This page has been fully proofread once and needs a second look.

ಸಂಗ್ರಹರಾಮಾಯಣ
 
೧೬೯
 
ಬಂಧುಗಳನ್ನು ಸಂಹಾರಮಾಡಿದ್ದರೆ ಪ್ರತೀಕಾರಕ್ಕಾಗಿ, ಶೂರ್ಪಣಖೆಯ
ಮೂಗನ್ನು ಕತ್ತರಿಸಿದವರ ದರ್ಪವನ್ನು ದಮಿಸು ವುದಕ್ಕಾಗಿ,. ನೀನು ನಮ್ಮ
ಮಹಾರಾಜನಿಗೆ ಸೋದರನಂತಿರುವೆ. ನಿನಗೂ ನಮಗೂ ವಿರೋಧವೇನೂ
ಇಲ್ಲ. ಅಲ್ಲದೆ, ದೇವದಾನವ ರಿಗೆಲ್ಲ ಅಗತ್ಮ್ಯವಾದ ಲಂಕೆಗೆ ಕಪಿಗಳು ನುಸುಳು-
ವುದುಂಟೆ ? ಅದರಿಂದ ನೀನು ಈ ಯುದ್ಧದಲ್ಲಿ ಕೈ ಹಾಕಬಾರದು. ಇದು

ರಾಮನಿಗೂ ರಾವಣನಿಗೂ ಸಂಬಂಧಪಟ್ಟದ್ದು. ನೀನು ಹಾಯಾಗಿ ಕಿಸ್ಷ್ಕಿಂಧೆಗೆ
 
ಮರಳಬೇಕು. "
 

 
ಅಂಗದಾದಿಗಳಿಗೆ ಈ ಮಾತು ಸಹಿಸದಾಯಿತು. ಅವರು ಬಾನಿಗೆ
ನೆಗೆದು ಅವನ ಗರಿಗಳನ್ನು ಮುರಿದು ಕೆಳಗೆ ಕೆಡವಿದರು. ಭೂಮಿ ಯಲ್ಲಿ ಬಿದ್ದು
ಹೊರಳುವುದು ಬೇರೆ, ಬಲಮತ್ವಂತರಾದ ಕಪಿಗಳ ಮುಷ್ಟಿ ಪ್ರಹಾರ ಬೇರೆ. ಶುಕ-
ನಿಂದ ಇದು ತಡೆಯಲಾಗಲಿಲ್ಲ. ಅವನು ರಾಮಚಂದ್ರನನ್ನು ಕೂಗಿ ಬೇಡಿ-
ಕೊಂಡನು :
 

 
"ರಾಜಧರ್ಮವನ್ನು ಬಲ್ಲ ರಾಮಚಂದ್ರನೆ ! ನಿನ್ನ ಕಪಿಗಳು ನನ್ನನ್ನು
ಕೊಲ್ಲುತ್ತಿದ್ದಾರೆ. ರಾವಣ ದೂತನಾದ ನನ್ನನ್ನು ಕಾಪಾಡು."
 

 
"ಇವನು ಚಾರನಲ್ಲ- ಚೋರ" ಎಂದು ಅಂಗದನು ಗದರಿಸಿದನು.
 
(6
 

 
" ಛೇ, ಛೇ, ರಾವಣನ ದೂತನನ್ನು ಕೊಲ್ಲಬೇಡಿ " ಎಂದು ರಾಮನು
ಮುಗುಳುನಕ್ಕನು.
 

 
ಸುಗ್ರೀವನ ಪ್ರತಿಸಂದೇಶ ಮಾರ್ಮಿಕವಾಗಿತ್ತು:
 

 
"ರಾಮನ ಶತ್ರು ನನಗೂ ಶತ್ರು, ರಾವಣನನ್ನು ಯಮಪುರಿಗೆ ಕಳಿ-
ಸುವುದು ಸುಗ್ರೀವನಿಗೂ ಪ್ರಿಯವಾಗಿದೆ ಎಂದು ನಿನ್ನ ರಾವಣನ ಬಳಿ ಹೇಳು."
 
*
 
*
 

 
ಹುಲ್ಲುಗರಿಯ ಮೇಲೆ ಮಲಗಿ ಮೂರು ದಿನ ಕಾದದ್ದಾಯಿತು. ಸಾಗರ
ದಾರಿ ಕೊಡುವ ಯೋಚನೆ ಕಂಡುಬರಲಿಲ್ಲ !
 

 
ಜನ ಶಾಂತಿಯನ್ನು ದೌರ್ಬಲ್ಯದ ಕುರುಹು ಎಂದು ತಿಳಿದು ಬಿಡುತ್ತಾರೆ.
ಅದು ದೊಡ್ಡ ತಪ್ಪು. ನೀಚರಿಗೆ ಸಹನೆಗಿಂತಲೂ ದಂಡನೆಯೇ ರುಚಿಯಾಗಿರು
ತ್ತದೆ. ಶಾಂತಿಯ ಸಂದೇಶಕ್ಕಿಂತಲೂ ಯುದ್ಧದ ಕರೆಯೇ ಪ್ರಿಯವಾಗಿರುತ್ತದೆ.
ಪ್ರಪಂಚದ ಈ ಮಹಾ ಪ್ರಮಾದದಿಂದ ಯುದ್ಧದ ಕಿಡಿ ಸಿಡಿಯುವುದುಂಟು.