This page has been fully proofread once and needs a second look.

ಸಂಗ್ರಹರಾಮಾಯಣ
 
ಯಾಯಿತೆ ! ಹಾಗಿದ್ದರೆ ನಿರ್ಭಯವಾಗಿ ನಿಮ್ಮ ರಾಜನ ಬಳಿಗೆ ಹೋಗ
ಬಹುದು. ಇನ್ನೂ ಎಣಿಸುವುದು ಬಾಕಿಯಿದ್ದರೆ ನಿಮ್ಮ ಕೆಲಸವನ್ನು ನೀವು
ಪೂರೈಸಿಕೊಳ್ಳಬಹುದು. ಬೇಕಾದರೆ ವಿಭೀಷಣನೂ ನಿಮ್ಮ ಸಹಾಯಕ್ಕೆ
ಬರುತ್ತಾನೆ. ಧಾರಾಳವಾಗಿ ರಾಮನ ಸೇನೆಯನ್ನು ಪರಿಕಿಸಿ ರಾವಣನಿಗೆ
ವರದಿ ಮುಟ್ಟಿಸಿರಿ. ಸಂತೋಷ
 
(C
 
*
.
 
"
ನಿಮ್ಮ ರಾಜನ ಹೃದಯ ಅನಂಗ ಬಾಣ ಪೀಡಿತವಾಗಿದೆ- ಯಲ್ಲ. ನಮ್ಮ
ಬಾಣ ಕೂಡ ಸದ್ಯದಲ್ಲಿ ಅದನ್ನು ಪೀಡಿಸಲಿದೆ. ಈ ಮಾತನ್ನೂ ನಿಮ್ಮ
ರಾಜನಿಗೆ ತಿಳಿಸಿಬಿಡಿ. "
 
೧೭.
 

 
ಸುಗ್ರೀವನೂ ಸಿಟ್ಟಿನಿಂದ ಗದರಿದನು:
 

 
"
ನೀವಿಬ್ಬರೂ ಈ ಮಾತನ್ನು ಕೂಡ ರಾವಣನ ಬಳಿ ಹೇಳಬೇಕು.
ರಾಮನೆಂಬ ಬೆಂಕಿಯಲ್ಲಿ ರಾವಣನೆಂಬ ಪಶುವಿನ ಹೋಮ ನಡೆಯಲಿದೆ.
ರಣರಂಗದಲ್ಲಿ ನಡೆವ ಈ ಮಹಾಯಾಗದ ಋತ್ವಿಕ್ಕುಗಳು ಕಿಷ್ಕಂಕಿಂಧೆಯ ಕಪಿಗಳು
 
ಎಂದು ತಿಳಿಸಿಬಿಡಿ,
 
ಬಿದ
 
."
 
ಅಲ್ಲಿಂದ ಒಂದೇ ಉಸಿರಿಗೆ ಓಡಿಬಂದ ಶುಕ-ಸಾರಣರು ಅರಮನೆಯ
ಅಟ್ಟದಲ್ಲಿ ಠೀವಿಯಿಂದ ಕುಳಿತಿರುವ ರಾವಣನಿಗೆ ಈ ವಾರ್ತೆಯನ್ನು ಮುಟ್ಟಿಸಿ
 
ದರು :
 
*

 
"
ಮಹಾರಾಜ, ಸುವೇಲಾದ್ರಿಯಿಂದ ಲಂಕೆಯ ಕಡೆಗೆ ಸರಿಯುತ್ತಿರುವ
ರಾಮನಸೇನೆ ಅಪಾರವಾಗಿದೆ. ನೀಲ, ಅಂಗದ, ನಲ, ಶ್ವೇತ, ಕುಮುದ,
ಪನಸ, ಶರಭ, ರಂಭ ಈ ಒಬ್ಬೊಬ್ಬರೂ ಭಾರಿ ಬಲವುಳ್ಳವರು. ಇಂಥವರು
ಒಬ್ಬಿಬ್ಬರಲ್ಲ, ನೂರಾರು, ಸಾವಿರಾರು, ಲಕ್ಷ, ಕೋಟಿಗಟ್ಟಲೆ ಕಪಿಗಳಿದ್ದಾರೆ.
ತಾರ, ಧೂಮ್ರ, ಜಾಂಬವಂತ, ವಿನತ, ಕತ್ಥನ, ಕೇಸರಿ, ಶತಬಲಿ, ಪ್ರಮಾಥಿ,
ಗಜ ಮೊದಲಾದವರ ಶಕ್ತಿಯನ್ನಳೆವ ಮಾನದಂಡವಾದರೂ ಎಲ್ಲಿದೆ ?
 

 
ಕಪಿಗಳ ಸಂಖ್ಯೆಯನ್ನು ಅರುಹಲು ಗಣಿತಶಾಸ್ತ್ರ ಅಸಮರ್ಥ- ವಾಗಿದೆ.
ಗಣಿತಶಾಸ್ತ್ರದಲ್ಲಿ ಹೇಳಿರುವ ಯಾವ ಸಂಖ್ಯೆಯ ಹೆಸರೂ ಈ ಕಪಿ ಸೇನೆಯನ್ನು
ಅಳವಡಿಸಿಕೊಳ್ಳಲಾರದು. ಈ ಅಪಾರ ಸೇನೆಗೆ ಮುಂದಾಳುಗಳಾಗಿ ರಾಮ-
ಲಕ್ಷ್ಮಣರಿದ್ದಾರೆ, ಸುಗ್ರೀವ- ನಿದ್ದಾನೆ, ವಿಭೀಷಣನಿದ್ದಾನೆ.