2023-03-15 15:35:51 by ambuda-bot
This page has not been fully proofread.
ಮಿಂಚಿನ ಬಳ್ಳಿ
ತರವಲ್ಲ, ಅವನ ಹೃದಯ ನಿರ್ಮಲವಾಗಿದೆ; ಅವನು ನನ್ನನ್ನು ಭಕ್ತಿಯಿಂದ
ಕಾಣುತ್ತಿದ್ದಾನೆ ಎಂದು ನಾನು ಬಲ್ಲೆ."
ಹೀಗೆ ಕಪಿಗಳನ್ನು ಸಂತೈಸಿ, ವಿಭೀಷಣನನ್ನು ಬಳಿಗೆ ಬರಮಾಡಿಸಿದನು.
ಆಯುಧಗಳನ್ನೆಲ್ಲ ದೂರದಲ್ಲಿಟ್ಟು ವಿಭೀಷಣನು ಶಾಂತರೂಪನಾಗಿ ಬಂದು
ರಾಮಪಾದಗಳಿಗೆ ಎರಗಿದನು.
ರಾಮಚಂದ್ರನ ಆಶೀರ್ವಾದದಲ್ಲಿ ಭವಿಷ್ಯದ ಭರವಸೆ ತುಂಬಿತ್ತು :
"ದೇವದ್ರೋಹಿಯಾದ ರಾವಣನ ಇತಿಹಾಸ ಸದ್ಯದಲ್ಲಿ ಕೊನೆಗೊಳ್ಳ-
ಲಿದೆ. ಆಗ ರಾಕ್ಷಸರ ಸಮೃದ್ಧವಾದ ಸಾಮ್ರಾಜ್ಯ ನಿನ್ನದಾಗುವುದು."
ವಿಭೀಷಣನೂ ನಮ್ರನಾಗಿ ವಿನಂತಿಸಿಕೊಂಡನು :
"ರಾಮಭದ್ರ, ದೇವದುರ್ಲಭವಾದ ನಿನ್ನ ದಾಸ್ಯವೇ ದೊರಕಿದ ಮೇಲೆ
ಇನ್ನೇನು ಬೇಕು ನನಗೆ ? ಕೈವಲ್ಯದ ದಾರಿಯನ್ನು ನಾನು ಕಂಡಿದ್ದೇನೆ. ನಾನು
ಭಾಗ್ಯಶಾಲಿ, ನಿನ್ನ ಪಾದಸೇವಕನಾಗಿ ನಿನ್ನ ಸೈನ್ಯದ ಒಬ್ಬ ನನ್ನ ಸೈನಿಕನಾಗಿ
ನಾನೂ ರಾಕ್ಷಸರೊಡನೆ ಹೋರಾಡಬಯಸುತ್ತೇನೆ."
ಜಾಂಬವಂತನು ಪುಣ್ಯ ಸಲಿಲಗಳನ್ನು ತಂದನು. ರಾಮಚಂದ್ರನ
ಕೈಯಿಂದಲೆ ವಿಭೀಷಣನಿಗೆ ಅಭಿಷೇಕ ನಡೆಯಿತು; "ಲಂಕಾಧಿಪತಿ ವಿಭೀಷಣ
ನಿಗೆ ಜಯವಾಗಲಿ' ಎಂದರು ಕಸಿಗಳು.
ಸುಗ್ರೀವನೂ ವಿಭೀಷಣನೂ ಜತೆಯಾಗಿ ಯೋಚಿಸಿ ಸಮುದ್ರಕ್ಕೆ ಸೇತು
ವನ್ನು ಬಂಧಿಸುವುದೇ ಸರಿ ಎಂದು ತೀರ್ಮಾನಿಸಿದರು.
ಇತ್ತ ಶಾರ್ದೂಲನೆಂಬ ರಾವಣನ ದೂತ ಈ ಕಪಿ ಸೇನೆಯನ್ನು ಕಂಡು
ರಾವಣನಿಗೆ ವರದಿಯೊಪ್ಪಿಸಿದನು. ರಾಕ್ಷಸೇಂದ್ರನು ಕ್ಷಣಕಾಲ ಚಿಂತಿಸಿ ನಿಟ್ಟು
ಸಿರೊಂದನ್ನೆಳೆದು ಶುಕನೆಂಬ ರಾಕ್ಷಸನನ್ನು ಕರೆದು ಸುಗ್ರೀವನೆಡೆಗೆ ದೌತ್ಯಕ್ಕಾಗಿ
ಕಳಿಸಿಕೊಟ್ಟನು.
ಶುಕನು ಹೆಸರಿಗೆ ತಕ್ಕಂತೆ ಗಿಳಿಯ ರೂಪವನ್ನು ಧರಿಸಿ ಸಾಗರವನ್ನು
ದಾಟ ಆಕಾಶದಲ್ಲಿ ಸುಗ್ರೀವನನ್ನು ಕರೆದು ನುಡಿದನು :
66
ಬಂದಿದ್ದೇನೆ. ನಮ್ಮ
" ಕಪಿರಾಜ, ನಾನು ರಾವಣನ ದೂತನಾಗಿ
ಮಹಾರಾಜ ರಾಮನ ಪತ್ನಿಯನ್ನು ಅಪಹರಿಸಿದ್ದಾನೆ. ಅದು ಅವನ ಅಪಾರ