This page has not been fully proofread.

ಸಂಗ್ರಹರಾಮಾಯಣ
 
ಸಮುದ್ರರಾಜನ ವಚನದಂತೆ ದುಕೂಲಕ್ಕೆಸೆದ ರಾಮನ ಬಾಣ ಅಸುರ
ಸಂತಾನವನ್ನು ನಿರ್ಮೂಲಿಸಿತು. ಭಗವಂತನ ಬಾಣ ಮರುಭೂಮಿಯನ್ನು
ಚಿಗುರಿಸಿತು. ಆ ತಾಣ ಹೂ-ಹಣ್ಣುಗಳಿಂದ ತುಂಬಿ ನಿಂತಿತು. ಅಂದಿನಿಂದ
ಜನ ಅದನ್ನು ಮರುಕಾಂತಾರ ಎಂದು ಕರೆದರು.
 
ಅನಂತರ ವಿಶ್ವಕರ್ಮನ ಮಗನಾದ ನಲ ಸೇತುನಿರ್ಮಾಣಕ್ಕೆ ತೊಡಗಿ
ದನು. ಕಪಿಗಳು ದಿಸೆ ದಿಸೆಗಳಿಂದ ಪರ್ವತಗಳನ್ನೂ ಬಂಡೆಕಲ್ಲುಗಳನ್ನೂ ಮರ
ಗಳನ್ನೂ ಹೊತ್ತು ತಂದರು. ಕೆಲವರು ಹಗ್ಗ ಹಿಡಿದು ಅಳೆದರು. ಕೆಲವರು
ಕಲ್ಲು-ಮರಗಳಿಂದ ಸಾಗರವನ್ನು ತುಂಬಿದರು. ಅಂತೂ ನಲನ ಮೇಲ್ವಿಚಾರಣೆ
ಯಲ್ಲಿ ಸೇತುಕಾರ್ಯ ಮುಂದುವರೆಯಿತು.
 
ಅಂಗದನು ಕೈಲಾಸದ ಒಂದು ಭಾಗವನ್ನೇ ಕಿತ್ತು ತಂದನು. ಮೈಂದ
ಹಿಮವಂತನ ಒಂದು ಶಿಖರವನ್ನೆ ತಂದನು. ಹನುಮಂತನು ಮೇರುವಿನ ಒಂದು
ಉಪ ಪರ್ವತವನ್ನು ಹೊತ್ತು ತಂದನು. ಜಾಂಬವಂತನು ಮಾಹೇಂದ್ರದ ಶಿಖರ
ವೊಂದನ್ನು ತಂದನು. ಕಪಿಗಳು ಹೋದಲ್ಲೆಲ್ಲ ಪರ್ವತ ದೇವತೆಗಳು ಸಂತಸ
ದಿಂದ ಪರ್ವತ ಭಾಗವನ್ನು ಅವರಿಗೆ ಒಪ್ಪಿಸುತ್ತಿದ್ದರು. ಭಗವತೇವೆಯಲ್ಲಿ
ಪಾಲುಗಾರರಾಗಲು ಎಲ್ಲರಿಗೂ ಆತುರ.
 
ರಾಮದಾಸರಾದ ಕಪಿಗಳ ಈ ಅದ್ಭುತವನ್ನು ನೋಡಲು ಮುಗಿಲಲ್ಲಿ
ದೇವತೆಗಳು ಮುತ್ತಿದರು. ಎಲ್ಲಿ ನೋಡಿದರೂ ಕಪಿಗಳದೇ ಕೋಲಾಹಲ, ಕೆಲ
ವರು ಪರ್ವತಗಳನ್ನು ತರಲು ಹಾರುತ್ತಿದ್ದಾರೆ. ಇನ್ನು ಕೆಲವರು ಹೊತ್ತು
ತರುತ್ತಿದ್ದಾರೆ. ಮತ್ತೆ ಕೆಲವರು ಸಾಗರದಲ್ಲಿ ಸೇತುವನ್ನು ರಚಿಸುತ್ತಿದ್ದಾರೆ.
ನೆಲ-ಮುಗಿಲುಗಳಲ್ಲಿ ನೀರಿನಲ್ಲಿ ಎಲ್ಲಿ ನೋಡಿದರಲ್ಲಿ ಕಪಿಗಳು, ಅವರ ವೇಗ-
ಹುಮ್ಮಸ್ಸು ಹೇಳತೀರದು. ಹೀಗೆ ನಿರಂತರ ಕೆಲಸ ನಡೆಯಿತು. ಐದೇ ದಿನ
ಗಳಲ್ಲಿ ಹತ್ತು ಯೋಜನ ಅಗಲದ, ನೂರು ಯೋಜನ ದೂರದ ಸೇತುವೆ
ನಿರ್ಮಾಣವಾಗಿ ಹೋಯಿತು !
 
೧೭೧
 
ಈ ತೇಲುವ ಕಲ್ಲಿನಮೇಲೆ ಕಪಿಗಳು ನಡೆಯತೊಡಗಿದರು. ಸೇನೆಯ
ಮುಂದೆ ಗದಾಪಾಣಿಯಾದ ವಿಭೀಷಣ ಮತ್ತು ಅವನ ಸಚಿವರು ನಡೆದರು.
ಹನುಮಂತನು ರಾಮಚಂದ್ರನನ್ನು ಹೊತ್ತುಕೊಂಡನು. ಲಕ್ಷ್ಮಣನು ಅಂಗದನ
ಹೆಗಲೇರಿದನು. ಸುಗ್ರೀವನೂ ಅವರ ಜತೆಯಾದನು. ಹಿಂದೆ ಕಸಿಗಳ
ಅಪಾರ ಸೇನೆ,