This page has been fully proofread once and needs a second look.

ಮಿಂಚಿನಬಳ್ಳಿ
 
ಮತ್ತೆ ಕಪಿಸೇನೆ-ರಾಕ್ಷಸ ಸೇನೆಗಳು ಹೊಡೆದಾಡಿಕೊಂಡವು. ಅದ್ಭುತವಾದ
ಯುದ್ಧ ನಡೆಯಿತು. ಕಂಪನನನ್ನು ಅಂಗದ ಎದುರಿಸಿದನು. ಒಬ್ಬನಿಗೆ ಗದೆ
ಆಯುಧ, ಇನ್ನೊಬ್ಬನಿಗೆ ಗಿರಿ ಶೃಂಗಗಳು ! ಆದರೆ ಕಂಪನನ ಗದೆಗಿಂತಲೂ
ಅಂಗದನ ಗಿರಿಶಿಖರವೇ ಬಲಿಷ್ಠವಾಗಿತ್ತು. ಅದು ಕಂಪನನನ್ನು ಜೀವಂತ ವಾಗಿ
ಉಳಿಯಗೊಡಲಿಲ್ಲ.
 
೧೮೨
 

 
ಆಗ ಶೋಣಿತಾಕ್ಷನು ಅಂಗದನ ಮೇಲೆರಗಿ ಬಂದನು. ಅವನ ಬಾಣಗಳ
ಪೆಟ್ಟನ್ನು ಲಕ್ಷಿಸದೆ ಅಂಗದನು ಅವನ ಧನುರ್ಬಾಣ ಗಳನ್ನೂ, ವಾಹನವನ್ನೂ
ನಾಶಗೊಳಿಸಿದನು. ಶೋಣಿತಾಕ್ಷನು ಖಡ್ಗ ಧಾರಿಯಾಗಿ ಮುಗಿಲಿಗೆ ಹಾರಿದನು.
ಆಗ ಅಂಗದನು ಅವನ ಕೈಯಿಂದ ಖಡ್ಗವನ್ನು ಕಸಿದುಕೊಂಡು ಅವನ
ಆಯುಧದಿಂದಲೇ ಅವನ ತೋಳನ್ನು ಕತ್ತರಿಸಿ ಉಳಿದ ರಕ್ಕಸರನ್ನೂ ಕಡಿದು
ಚೆಲ್ಲ- ತೊಡಗಿದನು.
 

 
ಪ್ರಜಂಘ, ಯೂಪಾಕ್ಷರ ಜತೆಗೆ ಮತ್ತೊಮ್ಮೆ ಶೋಣಿತಾಕ್ಷನು ಗದಾ
ಧಾರಿಯಾಗಿ ಯುದ್ಧಕ್ಕೆ ಸಿದ್ಧನಾದನು. ಆಗ ಅಂಗದನು ಮೈಂದ, ವಿವಿದರೊಡನೆ
ಅವನನ್ನು ಎದುರಿಸಿದನು. ಕಪಿಗಳೆಸೆದ ಎಲ್ಲ ವೃಕ್ಷಗಳನ್ನೂ ಈ ಮೂವರು
ರಾಕ್ಷಸರು ಬಾಣಗಳಿಂದ ಕತ್ತರಿಸಿಬಿಡುತ್ತಿದ್ದರು. ಅಂಗದನಿಗೆ ಇದು ಸಹನೆ-
ಯಾಗಲಿಲ್ಲ. ಅವನು ಪ್ರಜಂಘನಿಗೆ ಒಂದು ಬಲವಾದ ಪ್ರಹಾರವನ್ನಿತ್ತು

ಅವನ ಕೈಯಿಂದ ಕತ್ತಿಯನ್ನು ಕಿತ್ತುಕೊಂಡು ಅವನಿಗೆ ಹೊಡೆ ದನು. ತಿರುಗಿ
ಪ್ರಜಂಘನು ಹೊಡೆದ ಏಟಿನಿಂದ ಅಂಗದನಿಗೆ ತಲೆ ತಿರುಗಿದಂತಾದರೂ ಕ್ಷಣದಲ್ಲಿ
ಚೇತರಿಸಿಕೊಂಡು ಅವನು ಪ್ರಜಂಘನ ತಲೆಯನ್ನು ಹಾರಿಸಿಬಿಟ್ಟನು.
 

 
ಓಡಿಬರುತ್ತಿರುವ ರೂಯೂಪಾಕ್ಷನನ್ನು ನಡುವೆಯೆ ವಿವಿದನು ತಡೆಗಟ್ಟಿ
ಅವನ ಎದೆಗೆ ಬಲವಾದ ಏಟೊಂದನ್ನು ಬಿಗಿದು ತೋಳುಗಳಿಂದ ಅದುಮಿ
ನಿಲ್ಲಿಸಿದನು. ಸೋದರನ ಸಹಾಯಕ್ಕೆ ಬಂದ ಶೋಣಿತಾಕ್ಷನು ವಿವಿದನಿಗೆ ಗದೆ
ಯಿಂದ ಹೊಡೆದನು. ವಿವಿದನು ಅವನ ಗದೆಯನ್ನು ಕಿತ್ತೆಸೆದು ಅವನನ್ನು
ನೆಲಕ್ಕುರು- ಳಿಸಿ ಅದುಮಿಕೊಂದನು . ಇತ್ತ ಮೈಂದನು ಯೂಪಾಕ್ಷನನ್ನು

ಮುಗಿಸಿದನು.
 

 
ತನ್ನ ಸೇನೆಯೆಲ್ಲ ಕ್ಷೀಣವಾಗುತ್ತಿರುವುದನ್ನು ಕಂಡು ಕುಂಭನು ಮುಂದೆ
ಬಂದನು.
ಅವನನ್ನು ಎದುರಿಸಹೋದ ಮೈಂದ, ವಿವಿದರು ಅವನ
ಕೂರ್ಗಣೆಯ ಪೆಟ್ಟಿಗೆ ಕುಸಿದುಬಿದ್ದರು. ಮಾಂದಂವಂದಿರಿಬ್ಬರೂ ಮೂರ್ಛಿತರಾಗಿ