This page has been fully proofread once and needs a second look.

ಸಂಗ್ರಹರಾಮಾಯ
 
ರಣ
ಕಣಕ್ಕಿಳಿದನು. ಧೂಮ್ರಾಕ್ಷನ ಬಾಣಗಳ ಸುರಿಮಳೆಯನ್ನು ಎದುರಿಸಲು
ಯಾವ ಕಪಿಯೂ ಬಯಸಲಿಲ್ಲ. ಧೂಮ್ರಾಕ್ಷನ ಯುದ್ಧ ಕೌಶಲದಿಂದ ಕಪಿವೃಂದ
ಕಾತರವಾಯಿತು. ಇದು ಮಾರುತಿಯ ಗಮನಕ್ಕೆ ಬಂತು. ಒಡನೆಯೆ ಅವನು
ಧೂಮ್ರಾಕ್ಷ- ನನ್ನು ಅಡ್ಡಗಟ್ಟಿ ಅವನ ವಾಹನವನ್ನು ಪುಡಿಗುಟ್ಟಿದನು. ಧೂಮಾ,
ಮ್ರಾಕ್ಷನು ತನ್ನ ಗದೆಯಿಂದ ಹನುಮಂತನ ನೆತ್ತಿಗೆ ಹೊಡೆ- ದನು. ಜಗತ್ಪಾಪ್ರಾಣನಾದ
ಮಾರುತಿಗೆ ಅದೊಂದು ಲೆಕ್ಕವೆ ? ಕೂಡಲೆ ಅವನು ಬಂಡೆಯೊಂದರಿಂದ
ಧೂಮ್ರಾಕ್ಷನನ್ನು ಹೊಡೆದು ಕೊಂದನು.
 

 
ಆಗ ಅಕಂಪನನ ಸೇನೆ ಯುದ್ಧಕ್ಕೆ ಸಿದ್ಧವಾಯಿತು. ರುದ್ರನ ವರದಿಂದ
ಗರ್ವಿತನಾದ ಅವನಿಗೆ ಶತ್ರುಭಯವೆಂಬುದೇ ತಿಳಿ- ದಿರಲಿಲ್ಲ. ಹನುಮಂತನೆಸೆದ
ಪರ್ವತಗಳನ್ನೂ ವೃಕ್ಷಗಳನ್ನೂ ಅವನು ಬಾಣಗಳಿಂದ ಭೇದಿಸಿದನು. ಹನು-
ಮಂತನು ಇಷ್ಟ- ರಿಂದಲೆ ಕಂಗೆಡಲಿಲ್ಲ. ಅವನು ಮತ್ತೊಂದು ಮಹಾವೃಕ್ಷವನ್ನು

ಶತ್ರುವಿನೆಡೆಗೆ ವೇಗವಾಗಿ ಎಸೆದನು. ಅಕಂಪನನು ಅದನ್ನು ತುಂಡರಿಸುವ
ಮುನ್ನ ಆ ವೃಕ್ಷವೇ ಅವನ ಕತೆಯನ್ನು
ಮುಗಿಸಿತ್ತು !
 

 
ಅಂದು ರಾತ್ರಿ ರಾಮನ ಆಜ್ಞೆಯಂತೆ ಕಪಿಗಳು ಲಂಕೆಗೆ ಮತ್ತೊಮ್ಮೆ
ಕೊಳ್ಳಿಯ ಪೂಜೆಯನ್ನೆಸಗಿದವು. ರಾತ್ರಿಯ ಕಗ್ಗತ್ತಲಿ ನಲ್ಲಿ ಇಡಿಯ ಲಂಕೆ
ಧಗಧಗನೆ ಉರಿಯತೊಡಗಿತು. ಎಲ್ಲಿ ನೋಡಿದರಲ್ಲಿ ಬೆಂಕಿ. ಎಲ್ಲಿ ನೋಡಿದ-
ರಲ್ಲಿ ಬೊಬ್ಬೆ ಹಾಹಾಕಾರ ! ಒಬ್ಬ ರಾವಣನ ವಿದ್ರೋಹದ ಫಲವನ್ನು ಸಮಗ್ರ
ರಾಕ್ಷಸರು ಅನುಭವಿಸುವಂತಾಯಿತು.
ಬಡಪಾಯಿ ಹೆಂಗಸರು, ಮಕ್ಕಳು

ಕೂಡ ಈ ವಿನಾಶದಿಂದ ಪಾರಾಗಲಿಲ್ಲ. ಬೆಂಕಿಗೆ ಬಲಿಯಾಗು- ತ್ತಿರುವ ರಾಕ್ಷಸ
ಕುಲದ ಕರುಣಕ್ರಂದನವನ್ನು ಕೇಳುವವರಿಲ್ಲ- ವಾಯಿತು ! ಎಲ್ಲರಿ ಬಾಯಿಯೂ
ಅಳತೊಡಗಿದಾಗ ಕೇಳುವ ಕಿವಿ ಎಲ್ಲಿಂದ ಬರಬೇಕು ? ಮುಗಿಲನ್ನು ಮುತ್ತಿದ
ಅಗ್ನಿದೇವ ಲಂಕೆಯ ಸಿರಿಯನ್ನೆಲ್ಲ ಕಬಳಿಸದೆ ಶಾಂತನಾಗಲಿಲ್ಲ.
ಪಾಪ ಸೋತಿತು; ಪುಣ್ಯ ಗೆದ್ದಿತು.
 

 
ರಾವಣನ ಸಂತತಿ ಕ್ಷೀಣಿಸಿತು
 
cen
 

 
ಕುಂಭಕರ್ಣನ ಮಕ್ಕಳಾದ ಕುಂಭ-ನಿಕುಂಭರು ಯುದ್ಧಕ್ಕೆ ಹೊರಟರು.
ಕಪಿಸೇನೆ ಮತ್ತೆ ಜಾಗೃತವಾಯಿತು. ಈ ಇಬ್ಬರು ವೀರರೊಡನೆ ರೂಯೂಪಾಕ್ಷ-
ಶೋಣಿತಾಕ್ಷ-ಪ್ರಜಂಘ-ಕಂಪನರೆಂಬ ನಾಲ್ವರು ರಾಕ್ಷಸರೂ ಜತೆಗೂಡಿದ್ದರು.