This page has been fully proofread once and needs a second look.

ಮಿಂಚಿನ ಬಳ್ಳಿ
 
ಉಳಿದ
 
ರಾಮ ನನ್ನನ್ನು ಸೋಲಿಸುವನೆ ? ಅದೂ ಈ ಕಾಡು ಮೃಗಗಳ ಸಹಾಯ-
ದಿಂದ ? ರಾಮನಿಗೆ ಬುದ್ಧಿ ಕಲಿಸಲಿಕ್ಕೆ ನನ್ನ ಒಂದು ತೋಳು ಸಾಕು.
ಹತ್ತೊಂಬತ್ತು ತೋಳುಗಳಿಗೆ ಯುದ್ಧ ಕಾಲ- ದಲ್ಲಿಯೂ ವಿಶ್ರಾಂತಿಯೆ ಸರಿ. ಈಗ
ನಿಮ್ಮ ಮಂತ್ರಾಲೋಚನೆಯ ಆವಶ್ಯಕತೆಯಿಲ್ಲ. ರಾವಣನ ತೋಳುಗಳಲ್ಲಿ
ಇನ್ನೂ ಬಲವುಡು- ಗಿಲ್ಲ."
 
೧೭೬
 

 
ಹೀಗೆ ಮಾಲ್ಯವಂತನನ್ನು ಗದರಿಸಿದವನೆ ಪ್ರಹಸ್ತವನ್ನು ಕರೆದು ಯುದ್ಧ
ಸಿದ್ಧತೆಯನ್ನು ಮಾಡುವಂತೆ
ಆಜ್ಞಾಪಿಸಿದನು. ಪಕ್ಷಿರೂಪದಿಂದಿದ್ದ ವಿಭೀಷಣನ
ಚಾರರು ಇದನ್ನೆಲ್ಲ ತಿಳಿದು ವಿಭೀಷಣನಿಗೆ ವರದಿಮಾಡಿದರು. ಅನಲ, ಅನಿಲ,
ಸಂಪಾತಿ, ಹರಿ ಎಂಬ ನಾಲ್ವರು ಚಾರರು ನಿವೇದಿಸಿದ ವೃತ್ತಾಂತವನ್ನು ವಿಭೀ-

ಷಣನು ರಾಮನ ಬಳಿ ನಿವೇದಿಸಿಕೊಂಡನು. ರಾಮಚಂದ್ರನೂ ನಾಳೆ ಬೆಳಿಗ್ಗೆ
ಯುದ್ಧ ಪ್ರಾರಂಭವಾಗುವುದು, ಎಲ್ಲರೂ ಸಿದ್ಧ- ರಾಗುವುದು' ಎಂದು ಆಜ್ಞಾಪಿಸಿ
ಸುವೇಲಪರ್ವತವನ್ನೇರಿದನು.
 

 
ಸುವೇಲದ ಶಿಖರದಲ್ಲಿ ರಾಮ-ಲಕ್ಷ್ಮಣರೂ, ಸುಗ್ರೀವ- ವಿಭೀಷಣಾದಿಗಳೂ
ಬಂದು ತಂಗುವಾಗ ಬಾನು ಪಡುಕಡಲನ್ನು ಸೇರಿಯಾಗಿತ್ತು. ಎಲ್ಲರೂ
ಸಾಯಂಸಂಧ್ಯೆಯನ್ನು ಅಲ್ಲೇ ಮುಗಿಸಿ ಮಲಗಿದರು.
 

 
ರಾತ್ರಿ ಕಳೆಯಿತು. ಬೆಳ್ಳಿ ಮೂಡಿತು. ಕತ್ತಲು ಹರಿಯಿತು. ಸೂನ್ಯ
ರ್ಯ ಮೂಡಣ ದಿಕ್ಕಿನಲ್ಲಿ ಕಾಣಿಸಿಕೊಂಡನು.
 

 
ರಾಮಚಂದ್ರನು ಪ್ರಭಾತದ ಹೊಂಬೆಳಕಿನಿಂದ ಮಿಂದ ಲಂಕೆಯನ್ನು
ಕಂಡನು. ಎಲ್ಲಿ ನೋಡಿದರಲ್ಲಿ ಮಹಡಿಯ ಮನೆ- ಗಳು, ಸಂಪತ್ತು ಚೆಲ್ಲಿದಂತೆ
ವೈಭವ, ಭೂಮಿಯಲ್ಲಿ ಮೂಡಿಬಂದ ಅಮರಾವತಿಯಂತಿತ್ತು ಆ ನಗರಿ. ಇದರ
ಸಿರಿಯನ್ನು ಕಂಡು ರಾಮಚಂದ್ರನಿಗೂ ಅಚ್ಚರಿಯೆನಿಸಿತು !
 

 
ಮಧ್ಯದಲ್ಲಿ ಅರಮನೆಯ ಪ್ರಾಸಾದದಲ್ಲಿ ರಾವಣನು ಕುಳಿತಿದ್ದ. ಸುಗ್ರೀ
ವನ ಚುರುಕಾದ ಕಣ್ಣು ಅವನನ್ನು ಗುರುತಿಸ- ದಿರಲಿಲ್ಲ. "ನನ್ನ ಪ್ರಭುವಿನ
ಪತ್ನಿಯನ್ನು ಕದ್ದ ಕಳ್ಳನಿವನು" ಎಂದಿತು ಅವನ ಮನಸ್ಸು, ರಾವಣನ ದರ್ಪ
ವನ್ನು ಕಂಡು ಅವನ ಮನಸ್ಸು ಕೋಕ್ಷೋಭಗೊಂಡಿತ್ತು. ಕೂಡಲೇ ರಾಮಪಾದ.
-
ಗಳಿಗೆರಗಿ ಸೇನೆಯನ್ನು ಯುದ್ಧಕ್ಕೆ ಅಣಿಗೊಳಿಸಿದನು.