This page has been fully proofread once and needs a second look.

ಮಿಂಚಿನಬಳ್ಳಿ
 
ಕಪಿಗಳಿಗೆ ಉತ್ಸಾಹದ ಭರದಲ್ಲಿ ನೂರುಯೋಜನ ನಡೆದು ಬಂದುದೇ
ತಿಳಿಯಲಿಲ್ಲ. ಎದುರುಗಡೆ ಲಂಕೆಯ ಸುವೇಲಾದ್ರಿ ಕಾಣಿಸಿಕೊಂಡಿತು. ಕಪಿ
ಗಳನ್ನೆಲ್ಲ ಅಲ್ಲಿ ವಿಶ್ರಮಿಸುವಂತೆ ಹೇಳಿ ರಾಮಚಂದ್ರನು ಲಕ್ಷ್ಮಣನೊಡನೆ
ಬೆಟ್ಟವನ್ನೇರಿ ಲಂಕೆಯನ್ನು ದಿಟ್ಟಿಸಿದನು.
 

 
ಪ್ರಭುವಿನ ಕಣ್ಣು ಲಂಕೆಯ ವೈಭವವನ್ನು ಪರಿಕಿಸುತ್ತಿತ್ತು. ಕೈ ಬಾಣ-
ವನ್ನು ಹುಡುಕುತ್ತಿತ್ತು. ತೋಳು ಹನುಮಂತನ ಹೆಗಲ ಮೇಲೆ ಪವಡಿಸಿತ್ತು.
 
೧೭೨
 

 
ರಾಮನಿಂದ ಪಾರಾಗುವಂತಿಲ್ಲ
 

 
ಸೇನಾವ್ಯೂಹದ ರಚನೆಯನ್ನು ಮುಗಿಸಿದ ಮೇಲೆ ಕಪಿಗಳ ಕೈಯಲ್ಲಿ ಸಿಕ್ಕು
ಬಿದ್ದಿದ್ದ ಶುಕನನ್ನೆ ರಾವಣನೆಡೆಗೆ ದೂತನಾಗಿ ಕಳಿಸಲಾಯಿತು. ಶುಕನು ಕಪಿ-
ಗಳ ಕೈಯಿಂದ ಹೇಗೊ ಪಾರಾಗಿ ರಾವಣನ ಬಿಳಿ ವರದಿಯನ್ನೊಪ್ಪಿಸಿದನು.
 

 
ರಾವಣನು ಪುನಃ ಶುಕ-ಸಾರಣರನ್ನು ರಾಮ ಸೈನ್ಯದ ಸಂಖ್ಯೆಯನ್ನು
ತಿಳಿದು ಬರುವುದಕ್ಕಾಗಿ ಕಳಿಸಿದನು. ಅವರು ಕಪಿಗಳಂತೆಯ ರೂಪವನ್ನು
ಧರಿಸಿ ಕಪಿಸೇನೆಯೊಡನೆ ಸೇರಿ ಕೊಂಡು ಕಪಿಗಳನ್ನು ಲೆಕ್ಕಿಸತೊಡಗಿದರು.
ಕೆಲವರು ಲಂಕೆಯ ತಡಿಗೆ ಬಂದಿದ್ದರೆ, ಇನ್ನು ಕೆಲವರು ಸೇತುಮಾರ್ಗವಾಗಿ

ಬರುತ್ತಿದ್ದಾರಷ್ಟೇ ? ಮತ್ತೆ ಕೆಲವರು ಸಮುದ್ರದ ಆಚೆಯ ತಡಿಯಲ್ಲಿ ಇದ್ದಾರೆ.
ಅಷ್ಟು ಅಪಾರವಾಗಿದೆ ಕಪಿಗಳ ಸೈನ್ಯ. ಶುಕ-ಸಾರಣರು ಬಹು ಜಾಗರೂಕತೆ-
ಯಿಂದ ಎಣಿಸಲಾರಂಭಿಸಿದರು. ಹೇಗೋ ವಿಭೀಷಣನಿಗೆ ಈ ಕಪಟ ತಿಳಿದು
ಹೋಯಿತು. ಅವನು ' ' ಇದು ರಾಕ್ಷಸರ ಮಾಯೆ ' ಎಂದು ತಿಳಿಸಿಬಿಟ್ಟನು.
ಕೂಡಲೆ ಕಪಿಗಳೆಲ್ಲ ಸೇರಿ ಶುಕ-ಸಾರಣರನ್ನು ಅರ್ಧಜೀವಮಾಡಿಬಿಟ್ಟರು. ಶುಕ
-ಸಾರಣರು ರಾಮನಿಗೆ ಮೊರೆಹೊಕ್ಕರು :
 

 
"
ಧಾರ್ಮಿಕನಾದ ರಾಮಚಂದ್ರನೆ, ನಾವು ರಾವಣನ ದೂತರು ನಿಜ.
ನಿನ್ನ ಸೇನಾಬಲವನ್ನು ಪರೀಕ್ಷಿಸಲು ಬಂದದ್ದೂ ನಿಜ. ಇದೋ ಕೈಮುಗಿದು
ಬೇಡಿಕೊಳ್ಳುತ್ತಿದ್ದೇವೆ ನಮಗೆ ಪ್ರಾಣಭಿಕ್ಷೆ- ಯನ್ನು ನೀಡು."
 

 
ರಾಮಚಂದ್ರನು ಮುಗುಳುನಗುತ್ತ ಪರಿಹಾಸಮಾಡಿದನು :
 
(6
 

 
" ನಿರಾಯುಧರಾದ ನಿಮ್ಮನ್ನು ರಾಮನ ಸೇನೆ ಏನೂ ಮಾಡ- ಲಾರದು.
ಭಯಪಡಬೇಡಿ. ನೀವು ಬಂದ ಕೆಲಸ ತೀರಿತೆ ! ಸೇನಾ ಬಲವನ್ನು ಪರಿಕಿಸಿ
 
-