ಸಿಕ್ಕಿದ್ದೇ ಆಯುಧ ! ಆನೆಗಳ ಗುಂಪಿನಮೇಲೆ ಆನೆ
ಗಳನ್ನೇ ಎತ್ತಿ ನೆಗೆದರು. ಕುದುರೆಗಳಮೇಲೆ ಕುದುರೆಗಳನ್ನು, ರಥಗಳಮೇಲೆ
ರಥಗಳನ್ನು ಬಡಿದು ಅಪ್ಪಳಿಸಿದರು. ಒಬ್ಬ ರಾಕ್ಷಸ- ನನ್ನು ಕೊಲ್ಲಲಿಕ್ಕೆ ಇನ್ನೊಬ್ಬ
ರಾಕ್ಷಸನೇ ಆಯುಧವಾದನು ! ಹೀಗೆ ಶತ್ರುಗಳನ್ನೆ ಆಯುಧವಾಗಿಯೂ ಬಳಸಿ
ಕೊಂಡು ಶತ್ರುಗಳ ವಂಶವನ್ನು ನಿರ್ವಂಶ ಮಾಡಿದ ಕಪಿಗಳ ಯುದ್ಧ ಕೌಶಲ

ಅಪೂರ್ವವಾಗಿತ್ತು !