2023-03-15 15:35:51 by ambuda-bot
This page has not been fully proofread.
ಸಂಗ್ರಹರಾಮಾಯಣ
೧೬೯
ಬಂಧುಗಳನ್ನು ಸಂಹಾರಮಾಡಿದ್ದರೆ ಪ್ರತೀಕಾರಕ್ಕಾಗಿ, ಶೂರ್ಪಣಖೆಯ
ಮೂಗನ್ನು ಕತ್ತರಿಸಿದವರ ದರ್ಪವನ್ನು ದಮಿಸುವುದಕ್ಕಾಗಿ, ನೀನು ನಮ್ಮ
ಮಹಾರಾಜನಿಗೆ ಸೋದರನಂತಿರುವೆ. ನಿನಗೂ ನಮಗೂ ವಿರೋಧವೇನೂ
ಇಲ್ಲ. ಅಲ್ಲದೆ, ದೇವದಾನವರಿಗೆಲ್ಲ ಅಗತ್ಯವಾದ ಲಂಕೆಗೆ ಕಪಿಗಳು ನುಸುಳು-
ವುದುಂಟೆ ? ಅದರಿಂದ ನೀನು ಈ ಯುದ್ಧದಲ್ಲಿ ಕೈ ಹಾಕಬಾರದು. ಇದು
ರಾಮನಿಗೂ ರಾವಣನಿಗೂ ಸಂಬಂಧಪಟ್ಟದ್ದು. ನೀನು ಹಾಯಾಗಿ ಕಿಸ್ಕಿಂಧೆಗೆ
ಮರಳಬೇಕು. "
ಅಂಗದಾದಿಗಳಿಗೆ ಈ ಮಾತು ಸಹಿಸದಾಯಿತು. ಅವರು ಬಾನಿಗೆ
ನೆಗೆದು ಅವನ ಗರಿಗಳನ್ನು ಮುರಿದು ಕೆಳಗೆ ಕೆಡವಿದರು. ಭೂಮಿಯಲ್ಲಿ ಬಿದ್ದು
ಹೊರಳುವುದು ಬೇರೆ, ಬಲಮತ್ತರಾದ ಕಪಿಗಳ ಮುಷ್ಟಿ ಪ್ರಹಾರ ಬೇರೆ. ಶುಕ-
ನಿಂದ ಇದು ತಡೆಯಲಾಗಲಿಲ್ಲ. ಅವನು ರಾಮಚಂದ್ರನನ್ನು ಕೂಗಿ ಬೇಡಿ-
ಕೊಂಡನು :
"ರಾಜಧರ್ಮವನ್ನು ಬಲ್ಲ ರಾಮಚಂದ್ರನೆ ! ನಿನ್ನ ಕಪಿಗಳು ನನ್ನನ್ನು
ಕೊಲ್ಲುತ್ತಿದ್ದಾರೆ. ರಾವಣ ದೂತನಾದ ನನ್ನನ್ನು ಕಾಪಾಡು."
"ಇವನು ಚಾರನಲ್ಲ- ಚೋರ" ಎಂದು ಅಂಗದನು ಗದರಿಸಿದನು.
(6
" ಛೇ, ಛೇ, ರಾವಣನ ದೂತನನ್ನು ಕೊಲ್ಲಬೇಡಿ " ಎಂದು ರಾಮನು
ಮುಗುಳುನಕ್ಕನು.
ಸುಗ್ರೀವನ ಪ್ರತಿಸಂದೇಶ ಮಾರ್ಮಿಕವಾಗಿತ್ತು:
"ರಾಮನ ಶತ್ರು ನನಗೂ ಶತ್ರು, ರಾವಣನನ್ನು ಯಮಪುರಿಗೆ ಕಳಿ-
ಸುವುದು ಸುಗ್ರೀವನಿಗೂ ಪ್ರಿಯವಾಗಿದೆ ಎಂದು ನಿನ್ನ ರಾವಣನ ಬಳಿ ಹೇಳು."
*
*
ಹುಲ್ಲುಗರಿಯ ಮೇಲೆ ಮಲಗಿ ಮೂರು ದಿನ ಕಾದದ್ದಾಯಿತು. ಸಾಗರ
ದಾರಿ ಕೊಡುವ ಯೋಚನೆ ಕಂಡುಬರಲಿಲ್ಲ !
ಜನ ಶಾಂತಿಯನ್ನು ದೌರ್ಬಲ್ಯದ ಕುರುಹು ಎಂದು ತಿಳಿದುಬಿಡುತ್ತಾರೆ.
ಅದು ದೊಡ್ಡ ತಪ್ಪು. ನೀಚರಿಗೆ ಸಹನೆಗಿಂತಲೂ ದಂಡನೆಯೇ ರುಚಿಯಾಗಿರು
ಇದೆ. ಶಾಂತಿಯ ಸಂದೇಶಕ್ಕಿಂತಲೂ ಯುದ್ಧದ ಕರೆಯೇ ಪ್ರಿಯವಾಗಿರುತ್ತದೆ.
ಪ್ರಪಂಚದ ಈ ಮಹಾಪ್ರಮಾದದಿಂದ ಯುದ್ಧದ ಕಿಡಿ ಸಿಡಿಯುವುದುಂಟು.