This page has been fully proofread once and needs a second look.

ಸಂಗ್ರಹರಾಮಾಯಣ
 
೧೭೭
 
ಅಂಗದನ ಸಂಧಾನ
 

 
ರಾಮನ ಅಪ್ಪಣೆಯಂತೆ ಲಕ್ಷ್ಮಣನು ಕಪಿಗಳಿಗೆ ಯಥೇಚ್ಛವಾಗಿ ಹಣ್ಣು -
ಗಡ್ಡೆಗಳನ್ನು ತಿನಬಡಿಸಿದನು. ಅನಂತರ ಸಜ್ಜಾದ ಸೇನೆ ಯನ್ನು ನಡೆಸಿಕೊಂಡು
ರಾಮ-ಲಕ್ಷ್ಮಣರು ಲಂಕೆಯ ನಗರದೆಡೆಗೆ ತೆರಳಿದರು. ಜತೆಗೆ ಸುಗ್ರೀವ-ವಿಭೀ
ಷಣರೂ ಇದ್ದರು.
 

 
ಹನುಮಂತನೇ ಮೊದಲಾದ ಕಪಿಗಳು ದೊಡ್ಡ ದೊಡ್ಡ ಬಂಡೆಗಳನ್ನೇ
ಹೊತ್ತುಕೊಂಡು ಮುನ್ನುಗ್ಗುತ್ತಿದ್ದರು ಗರಿ- ಗರಿಮೂಡಿದ ಬೆಟ್ಟಗಳಂತೆ !
 

 
ಯುದ್ಧಕ್ಕೆ ತೊಡಗುವ ಮುನ್ನ ರಾಜಧರ್ಮಕ್ಕೆ ಅನುಸಾರವಾಗಿ ರಾಮ
ಚಂದ್ರನು ವಿಭೀಷಣನ ಸಮ್ಮತಿಯಂತೆ ಅಂಗದನನ್ನು ರಾವಣನೆಡೆಗೆ ದೌತ್ಯ.
ಕಾಗಿ ಕಳಿಸಿದನು. ಅಂಗದನು ಒಂದೇ ನೆಗೆತಕ್ಕೆ ಕೋಟೆಯನ್ನು ಹಾರಿ ನಗರ
ದೊಳಗೆ ಪ್ರವೇಶಿಸಿದನು. ಅಲ್ಲಿಂದ ನೇರ ರಾವಣನ ಮಂತ್ರಾಲೋಚನೆಯ
ಕೋಣೆಗೇ ನಡೆದನು. ರಾವಣನು ಅಲ್ಲಿ ಎತ್ತರದ ಸಿಂಹಾಸನದ ಮೇಲೆ ಕುಳಿ-

ತಿದ್ದನು. ಅಂಗದನು ಅದಕ್ಕಿಂತಲೂ ಎತ್ತರವಾಗಿ ತನ್ನ ಬಾಲದ ಸುರಳಿಯನ್ನು
ಸುತ್ತಿ ಕುಳಿತುಕೊಂಡನು. ರಾವಣನಿಗೆ ಇದು ಸಹನೆಯಾಗಲಿಲ್ಲ. ಅವನು
ಆಕ್ಷೇಪಿಸುವ ದನಿಯಲ್ಲಿ ಕೇಳಿದನು:
 

 
"ಯಾರು ನೀನು ? ಎಲ್ಲಿಂದ ಬಂದೆ ? ಇಲ್ಲಿಗೆ ಬರುವ ಉದ್ದೇಶ ವೇನು ?"
ಅಂಗದನು ಹಂಗಿಸುವ ದನಿಯಲ್ಲಿ ಉತ್ತರಿಸಿದನು :
 

 
"ರಾಜನ್, ನಾನು ವಾಲಿಯ ಮಗ ಅಂಗದ, ವಾಲಿಯ ಗುರುತು

ನಿನಗೆ ಮರೆತಿರಲಿಕ್ಕಿಲ್ಲ. ತನ್ನ ಕಡೆಗಣ್ ನೋಟದಿಂದ ಸಮುದ್ರ- ವನ್ನು ಸ್ತಂಭನ
ಗೊಳಿಸಿ ಸೇತುವನ್ನು ರಚಿಸಿದ ರಾಮಚಂದ್ರನ ದೂತನಾಗಿ ಇಲ್ಲಿಗೆ ಬಂದಿದ್ದೇನೆ.
 

 
ನೀನು ಗುರುದ್ರೋಹಿ, ಬ್ರಾಹ್ಮಣದ್ರೋಹಿ. ಕುಲಸ್ತ್ರೀಯರ ಮಾನವನ್ನು
ಕೆಡಿಸುವುದಕ್ಕೂ ನೀನು ಹೇಸುವುದಿಲ್ಲ. ದೇವ- ದ್ರೋಹಿಯಾದ ನಿನ್ನ ಪಾತಕದ
ರಾಶಿ ಹೆಮ್ಮರವಾಗಿ ಬೆಳೆದು ನಿಂತಿದೆ. ನೀನು ರಾಮಚಂದ್ರನ ರಾಣಿಯನ್ನು
ಕದ್ದು ತಂದಿರುವೆ. ಅದು ಅಕ್ಷಮ್ಯವಾದ ಅಪರಾಧ. ಆದರೂ ನೀನು ಸೀತೆ
ಯನ್ನು ಒಪ್ಪಿಸಿ ಶರಣಾಗುವುದಾದರೆ ಇನ್ನೂ ಕೂಡ ನಮ್ಮ ಪ್ರಭು ನಿನ್ನನ್ನು
ಕ್ಷಮಿಸುವನು. ಇಲ್ಲವಾದರೆ ನಿನ್ನ ಜೀವಿತದ ಬಯಕೆ- ಯನ್ನು ಬೇಗನೇ ತೀರಿಸಿ