This page has been fully proofread once and needs a second look.

ಆ ಕಥೆ ಹಾಗೆ ನಡೆದಿರಲಿ, ಬಿಡಲಿ. ಅದನ್ನು ಚಿತ್ರಿಸಿದ ರಸಕವಿ ಧನ್ಯ. ಅದನ್ನು
ಓದುವವನ ಬಾಳು ಧನ್ಯ. ಇಂಥ ರಸ ಸಾಹಿತ್ಯಗಳನ್ನು ಪಡೆದ ನಾಡು ಧನ್ಯ.
ಇದನ್ನು ಅರಿಯದ ಕೂಪ ಮಂಡೂಕಗಳು ತಮ್ಮ ಜೀವನದಲ್ಲಿ 'ಶೂನ್ಯ'ವನ್ನು
ತುಂಬಿಕೊಳ್ಳುತ್ತಾರೆ !
 

 
ಇದು ಸನಾತನಿಗಳಿಗಾಗಿ ಬರೆದ ಕಾವ್ಯವಲ್ಲ; ಹಿಂದೂಗಳಿಗೆ ಮಾತ್ರ
ಮೀಸಲಾದ ಕೃತಿಯೂ ಅಲ್ಲ. ಇದು ಹೃದಯ- ವುಳ್ಳವರೆಲ್ಲರಿಗೂ ಬೇಕಾದ ಕೃತಿ,
ವಿಶ್ವಕಾವ್ಯ. ಕಾಣುವ ಕಣ್ಣು, ತಿಳಿಯುವ ಬಗೆ ಒಂದು ಇದ್ದರೆ ಯಾವ
ಪಂಥ- ದವರಿಗೂ ಇದು ಅವುತಣ, ಅದರಲ್ಲಿರುವ ರಸ ಪರಿಣತಿ- ಯನ್ನು ಅರಸುವ
ಜನಕ್ಕೆ ಪಥ ಯಾವುದಾದರೇನು ? ಕತೆ ಯಾವುದಾದರೇನು ? ಜೇನಿರುವ ಎಲ್ಲ
ಹೂವೂ ಹೂವೇ. ಭ್ರಮರಕ್ಕೆ ಪಕ್ಷಪಾತವೆಂಬುದಿಲ್ಲ. ಒಳ್ಳೆಯ ಮಾತು
ಬೈಬಲ್ಲಿನಲ್ಲಿರಬಹುದು, ವೇದಗಳಲ್ಲಿ ಬರಬಹುದು, ಸರ್ವಜ್ಞ- ಬಸವಣ್ಣನವರ
ವಚನಗಳಲ್ಲಿ ಬರಬಹುದು, ರಾಮಾಯಣ-ಪುರಾಣಗಳಲ್ಲಾದರೂ ಬರಬಹುದು.
ಎಲ್ಲಿ ಬಂದಿದೆ ಎನ್ನುವುದು ಮುಖ್ಯವಲ್ಲ. ಏನು ಬಂದಿದೆ ಎನ್ನುವುದು
ಮುಖ್ಯ.
 

 
ಗಾಂಧೀಜಿಯವರಿಗೆ ಮಾಮೀರಾ ಬಹೆನರು ರಾಮಾಯಣ -ವನ್ನು ಕುರಿತು
ಪತ್ರವೊಂದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕು :
 

 
"I had about 40 minutes with the Ramayan last

night. I had only got half way through Griffith's full

translation when I left jail. I want to read it faithfully

from cover to cover, so I am keeping it by me. It gives

me extraordinary happiness and peace when I read it. It
is something I cannot explain. And what joy it is to

read the descriptions-the forests, the hermits, the animals,
the birds, the peasants, the fields, the villages, the towns
though four or five thousand years have gone by, it is all
there in the heart still of this blessed land. Even, since
we came back from Europe, this time I have been feeling
with double force (if it were possible) the deep, peaceful,