This page has been fully proofread once and needs a second look.

eternal Joy of Hindu culture. And all the while it stirs

in me a feeling of long past associations- it seems all

something I have known and loved since time immemorial.
Past births seem almost to stare me in the face sometimes.
And you can imagine what the reading of the Ramayan
means to me."
 

 
ರಾಮಾಯಣವನ್ನು ಓದಿದವರೆಲ್ಲರಿಗೂ ಒಂದೇ ತೆರನಾದ ಭಾವನೆ ಬರ
ಬೇಕು ಎಂದೇನೂ ಹೇಳುವಂತಿಲ್ಲ. ಸಾಗರದ ನೀರು ಅನಂತವಾಗಿದೆ. ನಮ್ಮ

ಕೊಡದಲ್ಲಿ ತುಂಬುವನ್ನುಷ್ಟು ನಾವು ತುಂಬಿಕೊಳ್ಳೋಣ, ಬರಿ ಕೊಡ ಹೊತ್ತು
ಮರಳುವುದು ಬೇಡ ಎಂದಿಷ್ಟೇ ನನ್ನ ಆಶಯ.
 

 
ಈ ಪ್ರಕಟನೆಗೆ ಫಲಿಮಾರು ಶ್ರೀಪಾದರು ಮುನ್ನುಡಿ ಬರೆದು ಹರಸಿ
ದ್ದಾರೆ. ಅವರು 'ಸಂಗ್ರಹ ರಾಮಾಯಣ' ಮೂಲವನ್ನು ಬರೆದ ನಾರಾಯಣ

ಪಂಡಿತಾಚಾರ್ಯರ ವಂಶದವರು. ಆಚಾರ್ ಮಧ್ವರ ಪೀಠವನ್ನು ಅಲಂಕರಿಸಿ
ಕಡಗೋಲು ಕೃಷ್ಣನನ್ನು ಪೂಜಿಸಿದವರು, ಮೇಲಾಗಿ ಅವರ ಆರಾಧ್ಯದೈವ

ರಾಮಚಂದ್ರನೇ ಆಗಿದ್ದಾನೆ. ಅವರು ನನ್ನಮೇಲಣ ಅತಿಶಯ ವಿಶ್ವಾಸದಿಂದ
ನನ್ನ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅವರನ್ನು ಕುರಿತು ಏನನ್ನಾ
-
ದರೂ ಬರೆವುದಕ್ಕೆ ಗೌರವಾದರಗಳಿಂದ ನನ್ನ ಮಾತು ಮೂಕವಾಗಿದೆ. ಅಂಥವರ
ಹರಕೆ ಸದಾ ನನಗೆ ರಕ್ಷಕವಾಗಿರಲಿ. ಆಗ ನಾನು ಇನ್ನಷ್ಟು ಹುಮ್ಮಸದಿಂದ

ಕೆಲಸಕ್ಕೆ ತೊಡಗಬಲ್ಲೆ.
 

 
ಉಡುಪಿ
 

 
೨೯
- ಸಿ
 
}
 
೯-೧೯೫೯
 
ತಮ್ಮವನೆ

ಬನ್ನಂಜೆ ಗೋವಿಂದಾಚಾರ್ಯ