2023-03-15 15:35:53 by ambuda-bot
This page has not been fully proofread.
ಸಂಗ್ರಹರಾಮಾಯಣ
೧೭೯
ಶತ್ರುಗಳನ್ನು ಸದೆಬಡಿಯುತ್ತ ಮುನ್ನುಗ್ಗುತ್ತಿರುವ ಕಪಿಗಳು ಸಂತಸದಿಂದ
ಮಾಡಿದ ಜಯಕಾರ ಮುಗಿಲನ್ನು ಮುತ್ತಿತು :
ರಾವಣನೆಂಬ ನರಿಯ ಹುಟ್ಟಡಗಿಸಲು ಬಂದಿರುವ ಸಿಂಹದಂತಿರುವ
ರಾಮಚಂದ್ರನಿಗೆ ಜಯವಾಗಲಿ. ರಾಮನ ಪಾದಕಮಲಗಳಲ್ಲಿ ಶೃಂಗದಂತಿ-
ರುವ ಹನುಮಂತನಿಗೆ ಜಯವಾಗಲಿ, ಜಗದೀಶ್ವರನ ಸೋದರನಾದ ಲಕ್ಷಣ
ನಿಗೆ ಜಯವಾಗಲಿ. ಅಸಂಖ್ಯ ಸೇನೆಯಿಂದ ಸುತ್ತುವರಿದ ಕಪಿರಾಜ ಸುಗ್ರೀವ
ವನಿಗೆ ಜಯವಾಗಲಿ."
ಪುಣ್ಯ-ಪಾಪಗಳ ಕದನ
ರಾಮಚಂದ್ರನ ಅತುಲಬಲ, ಕಸಿಗಳ ಕೋಪಾಟೋಪ ರಾವಣನನ್ನು
ಚಿಂತೆಗೀಡುಮಾಡಿತು. ಆದರೆ ಚಿಂತಿಸಿ ಫಲವಿಲ್ಲ. ಯುದ್ಧ ಸಾಗಲೇಬೇಕು.
ಒಂದು ನಿರ್ಧಾರಕ್ಕೆ ಬಂದ ರಾವಣ, ಕೂಡಲೆ ಬಂಗಾರದ ಪೀಠದಿಂದೆದ್ದು ಬಂದು
ಪ್ರಬಲರಾದ ರಾಕ್ಷಸರ ಗುಂಪೊಂದನ್ನೆ ಯುದ್ದಕ್ಕಾಗಿ ಕಳಿಸಿದನು.
ಒಬ್ಬೊಬ್ಬ ರಾಕ್ಷಸನೂ ಒಬ್ಬೊಬ್ಬ ಕಪಿಯೊಡನೆ ಹೋರಾಡ ತೊಡಗಿದನು.
ರಾಮನ ನೃತ್ಯರೂ ರಾವಣನ ನೃತ್ಯರೂ ಪರಸ್ಪರವಾಗಿ ಹೊಡೆದಾಡಿಕೊಂಡರು
ಸಚ್ಛಕ್ತಿ ದುಷ್ಟ ಶಕ್ತಿಗಳು ಹೋರಾಡುವಂತೆ; ಪ್ರಣ್ಯ-ಪಾಪಗಳು ಅನ್ನೋನ್ಯ
ವಾಗಿ ಕದನ ಹೂಡುವಂತೆ !
ಹನುಮಂತ ಇಂದ್ರಜಿತ್ತನೊಡನೆ ಕಾದಾಡಿದನು. ಇಂದ್ರನನ್ನು ಗೆದ್ದ ಕೀರ್ತಿ
ತಲೆತಗ್ಗಿಸಿತು. ಇಂದ್ರಜಿತ್ತು ಸೋತು ಯುದ್ಧರಂಗದಿಂದ ಮರಳಿದ. ಸಂಪಾತಿ
ಯೆಂಬ ಕಸಿಯ ಕೈಯಲ್ಲಿ ಸಿಕ್ಕಿದ ಪ್ರಜಂಘ ಜರ್ಜರನಾದನು. ಮತ್ತೆ ಜಂಬುಮಾಲಿ
ಬಂದು ಹನಮಂತನ ಮೇಲೆ ಶಕ್ತಾಯುಧವನ್ನು ಎಸೆದನು. ಮಾರುತಿಯ
ಒಂದು ಪ್ರಹಾರಕ್ಕೆ ಆತ ಜೀವತೆ, ಆತನ ಆಯುಧ ಏನು ಮಾಡಬಲ್ಲದು?
ನಲನು ಪ್ರತಪನನ ಕಣ್ಣು ಕಿತ್ತಿದರೆ, ಗಜನು ತಾಪನನ ಜೀವವನ್ನೇ ಕಿತ್ತನು !
ಮಿತ್ರಘ್ನನನ್ನು ವಿಭೀಷಣನೂ ವಿರೂಪಾಕ್ಷನನ್ನು ಲಕ್ಷ್ಮಣನೂ ಹೊಡೆದರು.
ಸುಗ್ರೀವನ ಕೈಯಲ್ಲಿದ್ದ ಮರಕ್ಕೆ ಪ್ರಹಸ್ತನ ಜೀವ ತತ್ತರಿಸಿತು. ವಜ್ರಮುಷ್ಟಿ
ಎಂಬವನು ಮೈಂದನ ಮುಷ್ಟಿಯಲ್ಲಿ ಸಿಕ್ಕು ನುಗ್ಗಾದನು. ತನ್ನ ಮೇಲೆ ಬಾಣದ
ಮಳೆಗರೆದ ನಿಕುಂಭನನ್ನು ನೀಲ ಅವನ ರಥದ ಗಾಲಿಯಿಂದಲೆ ಹೊಡೆದು