This page has been fully proofread once and needs a second look.


 
ಮಿಂಚಿನಬಳ್ಳಿ
 
ಕಲ್ಲು ಕಡಲಲ್ಲಿ ತೇಲಿತು !
 

 
ಸುಗ್ರೀವನಿಗೆ ಇನ್ನೂ ಸಂದೇಹ. ವಿಭೀಷಣನೂ ತಮ್ಮನ್ನು ವಂಚಿಸಲು
ಬಂದಿರಬೇಕು. ಅವನನ್ನು ಹಾಗೆಯೇ ಹೋಗಗೊಡ ಬಾರದು ಎಂದು ರಾಮನ
ಬಳಿ ವಿಜ್ಞಾಪಿಸಿಕೊಂಡನು :
 

 
"ರಾಮಚಂದ್ರ, ಒಬ್ಬ ರಾಕ್ಷಸ ನಿನಗೆ ಶರಣು ಬಂದಿದ್ದಾನೆ. ಆತ
ದಾ

ರಾ
ವಣನ ತಮ್ಮನಂತೆ. ಇದೂ ಮಾಯಾವಿಗಳಾದ ರಾಕ್ಷಸರ ಮಾಯೆಯ
ಒಂದು ತೆರ, ಇವನನ್ನು ಕೊಂದುಬಿಡಬೇಕು."
 

 
ರಾಮಚಂದ್ರನು ಎಲ್ಲ ಕಪಿಗಳನ್ನೂ ಕರೆದು ತಮ್ಮ ಅಭಿಪ್ರಾಯವನ್ನರು
ಹುವಂತೆ ಹೇಳಿದನು.
 

 
ಕಪಿಗಳು ವಿನಂತಿಸಿಕೊಂಡರು :
 

 
"ನಿನಗೆ ನಾವು ಹೇಳುವಂಥದೇನಿದೆ ? ನಿನಗೆ ಅರಿಯದುದೆಂದಿ ದೆಯೆ ?
ಆದರೂ ನಾವು ನಮ್ಮ ಅಭಿಪ್ರಾಯಗಳನ್ನರುಹಬೇಕು.
ಅದು ನಿನ್ನ ಆಜ್ಞೆ.
ಅದನ್ನು ಪಾಲಿಸುವುದು ನಮ್ಮ ಕರ್ತವ್ಯ."
 

 
ಮೊದಲು ಅಂಗದನು ತನ್ನ ಸಮ್ಮತಿಯನ್ನು ನಿವೇದಿಸಿದನು:

 
"ಸ್ನೇಹದ ಮುಖವಾಡ ಹೊತ್ತು ಬಂದರೂ ಶತ್ರುವಿನ ಕಡೆ ಯಿಂದ ಬಂದ
ವರು ನಂಬಲು ಯೋಗ್ಯರಲ್ಲ. ಅವರು ಸ್ನೇಹ- ದಿಂದಲೇ ಕರುಳು ಕತ್ತರಿಸಿ
 
ಯಾರು."
 

 
ಶರಭನದೂ ಇದಕ್ಕೆ ಸಮ್ಮತಿಯಿತ್ತು :
 

 
"ಅಪರಿಚಿತನ ಗೆಳೆತನ ಅಪಾಯಕಾರಿ, ಪರೀಕ್ಷಿಸದೆ ಅಂಥವ ರಿಗೆ ಸಲುಗೆ
ಕೊಡಬಾರದು. ವಿಷದ ಹಣ್ಣಿನಂತೆ ಅಂಥವರ ಸಹವಾಸ ಭಯಾನಕವಾಗಿದೆ."
 

 
ಜಾಂಬವಂತನೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದನು:

 
"ರಾಕ್ಷಸರನ್ನು ಎಂದಿಗೂ ನಂಬಬಾರದು. ಅವರು ಕಪಟದ ಆಕರ-
ವಾಗಿದ್ದಾರೆ. ಪರೀಕ್ಷಿಸದೆ ಯಾರೊಡನೆಯೂ ನಾವು ಸ್ನೇಹ ಯಾಚನೆಯನ್ನು
ಮಾಡಬಾರದು." ಮೈಂದನೂ ಕೂಡ ತನ್ನ ಸಂಶಯವನ್ನು ವ್ಯಕ್ತಪಡಿಸಿದನು :
 
46
 

 
"
ಅವನ ಮಾತು ರೀತಿ, ಆಕಾರ, ನಡತೆ ಎಲ್ಲವೂ ಸಂಶಯಾ- ಸ್ಪದ-
ವಾಗಿದೆ. ಅವನ ಪರೀಕ್ಷೆ ನಡೆದು ತಕ್ಕ ಚಿಕಿತ್ಸೆ ಮಾಡಬೇಕು. ರೋಗದಂತೆ
ಶತ್ರುಗಳು ಒಡನಾಡಿಗಳಾಗಿ ಬೆಳೆದು ಕೊರಳು ಹಿಚುಕುವಂತಾಗಬಾರದು, "
 
. "