This page has been fully proofread once and needs a second look.

ಸಂಗ್ರಹರಾಮಾಯಣ
 
" ಪರಮ ಸಾಧಿಧ್ವಿಯಾದ ಹೆಣ್ಣೆ ! ರಾಕ್ಷಸರ ಮಾಯೆಯಿಂದ ಮೋಸ
ಹೋಗಿ ದುಃಖಿಸಬೇಡ. ನಿನ್ನ ಪತಿಯ ಕೂದಲನ್ನೂ ಈ ರಾಕ್ಷಸರು ನಲುಗಿಸ
ಲಾರರು. ರಾಮನೂ ಅವನ ಅನಂತವಾದ ಕಪಿ ಸೈನ್ಯವೂ ಸುವೇಲಾದ್ರಿಯಲ್ಲಿ
ಕ್ಷೇಮದಿಂದ್ದಾರೆ. ಇದು ಕೇವಲ ಮಾಯಾ ಶಿರಸ್ಸು, ರಾವಣನ ದೂತರು
ರಾಮನೆಡೆಗೆ ತೆರಳಿದವರು ಕಪಿಗಳಿಂದ ತಪ್ಪಿಸಿಕೊಂಡು ಉಸಿರು ಏದುತ್ತ
ಬಂದು
ರಾಮನ ಅಪಾರ ಶಕ್ತಿಯನ್ನು ಬಣ್ಣಿಸಿದ್ದನ್ನು ನಾನು ಕೇಳಿದ್ದೇನೆ. ವೃದ್ಧರಾದ
ಮಂತ್ರಿಗಳು-ಹಿತೈಷಿಗಳು ಯಾರ ಮಾತನ್ನೂ ಲಕ್ಷಿಸದೆ ನಮ್ಮ ರಾವಣ ಅನ್ಯಾ
ಯದ ಪಥವನ್ನು ತುಳಿಯುತ್ತಿದ್ದಾನೆ. ನಿನ್ನನ್ನು ರಾಮಚಂದ್ರನಿಗೆ ಒಪ್ಪಿಸು
ವುದು ಆತನಿಗೆ ಹಿತವಾಗಿಲ್ಲ. ರಾಮನ ಬಾಣಗಳಿಗೆ ಬಲಿಯಾಗುವುದೇ ಆತನ
ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸುವುದು ಯಾರಿಗೆ ಸಾಧ್ಯ? "
 

 
ಸರಮೆಯ ಮಾತು ಸೀತೆಯ ಚಿತ್ಕ್ಕೆ ನೆಮ್ಮದಿಯನ್ನಿತ್ತಿತು. ದೂರದಲ್ಲಿ
ಕೇಳಿಬರುವ ಕಪಿ ಸೈನ್ಯದ ಮಹಾನಾದ ಸರಮೆಯ ಮಾತಿಗೆ ಪುರಾವೆಯ
ನ್ನೀಯುತ್ತಿತ್ತು.
 
೧೭೫
 

 
ರಾವಣನ ಅಜ್ಜ ಮಾಲ್ಯವಂತನಿಗೂ ಈ ಪ್ರಸಂಗ ಕೆಡುಕೆ- ನಿಸಿತು.
ಅವನೂ ರಾವಣನನ್ನು ತಿದ್ದಲೆಳಿಸಿದನು :
 
*

 
"
ಮಗು ರಾವಣ ! ನನ್ನ ಹಿತವಚನವನ್ನು ನೀನು ಕೇಳಬೇಕು. ನನ್ನ
ಮುಪ್ಪಿನ ಅನುಭವದ ಅಧಿಕಾರದಿಂದ ನಾನು ಈ ಮಾತ- ನ್ನಾಡುತ್ತಿದ್ದೇನೆ.
ಅದನ್ನು ನೀನು ಅಲ್ಲಗಳೆಯಬಾರದು. ದೇವತೆ ಗಳು ಧರ್ಮಪಥದಲ್ಲಿ ನಡೆದರೆ
ನಾವು ಅಧರ್ಮದ ಹಾದಿಯನ್ನು ತುಳಿವವರು. ಈಗ ಧರ್ಮದ<error> ಗೇಲು,
</error> <fix>ಗೆಲುವು</fix> ಅಧರ್ಮ ಸೋಲನ್ನನುಭವಿಸತೊಡಗಿದೆ. ನಾರಾಯಣನು ಧರ್ಮ ಪಕ್ಷದ
 
ಸಂರಕ್ಷಕನಲ್ಲವೆ ? ದೇವತೆಗಳ ಪಕ್ಷಪಾತಿಯಲ್ಲವೆ ? ಆ ನಾರಾಯಣನೇ ರಾಮ-
ನಾಗಿ ಜನಿಸಿದ್ದಾನೆ ಎಂದು ನನ್ನ ತಿಳುವಳಿಕೆ. ಅವನ ಲೋಕೋತ್ತರ
ಸಾಮರ್ಥ್ಯವೇ ಅದಕ್ಕೆ ಸಾಕ್ಷಿ
 
ಅವನೊಡನೆ ಯುದ್ಧ ಸಲ್ಲದು. ಸಧ್ಯ
ಸಂಧಾನವೇ ಸರಿಯಾದ ಮಾರ್ಗ,. ವತ್ಸ, ಬೇಗನೆ ಸೀತೆಯನ್ನು ಕಳಿಸಿ-
ಕೊಡು. ಅವನ ಗೋಜು ನಮಗೆ ಬೇಡ. "
 

 
ರಾವಣನು ಇನ್ನಷ್ಟು ಸಿಡಿಮಿಡಿಗೊಂಡು ನುಡಿದನು :
 
C
 

 
" ಕುಲಕ್ಕೆ ಅನುರೂಪನಲ್ಲವೆಂದು ತಂದೆಯಿಂದ ನಿರ್ವಾಸಿತನಾದವನು
ನನ್ನನ್ನು ಗೆಲ್ಲುವನೆ ? ರಾಜ್ಯಭ್ರಷ್ಟನಾಗಿ ಕಾಡಿನಲ್ಲಲೆವ ದುಃಖಿತ ಮಾನವ