This page has been fully proofread once and needs a second look.

ಸಂಗ್ರಹರಾಮಾಯಣ
 
೧೬೭
 
ನೀಲ-ತಾರ ಮೊದಲಾದವರೆಲ್ಲರೂ ವಿಭೀಷಣನನ್ನು ನಿಂದಿಸುವವರೆ,
. ಆಗ ನೀತಿ ಮತ್ತು ಪ್ರತಿಭೆಯಿಂದ ಸಮಯೋಚಿತ ವಾದ ಮಾತನ್ನಾಡಿದವನು
ಹನುಮಂತನೊಬ್ಬನೆ :
 
(6
 

 
"
ರಾಕ್ಷಸರ ಕಡೆಯಿಂದ ಬಂದವನು ಎನ್ನುವುದರಿಂದ ವಿಭೀಷಣನನ್ನು
ತೊರೆವುದಕ್ಕೆ ಅರ್ಥವಿಲ್ಲ. ಹಾವಿನ ಹೆಡೆಯಲ್ಲಿ ದ್ದರೂ ಮಣಿ ನಮಗೆ ಗ್ರಾಹ್ಯ
ವಾಗಿದೆ. ವಿಭೀಷಣನ ಪ್ರೀತಿಗೆ ನಾವು ದ್ರೋಹಮಾಡಬಾರದು.
 

 
ಸಾರವತ್ತಾದ ವಸ್ತುವನ್ನು ನಾವು ಆಯ್ದುಕೊಳ್ಳುವಾಗ ಅಲ್ಲಿ ಪರಿ-
ಚಯ, ಪರೀಕ್ಷೆಗಳ ಆವಶ್ಯಕತೆಯಿಲ್ಲ. ಜೇನನ್ನು ಹೀರುವ ಪರಮೆಗೆ ಹೂವು
ಯಾವುದಾದರೇನು ? ಸ್ವಾಭಾವಿಕ ಒಲವಿನಿಂದ ಬಂದವರನ್ನು ಪರೀಕ್ಷೆಗೆ ಒಳ
ಪಡಿಸುವುದೂ ತರವಲ್ಲ. ಹೆಚ್ಚು ಶೋಧಿಸ ಹೊರಟರೆ ತಿಳಿನೀರಿನ ಕೊಳ
ಕೂಡ ಕದಡುವುದಿಲ್ಲವೆ ?
 

 
ರಾಮಭದ್ರ ! ನೀತಿಯ ಮರ್ಮವನ್ನರಿಯದ ಈ ಸಚಿವರ ಮಾತನ್ನು
ನಾನು ಮೆಚ್ಚಲಾರೆ. ವಿಭೀಷಣ ಸರಳಸ್ವಭಾವದನು. ಅಣ್ಣನಿಂದ ನಿರ್ವಾಸಿತ
ನಾಗಿ ನಿನಗೆ ಶರಣು ಬಂದಿದ್ದಾನೆ. ಧಾರ್ಮಿಕನಾದ ವಿಭೀಷಣನಿಗೆ ನಿನ್ನ
ಪದತಲದ ಶರಣ ದೊರೆಯಬೇಕು. ನಿನ್ನ ಕರುಣಾದೃಷ್ಟಿಯ ಕಾಪು ದೊರೆಯ
ಬೇಕು. ರಾಕ್ಷಸರ ಅವಸಾನವನ್ನು ಊಹಿಸಿಯೇ ಅವನು ನಿನ್ನ ಬಳಿ ಬಂದಿ
ದ್ದಾನೆ. ಅವನ ಅಣ್ಣನೇ ಅವನ ಶತ್ರುವಾಗಿದ್ದಾನೆ. ವಾಲಿ-ಸುಗ್ರೀವರ
ಇತಿಹಾಸದ ಪುನರಾವೃತ್ತಿಯಾಗಿದೆ. ವಾಲಿಯನ್ನು ಸಂಹರಿಸಿ ಸುಗ್ರೀವನಿಗೆ
ರಾಜ್ಯವನ್ನು ಕರುಣಿಸಿ ಉದ್ಧರಿಸಿದ ಪ್ರಭುವಲ್ಲವೆ ನೀನು ? ಹಾಗೆಯೇ
ಪ್ರಕೃತದಲ್ಲಿಯೂ ರಾವಣನನ್ನು ಸಂಹರಿಸಿರಿ ವಿಭೀಷಣನಿಗೆ ಲಂಕಾಸಾಮ್ರಾಜ್ಯ
ವನ್ನು ಕರುಣಿಸ- ಬೇಕು. ಇದು ನನ್ನ ಅಭಿಪಾಯ.
 
33
 
ಪ್ರಾಯ.
 
ರಾಮನು ಸಂತಸದಿಂದ ಮಾರುತಿಯನ್ನು ಕೊಂಡಾಡಿದನು:
 

 
"ನನ್ನ ಮನಸ್ಸಿನಲ್ಲಿದ್ದು ದನ್ನೆ ಹನುಮಂತ ನುಡಿದಿದ್ದಾನೆ. ಹನುಮನ
ಮತವೆ ನನ್ನ ಮತ, ಶು. ಶತ್ತುರುವಾಗಲಿ, ಮಿತ್ರನಾಗಲಿ, ಶರಣು ಬಂದವರನ್ನು
ಪಾಲಿಸುವುದು ನನ್ನ ಕರ್ತವ್ಯ. ಇದು ರಾಕ್ಷಸರ ಕಪಟವೇ ಇದ್ದರೂ ಭಯ
ಪಡುವುದೇಕೆ ? ಇವನಿರಲಿ, ಪ್ರಪಂಚದ ರಾಕ್ಷಸ ಸಂತಾನವೇ ಒಟ್ಟಾದರೂ ನನ್ನ
ಒಂದು ಬೆರಳನ್ನು ನಲುಗಿಸಲಾರದು. ವಿಭೀಷಣನ ಮಟ್ಟಿಗೆ ಈ ಶಂಕೆಯೂ