This page has been fully proofread once and needs a second look.

ಮಿಂಚಿನಬಳ್ಳಿ
 
ಸಮುದ್ರರಾಜನೂ ರಾಮಚಂದ್ರನ ಸಲಹೆಯನ್ನು ತಪ್ಪು ತಿಳಿದುಕೊಂಡಿರ
ಬೇಕು. ಭಕ್ತನ ಪ್ರಮಾದ ಭಗವಂತನಿಗೆ ಸಹನೆ ಯಾಗಲಿಲ್ಲ. ರಾಮಚಂದ್ರನ
ಕೈ ಬಿಲ್ಲಿನೆಡೆಗೆ ಹರಿಯಿತು. ಭಗವಂತನ ಕೋಪಜ್ವಾಲೆ ಕಡಲಿನ ಒಡಲನ್ನು
 
ಬೇಯಿಸಿತು !
 
೧೭೦
 

 
'ಕಡಲು ಬತ್ತಿದರೆ ಬಾಳು ಬರಡಾಗುತ್ತದೆ. ಲೋಕ ಬರಡಾ- ಗುತ್ತದೆ.
ತಾಳ್ಮೆಯಿರಲಿ' ಎಂದು ದೇವತೆಗಳೂ ಮುನಿಗಳೂ ಪ್ರಾರ್ಥಿಸಿಕೊಂಡರು.
 

 
" ನೀನು ಕೋಪಿಸಿದರೆ ಜಗತ್ತಿಗೆ ವಿಪತ್ತು. ಪ್ರಸನ್ನನಾದರೆ ಪರಮ

ಸಂಪತ್ತು, ಶಾಂತನಾಗು" ಎಂದು ಲಕ್ಷ್ಮಣನು ರಾಮನ ಬಿಲ್ಲಿಗೇ ಜೋತುಬಿದ್ದು
ಬೇಡಿಕೊಂಡನು.
 

 
ಕಡಲು ತಳಮಳಿಸಿತು. ನೀರಿನ ಜಂತುಗಳು ಕುದಿವ ನೀರಿಗೆ ಬಿದ್ದಂತೆ
ವಿಲಿವಿಲಿ ಒದ್ದಾಡಿದವು. ಸಮುದ್ರರಾಜ ಉಡುಗರೆ ಯನ್ನು ಹೊತ್ತು ಮೈವೆತ್ತು
ನಡೆದು ಬಂದನು. ಮಡದಿಯರಾದ ಗಂಗಾದಿ ನದಿಗಳೂ ಜತೆಗಿದ್ದರು. ಎಲ್ಲರೂ
ರಾಮನ ಚರಣಗಳಿಗೆ ಎರಗಿದರು. ಭೀತನಾದ ವರುಣ ಅಪರಾಧಿಗಳಂತೆ
ವಿಜ್ಞಾಪಿಸಿ ಕೊಂಡನು:
 

 
"ನನ್ನ ಬರಡು ಬುದ್ಧಿಗೆ ನಿನ್ನ ಮಹಿಮೆಯ ಅರಿವಾಗಲಿಲ್ಲ. ಜಗತ್ತಿನ
ಹುಟ್ಟು ಸಾವುಗಳು ನಿನ್ನ ಹುಬ್ಬಿನ ಕುಣಿತದಿಂದ ನಡೆ- ಯುತ್ತಿವೆ ಎಂದು ತಿಳಿಯದೆ
ದಾರಿ ತಪ್ಪಿ ನಡೆದೆ. ಕ್ಷಮೆಯಿರಲಿ.
 

 
ಈ ಜಲರಾಶಿಯ ಮೇಲೆ ಸೇತುವೆಯನ್ನು ರಚಿಸು. ರಾವಣನನ್ನು
- ನನ್ನುಸಂಹರಿಸಿ ಸೀತೆಯನ್ನು ಪಡೆ, ನನ್ನನ್ನು ಕುಡಿದು ತೇಗಿದ ಅಗಸ್ಯರು ಹಿಂದೆ
ಹೇಳಿದ್ದರು. ನಲನೆಂಬ ಕಪಿ ಹಾಕಿದ ಕಲ್ಲು- ಗಳನ್ನು ನೀನು ಕಬಳಿಸಬೇಡ' ಎಂದು.
ಅದರಿಂದ ನಲನು ಈ ಸೇತು ಕಾವ್ರ್ಯವನ್ನು ಮಾಡಲಿ. ಅವನಿಗೆ ಅಗಸ್ತರ
ವರದ ಕಾಪು ಇದೆ. ಅವನು ಎಸೆದ ಕಲ್ಲುಗಳು ನೀರಿನಲ್ಲಿ ತೇಲಬಲ್ಲವು.
 

 
ನಾನು ಮೂರುದಿನಗಳ ವರೆಗೆ ನನ್ನ ಪ್ರಭುವನ್ನು ಕಾಯಿಸಿ ಅಪರಾಧ
ಮಾಡಿದ್ದೇನೆ, ಕ್ಷಮಿಸಬೇಕು. ನಿನ್ನ ಅಮೋಘವಾದ ಬಾಣವನ್ನು ಎಸೆಯುವ
ತಾಣವನ್ನು ನಾನು ನಿವೇದಿಸ ಬಯಸು ತ್ತೇನೆ. ನನ್ನ ಮಧ್ಯಭಾಗದಲ್ಲಿ ದುಕೂಲ
ವೆಂಬ ಮರುಭೂಮಿ ಯಿದೆ. ಅಲ್ಲಿ ಕೆಲವು ಅಸುರರು ವಾಸಿಸುತ್ತಿದ್ದಾರೆ. ಅವರು
ನಿನ್ನ ಬಾಣಕ್ಕೆ ಆಹಾರವಾಗಬೇಕು. ಆಗ ಸಜ್ಜನರು ಸಂತಸಗೊಳ್ಳುತ್ತಾರೆ:
 
"