This page has been fully proofread once and needs a second look.

ಕಪಿಗಳ ಸಂಖ್ಯಾತೀತ ಸೇನೆ ಒತ್ತಟ್ಟಿಗಿರಲಿ, ಕೋಟಿಕೋಟಿ ಕಪಿಗಳಿಗಿಂತಲೂ ಮಿಗಿಲಾದ ಮಹಾ ಪರಾಕ್ರಮಿಯಾದ ಹನುಮಂತನೊಬ್ಬನೆ ಸಾಕು ನಮ್ಮ ಲಂಕೆಯ ಹೆಸರನ್ನಡಗಿಸಲು!
 
ಲಕ್ಷ್ಮಣನು ರಾಮಚಂದ್ರನ ಸೋದರ, ಸುಗ್ರೀವ ವಾಲಿಯ ಒಡ
ಹುಟ್ಟಿದವನು. ಅಷ್ಟರಿಂದಲೆ ಅವರ ಬಲವನ್ನು ಊಹಿಸಿಕೊಳ್ಳ- ಬಹುದು. ನಾವು ಅವರೊಡನೆ ವಿರೋಧ ಕಟ್ಟಿಕೊಳ್ಳುವುದಕ್ಕಿಂತ ಲಂಕೆಯ ಹಿತದ ಕಡೆಗೆ ಗಮನ ಕೊಡುವುದು ಚೆನ್ನು ಎಂದು ನಮಗನಿಸುತ್ತಿದೆ. ರಾಮನೊಬ್ಬನೇ ಮೂರು ಲೋಕವನ್ನೂ ಸಂಹರಿಸಬಲ್ಲ. ಮಹಾಪ್ರಭು, ವಿರೋಧದ ಮಾತು ಸಾಕು. ಸೀತೆ ಯನ್ನು ರಾಮನಿಗೆ ಒಪ್ಪಿಸಿಬಿಡು. ನಾವು ಹಾಯಾಗಿ ಬಾಳೋಣ."
 
ಇವರ ಮಾತನ್ನು ಕೇಳಿದ ಮೇಲೆ ರಾಮಚಂದ್ರನ ಅಪಾರ ಸೇನೆಯನ್ನು ನೋಡಿದ ಮೇಲೆ ರಾವಣನ ಮನಸೂ ತಲ್ಲಣಿಸ- ದಿರಲಿಲ್ಲ. ಆದರೂ ತೋರಿಕೆಗೆ ಅವರನ್ನು ಗದರಿಸಿ ಮತ್ತೆ ಪುನಃ ಶಾರ್ದೂಲ ಮೊದಲಾದ ದೂತರನ್ನು ಕಳಿಸಿದನು.
 
ಅವರೂ ಕಪಿಗಳ ಕೈಯಿಂದ ಪೆಟ್ಟುತಿಂದು ಬಂದು ಹಿಂದಿ- ನದೇ ರಾಗವನೆಳೆದರು. ಯಾವ ದೂತನಿಂದಲೂ ರಾವಣನಿಗೆ ಆಶ್ವಾಸನೆಯ ಮಾತು ದೊರೆಯಲಿಲ್ಲ.
 
ಮತ್ತೆ ಮಂತ್ರಿಗಳಿಗೆ ಕರೆಬಂತು. ಗುಪ್ತಸಭೆ ನಡೆಯಿತು. ಕಡೆಗೆ ಒಂದು ನಿರ್ಧಾರಕ್ಕೆ ಬಂದ ರಾವಣ ಅಶೋಕ ವನಕ್ಕೆ ತೆರಳಿದನು. ಸೀತೆ ಭೀತಳಂತೆ ಕುಳಿತಿದ್ದಳು. ರಾವಣ ಅವಳೆದುರು ಒಂದು ಕುಹಕವನ್ನು ಪ್ರಯೋಗಿಸಿದ :
 
"ಸೀತೆ, ರಾಮನ ಜೀವನ ಇಂದು ಕೊನೆಗೊಂಡಿತು. ಅಗೋ ಅಲ್ಲಿ ವಿದ್ಯುಜ್ಜಿವ್ವನ ಕೈಯಲ್ಲಿದೆ ನಿನ್ನ ಪ್ರೀತಿಯ ರಾಮನ ತುಂಡಾದ ರುಂಡ."
 
ವಿದ್ಯುಜ್ಜಿಹ್ವನು ಪೂರ್ವ ಸಿದ್ಧತೆಯಂತೆ ರಾಮನ ಆಕೃತಿ-
ಯನ್ನು ಹೋಲುವ ಒಂದು ತಲೆಯನ್ನು ತಂದು ಸೀತೆಗೆ ತೋರಿಸಿ ದನು. ಸೀತೆ ಅದನ್ನು ಕಂಡು ವಿಲಾಪಿಸಿದಳೇ ಹೊರತು ರಾವಣ- ನಿಗೆ ಮರುಳಾಗಲಿಲ್ಲ.
 
ರಾವಣ ನಿಷ್ಪಲವಾಗಿ ಅಕೃತಾರ್ಥನಾಗಿ ಅಲ್ಲಿಂದ ಮರಳಿದ. ವಿಭೀಷಣನ ಧರ್ಮಪತ್ನಿ ಸುರಮೆ ಸೀತೆಯನ್ನು ಸಂತೈಸಿದಳು :