2023-03-15 15:35:54 by ambuda-bot
This page has not been fully proofread.
ಸಂಗ್ರಹರಾಮಾಯಣ
ರಣ ಕಣಕ್ಕಿಳಿದನು. ಧೂಮ್ರಾಕ್ಷನ ಬಾಣಗಳ ಸುರಿಮಳೆಯನ್ನು ಎದುರಿಸಲು
ಯಾವ ಕಪಿಯೂ ಬಯಸಲಿಲ್ಲ. ಧೂಮ್ರಾಕ್ಷನ ಯುದ್ಧ ಕೌಶಲದಿಂದ ಕಪಿವೃಂದ
ಕಾತರವಾಯಿತು. ಇದು ಮಾರುತಿಯ ಗಮನಕ್ಕೆ ಬಂತು. ಒಡನೆಯೆ ಅವನು
ಧೂಮ್ರಾಕ್ಷನನ್ನು ಅಡ್ಡಗಟ್ಟಿ ಅವನ ವಾಹನವನ್ನು ಪುಡಿಗುಟ್ಟಿದನು. ಧೂಮಾ,
ಕ್ಷನು ತನ್ನ ಗದೆಯಿಂದ ಹನುಮಂತನ ನೆತ್ತಿಗೆ ಹೊಡೆದನು. ಜಗತ್ಪಾಣನಾದ
ಮಾರುತಿಗೆ ಅದೊಂದು ಲೆಕ್ಕವೆ ? ಕೂಡಲೆ ಅವನು ಬಂಡೆಯೊಂದರಿಂದ
ಧೂಮ್ರಾಕ್ಷನನ್ನು ಹೊಡೆದು ಕೊಂದನು.
ಆಗ ಅಕಂಪನನ ಸೇನೆ ಯುದ್ಧಕ್ಕೆ ಸಿದ್ಧವಾಯಿತು. ರುದ್ರನ ವರದಿಂದ
ಗರ್ವಿತನಾದ ಅವನಿಗೆ ಶತ್ರುಭಯವೆಂಬುದೇ ತಿಳಿದಿರಲಿಲ್ಲ. ಹನುಮಂತನೆಸೆದ
ಪರ್ವತಗಳನ್ನೂ ವೃಕ್ಷಗಳನ್ನೂ ಅವನು ಬಾಣಗಳಿಂದ ಭೇದಿಸಿದನು. ಹನು-
ಮಂತನು ಇಷ್ಟರಿಂದಲೆ ಕಂಗೆಡಲಿಲ್ಲ. ಅವನು ಮತ್ತೊಂದು ಮಹಾವೃಕ್ಷವನ್ನು
ಶತ್ರುವಿನೆಡೆಗೆ ವೇಗವಾಗಿ ಎಸೆದನು. ಅಕಂಪನನು ಅದನ್ನು ತುಂಡರಿಸುವ
ಮುನ್ನ ಆ ವೃಕ್ಷವೇ ಅವನ ಕತೆಯನ್ನು ಮುಗಿಸಿತ್ತು !
ಅಂದು ರಾತ್ರಿ ರಾಮನ ಆಜ್ಞೆಯಂತೆ ಕಪಿಗಳು ಲಂಕೆಗೆ ಮತ್ತೊಮ್ಮೆ
ಕೊಳ್ಳಿಯ ಪೂಜೆಯನ್ನೆಸಗಿದವು. ರಾತ್ರಿಯ ಕಗ್ಗತ್ತಲಿನಲ್ಲಿ ಇಡಿಯ ಲಂಕೆ
ಧಗಧಗನೆ ಉರಿಯತೊಡಗಿತು. ಎಲ್ಲಿ ನೋಡಿದರಲ್ಲಿ ಬೆಂಕಿ. ಎಲ್ಲಿ ನೋಡಿದ-
ರಲ್ಲಿ ಬೊಬ್ಬೆ ಹಾಹಾಕಾರ ! ಒಬ್ಬ ರಾವಣನ ವಿದ್ರೋಹದ ಫಲವನ್ನು ಸಮಗ್ರ
ರಾಕ್ಷಸರು ಅನುಭವಿಸುವಂತಾಯಿತು.
ಬಡಪಾಯಿ ಹೆಂಗಸರು, ಮಕ್ಕಳು
ಕೂಡ ಈ ವಿನಾಶದಿಂದ ಪಾರಾಗಲಿಲ್ಲ. ಬೆಂಕಿಗೆ ಬಲಿಯಾಗುತ್ತಿರುವ ರಾಕ್ಷಸ
ಕುಲದ ಕರುಣಕ್ರಂದನವನ್ನು ಕೇಳುವವರಿಲ್ಲವಾಯಿತು ! ಎಲ್ಲರಿ ಬಾಯಿಯೂ
ಅಳತೊಡಗಿದಾಗ ಕೇಳುವ ಕಿವಿ ಎಲ್ಲಿಂದ ಬರಬೇಕು ? ಮುಗಿಲನ್ನು ಮುತ್ತಿದ
ಅಗ್ನಿದೇವ ಲಂಕೆಯ ಸಿರಿಯನ್ನೆಲ್ಲ ಕಬಳಿಸದೆ ಶಾಂತನಾಗಲಿಲ್ಲ.
ಪಾಪ ಸೋತಿತು; ಪುಣ್ಯ ಗೆದ್ದಿತು.
ರಾವಣನ ಸಂತತಿ ಕ್ಷೀಣಿಸಿತು
cen
ಕುಂಭಕರ್ಣನ ಮಕ್ಕಳಾದ ಕುಂಭ-ನಿಕುಂಭರು ಯುದ್ಧಕ್ಕೆ ಹೊರಟರು.
ಕಪಿಸೇನೆ ಮತ್ತೆ ಜಾಗೃತವಾಯಿತು. ಈ ಇಬ್ಬರು ವೀರರೊಡನೆ ರೂಪಾಕ್ಷ-
ಶೋಣಿತಾಕ್ಷ-ಪ್ರಜಂಘ-ಕಂಪನರೆಂಬ ನಾಲ್ವರು ರಾಕ್ಷಸರೂ ಜತೆಗೂಡಿದ್ದರು.