This page has been fully proofread once and needs a second look.

ಮಿಂಚಿನ ಬಳ್ಳಿ
 
ಕೊಂದನು. ವಿವಿದ ಮಹಾ ವೃಕ್ಷವೊಂದರಿಂದ ಅಶನಿಪ್ರಭನನ್ನು ಹೊಡೆದನು.
ಸುಷೇಣ ಬಂಡೆಯನ್ನೆಸೆದು ವಿದ್ಯುನ್ಮಾಲಿಯ ಕತೆ- ಯನ್ನು ತೀರಿಸಿದನು. ಹೀಗೆ
ಕಪಿಗಳ ಕೈಯಲ್ಲಿ ಸಿಕ್ಕಿದ ರಾಕ್ಷಸರ ಗೋಳು ಕೇಳುವವರಿಲ್ಲವಾಯಿತು.
 

 
ಪ್ರಹಸ್ತನ ಸೇನಾಪತಿತ್ವದಲ್ಲಿ ಮತ್ತೊಂದು ಸೇನೆ ಯುದ್ಧಕ್ಕೆ ಸಿದ್ಧವಾ
ಯಿತು. ಸಂಧಾನ ಮಾಡಿಕೊಂಡರೆ ರಾಕ್ಷಸರ ಸಂತಾನ ಬದುಕುತ್ತಿತ್ತು ಎಂದು
ಪ್ರಹಸ್ತನ ಮನಸ್ಸು ನುಡಿಯುತ್ತಿತ್ತು. ಆದರೆ ರಾವಣನ ಆಜ್ಞೆಗೆ ಎದುರಾಡುವು
ದುಂಟೆ ? ಪೂರ್ವದ ಮಹಾ- ದ್ವಾರದಿಂದ ಪ್ರಹಸ್ತನ ಸೇನೆ ಯುದ್ಧ ರಂಗಕ್ಕಿಳಿ
 
ಯಿತು.
 

 
ರಾಕ್ಷಸ ಸೇನೆ ಕಸಿಪಿಗಳ ಬೆನ್ನಟ್ಟಿತು. ಕಸಿಪಿಗಳು ಮರವನ್ನು ಕಿತ್ತು

ಕಾದಾಡತೊಡಗಿದರು. ಕಪಿಗಳ ಒಂದೊಂದು ಪ್ರಹಾರಕ್ಕೂ ಒಬ್ಬೊಬ್ಬ ರಾಕ್ಷಸ
ಬಲಿಯಾದನು. ಪ್ರಹಸ್ತನ ಬಾಣಗಳಿಂದ ಕುಪಿತನಾದ ನೀಲ ದೊಡ್ಡ ಮರ-
ವೊಂದನ್ನು ಅವನ ಮೇಲೆ ಕೆಡವಿ, ಅವನ ರಥ ಕುದುರೆಗಳನ್ನು ನಾಶಗೊಳಿಸಿದನು.
ಆದರೂ ಪ್ರಹಸ್ತ ಕಂಗೆಡದೆ ಮುಸಲವನ್ನೆತ್ತಿ ನೀಲನೆಡೆಗೆ ಬೀಸಿದನು. ನೀಲನಿಂದ
ಪ್ರಹಸ್ತನನ್ನು ಕೊಲ್ಲುವುದು ಅಸಾಧ್ಯವೆಂದು ವಿಭೀಷಣನಿಗೆ ಅರಿವಾಯಿತು.
ಕೂಡಲೆ ಅವನು ತನ್ನ ಬಳಿಯಿದ್ದ ಶಕ್ತಿಯನ್ನು ಅವನೆಡೆಗೆ ಎಸೆದನು. ಜತೆಗೆ
ನೀಲನೆಸೆದ ಬಂಡೆಯೂ ಸೇರಿ ಪ್ರಹಸ್ತನನ್ನು ತೀರಿಸಿದವು.
 
ವಜ್ರದಂಷ್ಟನ ಬಾಣ ಅದನ್ನು ಭೇದಿಸಿತು.
 

 
ಮತ್ತೆ ದಕ್ಷಿಣ ದ್ವಾರದಿಂದ ವಜ್ರದಂಷ್ಟ್ರನ ಸೇನೆ ಹೊರಟಿತು. ರಾಕ್ಷಸ
ಕುಲನಾಶದಿಂದ ಕುಪಿತನಾದ ವಜ್ರದಂಷ್ಟ್ರನ ಬಾಣದ ಪೆಟ್ಟನ್ನು ಸಹಿಸಲಾರದ
ಕಪಿಗಳು ದಿಕ್ಕುಗೆಟ್ಟು ಓಡತೊಡಗಿದವು. ಆಗ ಅಂಗದನು ಮರವೊಂದನ್ನು
ವಜ್ರದಂಷ್ಟ್ರನ ಮೇಲೆಸೆದನು.

ವಜ್ರದಂಷ್ಟ್ರನ ಬಾಣ ಅದನ್ನು ಭೇದಿಸಿತು.
ಅಂಗದ ಬಂಡೆ- ಯೊಂದನ್ನು ಗುರಿಯಿಟ್ಟು ಎಸೆದನು. ಜ್ರದಂಷ್ಟ್ರ
ಬದುಕಿ-
ಕೊಂಡರೂ ಅವನ ರಥ ಬಂಡೆಯೆಡೆಗೆ ಸಿಕ್ಕಿ ನುಗ್ಗಾಯಿತು.
ಇಬ್ಬರೂ ಚತುರತೆಯಿಂದ ಕಾದಾಡಿದವು. ಬಹುಕಾಲ ಹೋರಾಡಿದ ನಂತರ ನೆಲಕ್ಕೆ
ಕುಸಿದ ವಜ್ರದಂಷ್ಟನ ತಲೆಯನ್ನು ಮೆಟ್ಟಿ ನಿಂತ ಅಂಗದನನ್ನು ಕಂಡು ಕಪಿಗಳು
(
' ಘೇ ' ಎಂದರು. ದಕ್ಷಿಣದ್ವಾರದಿಂದ ಹೊರಟ ಸೇನೆ ದಕ್ಷಿಣ ದಿಕೃಕ್ಪತಿಯನ್ನೆ
 
ಇಬ್ಬರೂ
 
ಸೇರಿತು !
 

 
ಆಗ ಧೂಮ್ರಾಕ್ಷನಿಗೆ ರಾವಣನ ಆಜ್ಞೆಯಾಯಿತು. ಆತನು ಸಿಂಹ ದಂತೆ
ಕ್ರೂರ ಮುಖವುಳ್ಳ ಕತ್ತೆಗಳನ್ನು ಕಟ್ಟಿದ ರಥದಲ್ಲಿ ಕುಳಿತು ಪಶ್ಚಿಮದ್ವಾರದಿಂದ