2023-03-15 15:35:51 by ambuda-bot
This page has not been fully proofread.
ಮಿಂಚಿನಬಳ್ಳಿ
ಸಮುದ್ರರಾಜನೂ ರಾಮಚಂದ್ರನ ಸಲಹೆಯನ್ನು ತಪ್ಪು ತಿಳಿದುಕೊಂಡಿರ
ಬೇಕು. ಭಕ್ತನ ಪ್ರಮಾದ ಭಗವಂತನಿಗೆ ಸಹನೆಯಾಗಲಿಲ್ಲ. ರಾಮಚಂದ್ರನ
ಕೈ ಬಿಲ್ಲಿನೆಡೆಗೆ ಹರಿಯಿತು. ಭಗವಂತನ ಕೋಪಜ್ವಾಲೆ ಕಡಲಿನ ಒಡಲನ್ನು
ಬೇಯಿಸಿತು !
೧೭೦
'ಕಡಲು ಬತ್ತಿದರೆ ಬಾಳು ಬರಡಾಗುತ್ತದೆ. ಲೋಕ ಬರಡಾಗುತ್ತದೆ.
ತಾಳ್ಮೆಯಿರಲಿ' ಎಂದು ದೇವತೆಗಳೂ ಮುನಿಗಳೂ ಪ್ರಾರ್ಥಿಸಿಕೊಂಡರು.
" ನೀನು ಕೋಪಿಸಿದರೆ ಜಗತ್ತಿಗೆ ವಿಪತ್ತು. ಪ್ರಸನ್ನನಾದರೆ ಪರಮ
ಸಂಪತ್ತು, ಶಾಂತನಾಗು" ಎಂದು ಲಕ್ಷ್ಮಣನು ರಾಮನ ಬಿಲ್ಲಿಗೇ ಜೋತುಬಿದ್ದು
ಬೇಡಿಕೊಂಡನು.
ಕಡಲು ತಳಮಳಿಸಿತು. ನೀರಿನ ಜಂತುಗಳು ಕುದಿವ ನೀರಿಗೆ ಬಿದ್ದಂತೆ
ವಿಲಿವಿಲಿ ಒದ್ದಾಡಿದವು. ಸಮುದ್ರರಾಜ ಉಡುಗರೆಯನ್ನು ಹೊತ್ತು ಮೈವೆತ್ತು
ನಡೆದು ಬಂದನು. ಮಡದಿಯರಾದ ಗಂಗಾದಿ ನದಿಗಳೂ ಜತೆಗಿದ್ದರು. ಎಲ್ಲರೂ
ರಾಮನ ಚರಣಗಳಿಗೆ ಎರಗಿದರು. ಭೀತನಾದ ವರುಣ ಅಪರಾಧಿಗಳಂತೆ
ವಿಜ್ಞಾಪಿಸಿಕೊಂಡನು:
"ನನ್ನ ಬರಡು ಬುದ್ಧಿಗೆ ನಿನ್ನ ಮಹಿಮೆಯ ಅರಿವಾಗಲಿಲ್ಲ. ಜಗತ್ತಿನ
ಹುಟ್ಟು ಸಾವುಗಳು ನಿನ್ನ ಹುಬ್ಬಿನ ಕುಣಿತದಿಂದ ನಡೆಯುತ್ತಿವೆ ಎಂದು ತಿಳಿಯದೆ
ದಾರಿ ತಪ್ಪಿ ನಡೆದೆ. ಕ್ಷಮೆಯಿರಲಿ.
ಈ ಜಲರಾಶಿಯ ಮೇಲೆ ಸೇತುವೆಯನ್ನು ರಚಿಸು. ರಾವಣನನ್ನು
ಸಂಹರಿಸಿ ಸೀತೆಯನ್ನು ಪಡೆ, ನನ್ನನ್ನು ಕುಡಿದು ತೇಗಿದ ಅಗಸ್ಯರು ಹಿಂದೆ
ಹೇಳಿದ್ದರು. ನಲನೆಂಬ ಕಪಿ ಹಾಕಿದ ಕಲ್ಲುಗಳನ್ನು ನೀನು ಕಬಳಿಸಬೇಡ' ಎಂದು.
ಅದರಿಂದ ನಲನು ಈ ಸೇತು ಕಾವ್ಯವನ್ನು ಮಾಡಲಿ. ಅವನಿಗೆ ಅಗಸ್ತರ
ವರದ ಕಾಪು ಇದೆ. ಅವನು ಎಸೆದ ಕಲ್ಲುಗಳು ನೀರಿನಲ್ಲಿ ತೇಲಬಲ್ಲವು.
ನಾನು ಮೂರುದಿನಗಳ ವರೆಗೆ ನನ್ನ ಪ್ರಭುವನ್ನು ಕಾಯಿಸಿ ಅಪರಾಧ
ಮಾಡಿದ್ದೇನೆ, ಕ್ಷಮಿಸಬೇಕು. ನಿನ್ನ ಅಮೋಘವಾದ ಬಾಣವನ್ನು ಎಸೆಯುವ
ತಾಣವನ್ನು ನಾನು ನಿವೇದಿಸ ಬಯಸುತ್ತೇನೆ. ನನ್ನ ಮಧ್ಯಭಾಗದಲ್ಲಿ ದುಕೂಲ
ವೆಂಬ ಮರುಭೂಮಿಯಿದೆ. ಅಲ್ಲಿ ಕೆಲವು ಅಸುರರು ವಾಸಿಸುತ್ತಿದ್ದಾರೆ. ಅವರು
ನಿನ್ನ ಬಾಣಕ್ಕೆ ಆಹಾರವಾಗಬೇಕು. ಆಗ ಸಜ್ಜನರು ಸಂತಸಗೊಳ್ಳುತ್ತಾರೆ: