2023-03-15 15:35:54 by ambuda-bot
This page has not been fully proofread.
ಸಂಗ್ರಹರಾಮಾಯಣ
ಬಿದ್ದು ದನ್ನು ಕಂಡು ಅಂಗದನು ಮುಂದೆ ಬಂದನು. ಅವನು ಕುಂಭನ ಬಾಣಗಳ
ಪೆಟ್ಟನ್ನು ಲಕ್ಷಿಸದೆ ಪರ್ವತ-ವೃಕ್ಷಗಳನ್ನು ಕುಂಭನ ಮೇಲೆಸೆದ. ಕುಂಭ ಬಾಣ
ಗಳಿಂದಲೆ ಅವುಗಳನ್ನು ಭೇದಿಸಿದನು. ಮೈಯೆಲ್ಲ ನೆತ್ತರು ಹರಿದರೂ ಲಕ್ಷಿಸದೆ
ಅಂಗದನು ಮರವೊಂದನ್ನು ಕಿತ್ತು ಶತ್ರುವಿನೆಡೆಗೆ ಎಸೆದನು. ಕುಂಭನು ಅದನ್ನೂ
ಕತ್ತರಿಸಿ ಅಂಗದನನ್ನು ಬಾಣಗಳಿಂದ ಮೋಹಗೊಳಿಸಿದನು.
ರಣಾಂಗಣದಲ್ಲಿ ಮೂರ್ಛಿತನಾಗಿ ಬಿದ್ದಿರುವುದನ್ನು ಕಂಡು ಕಪಿಕುಲ ಕಂಗಾಲಾಗಿ
ಕೂಗಿತು ! ಸುಷೇಣ-ಜಾಂಬುವಂತ-ನೀಲ-ನಲ-ತಾರ ಮೊದಲಾದವರೆಲ್ಲ
ಕುಂಭನೊಡನೆ ಹೋರಾಡಹೋಗಿ ಸೋತು ಮರಳಿದರು !
ಯುವರಾಜ
ಗಿಲಿಪಿ
ಕಪಿಸೇನೆ ವ್ಯಾಕುಲವಾದುದನ್ನು ಕಂಡು ಸುಗ್ರೀವನು ತಾನೇ ಯುದ್ಧಕ್ಕೆ
ಆಣಿಯಾದನು. ಸುಗ್ರೀವನೆಸೆದ ವೃಕ್ಷಗಳನ್ನೂ ಕುಂಭನು ಕತ್ತರಿಸದೆ ಬಿಡಲಿಲ್ಲ.
ಕುಪಿತನಾದ ಸುಗ್ರೀವ ಅವನ ಕೈಯಿಂದ ಕತ್ತಿಯನ್ನು ಕಸಿದುಕೊಂಡು ಅದನ್ನು
ತುಂಡರಿಸಿದನು.
ಈ ವೀರರಿಬ್ಬರ ಹೋರಾಟ ಪ್ರೇಕ್ಷಣೀಯವಾಗಿತ್ತು. ಕೊನೆಗೆ ಸುಗ್ರೀ
ವನು ಕುಂಭನನ್ನು ಎತ್ತಿ ಕಡಲಿಗೆಸೆದನು. ಕಡಲಿನ ನೀರು ಉಕ್ಕಿ ದಡಮೂರಿ
ಹರಿಯಿತು ! ಕುಂಭನು ಕಡಲಿನಿಂದ ಎದ್ದು ಬಂದು ಮತ್ತೆ ಹೋರಾಡ
ಬಂದನು. ಆದರೆ ಸೋತು ಸುಣ್ಣವಾಗಿದ್ದ ಅವನಿಗೆ ಸುಗ್ರೀವನ ಒಂದು ಪಟ್ಟಿ
ಸಾಕಾಯಿತು. ನೆಲಕ್ಕೆ ಉರುಳಿದ ಅವನು ಮತ್ತೆ ಏಳಲಿಲ್ಲ.
ಸೋದರನ ಸಾವಿನಿಂದ ಕುಪಿತನಾದ ನಿಕುಂಭ ಬೆಂಕಿಯಂತೆ ಉರಿಯು
ತಲೆ ರಣಾಂಗಣಕ್ಕೆ ಬಂದನು. ಅವನ ಸಂರಂಭವನ್ನು ಕಂಡ ಸುಗ್ರೀವನೂ ಸಹ
ನೂರು ಮಾರು ದೂರ ನೆಗೆದನಂತೆ ! ಉಳಿದ ಕಪಿಗಳ ಪಾಡೇನು ? ರುದ್ರನ
ವರದಿಂದ ಸಾವಿಲ್ಲದ ನಿಕುಂಭನನ್ನು ಕಂಡು ದೇವತೆಗಳೂ ದಿಗಿಲಾದರು.
ವಿಶ್ವವೇ ವಿತ್ರಸ್ತವಾಯಿತು.
ಕಪಿಸೇನೆಗೆ ಒದಗಿದ ವಿಷಾದವನ್ನರಿತ ಹನುಮಂತ ನಿಕುಂಭನ ಎದುರು
ನೆಗೆದು ತನ್ನ ವಿಶಾಲವಾದ ಎದೆಯನ್ನು ತೋರಿಸಿ ನುಡಿದನು:
"ವೀರನಾದ ನಿಕುಂಭನೆ! ನಿನ್ನನ್ನು ಕಂಡೇ ಬೆದರುವ ಈ ಕಪಿಗಳ ಗೋಜು
ಬಿಡು. ಇದೊ, ಇಲ್ಲಿದೆ ನಿನ್ನ ಪ್ರಹಾರಕ್ಕೆ ಸರಿಯಾದ ತಾಣ.
ಈ ಉಬ್ಬಿದ
ಎದೆಯ ಮೇಲೆ ನಿನ್ನ ಆಯುಧದ ಬಲಪರೀಕ್ಷೆಯಾಗಲಿ."