This page has been fully proofread once and needs a second look.

" ಪರಮ ಸಾಧ್ವಿಯಾದ ಹೆಣ್ಣೆ ! ರಾಕ್ಷಸರ ಮಾಯೆಯಿಂದ ಮೋಸ ಹೋಗಿ ದುಃಖಿಸಬೇಡ. ನಿನ್ನ ಪತಿಯ ಕೂದಲನ್ನೂ ಈ ರಾಕ್ಷಸರು ನಲುಗಿಸಲಾರರು. ರಾಮನೂ ಅವನ ಅನಂತವಾದ ಕಪಿ ಸೈನ್ಯವೂ ಸುವೇಲಾದ್ರಿಯಲ್ಲಿ ಕ್ಷೇಮದಿಂದ್ದಾರೆ. ಇದು ಕೇವಲ ಮಾಯಾ ಶಿರಸ್ಸು, ರಾವಣನ ದೂತರು ರಾಮನೆಡೆಗೆ ತೆರಳಿದವರು ಕಪಿಗಳಿಂದ ತಪ್ಪಿಸಿಕೊಂಡು ಉಸಿರು ಏದುತ್ತ
ಬಂದು ರಾಮನ ಅಪಾರ ಶಕ್ತಿಯನ್ನು ಬಣ್ಣಿಸಿದ್ದನ್ನು ನಾನು ಕೇಳಿದ್ದೇನೆ. ವೃದ್ಧರಾದ ಮಂತ್ರಿಗಳು-ಹಿತೈಷಿಗಳು ಯಾರ ಮಾತನ್ನೂ ಲಕ್ಷಿಸದೆ ನಮ್ಮ ರಾವಣ ಅನ್ಯಾಯದ ಪಥವನ್ನು ತುಳಿಯುತ್ತಿದ್ದಾನೆ. ನಿನ್ನನ್ನು ರಾಮಚಂದ್ರನಿಗೆ ಒಪ್ಪಿಸುವುದು ಆತನಿಗೆ ಹಿತವಾಗಿಲ್ಲ. ರಾಮನ ಬಾಣಗಳಿಗೆ ಬಲಿಯಾಗುವುದೇ ಆತನ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸುವುದು ಯಾರಿಗೆ ಸಾಧ್ಯ? "
 
ಸರಮೆಯ ಮಾತು ಸೀತೆಯ ಚಿತ್ತಕ್ಕೆ ನೆಮ್ಮದಿಯನ್ನಿತ್ತಿತು. ದೂರದಲ್ಲಿ ಕೇಳಿಬರುವ ಕಪಿ ಸೈನ್ಯದ ಮಹಾನಾದ ಸರಮೆಯ ಮಾತಿಗೆ ಪುರಾವೆಯನ್ನೀಯುತ್ತಿತ್ತು.
 
ರಾವಣನ ಅಜ್ಜ ಮಾಲ್ಯವಂತನಿಗೂ ಈ ಪ್ರಸಂಗ ಕೆಡುಕೆ- ನಿಸಿತು. ಅವನೂ ರಾವಣನನ್ನು ತಿದ್ದಲೆಳಿಸಿದನು :
 
" ಮಗು ರಾವಣ ! ನನ್ನ ಹಿತವಚನವನ್ನು ನೀನು ಕೇಳಬೇಕು. ನನ್ನ ಮುಪ್ಪಿನ ಅನುಭವದ ಅಧಿಕಾರದಿಂದ ನಾನು ಈ ಮಾತ- ನ್ನಾಡುತ್ತಿದ್ದೇನೆ. ಅದನ್ನು ನೀನು ಅಲ್ಲಗಳೆಯಬಾರದು. ದೇವತೆ ಗಳು ಧರ್ಮಪಥದಲ್ಲಿ ನಡೆದರೆ ನಾವು ಅಧರ್ಮದ ಹಾದಿಯನ್ನು ತುಳಿವವರು. ಈಗ ಧರ್ಮದ<error> ಗೇಲು </error> <fix>ಗೆಲುವು</fix> ಅಧರ್ಮ ಸೋಲನ್ನನುಭವಿಸತೊಡಗಿದೆ. ನಾರಾಯಣನು ಧರ್ಮ ಪಕ್ಷದ ಸಂರಕ್ಷಕನಲ್ಲವೆ ? ದೇವತೆಗಳ ಪಕ್ಷಪಾತಿಯಲ್ಲವೆ ? ಆ ನಾರಾಯಣನೇ ರಾಮನಾಗಿ ಜನಿಸಿದ್ದಾನೆ ಎಂದು ನನ್ನ ತಿಳುವಳಿಕೆ. ಅವನ ಲೋಕೋತ್ತರ ಸಾಮರ್ಥ್ಯವೇ ಅದಕ್ಕೆ ಸಾಕ್ಷಿ ಅವನೊಡನೆ ಯುದ್ಧ ಸಲ್ಲದು. ಸಧ್ಯ ಸಂಧಾನವೇ ಸರಿಯಾದ ಮಾರ್ಗ. ವತ್ಸ, ಬೇಗನೆ ಸೀತೆಯನ್ನು ಕಳಿಸಿಕೊಡು. ಅವನ ಗೋಜು ನಮಗೆ ಬೇಡ. "
 
ರಾವಣನು ಇನ್ನಷ್ಟು ಸಿಡಿಮಿಡಿಗೊಂಡು ನುಡಿದನು :
 
" ಕುಲಕ್ಕೆ ಅನುರೂಪನಲ್ಲವೆಂದು ತಂದೆಯಿಂದ ನಿರ್ವಾಸಿತನಾದವನು ನನ್ನನ್ನು ಗೆಲ್ಲುವನೆ ? ರಾಜ್ಯಭ್ರಷ್ಟನಾಗಿ ಕಾಡಿನಲ್ಲಲೆವ ದುಃಖಿತ ಮಾನವ