2023-03-15 15:35:51 by ambuda-bot
This page has not been fully proofread.
೬
ಮಿಂಚಿನಬಳ್ಳಿ
ಕಲ್ಲು ಕಡಲಲ್ಲಿ ತೇಲಿತು !
ಸುಗ್ರೀವನಿಗೆ ಇನ್ನೂ ಸಂದೇಹ. ವಿಭೀಷಣನೂ ತಮ್ಮನ್ನು ವಂಚಿಸಲು
ಬಂದಿರಬೇಕು. ಅವನನ್ನು ಹಾಗೆಯೇ ಹೋಗಗೊಡಬಾರದು ಎಂದು ರಾಮನ
ಬಳಿ ವಿಜ್ಞಾಪಿಸಿಕೊಂಡನು :
"ರಾಮಚಂದ್ರ, ಒಬ್ಬ ರಾಕ್ಷಸ ನಿನಗೆ ಶರಣು ಬಂದಿದ್ದಾನೆ. ಆತ
ದಾವಣನ ತಮ್ಮನಂತೆ. ಇದೂ ಮಾಯಾವಿಗಳಾದ ರಾಕ್ಷಸರ ಮಾಯೆಯ
ಒಂದು ತೆರ, ಇವನನ್ನು ಕೊಂದುಬಿಡಬೇಕು."
ರಾಮಚಂದ್ರನು ಎಲ್ಲ ಕಪಿಗಳನ್ನೂ ಕರೆದು ತಮ್ಮ ಅಭಿಪ್ರಾಯವನ್ನರು
ಹುವಂತೆ ಹೇಳಿದನು.
ಕಪಿಗಳು ವಿನಂತಿಸಿಕೊಂಡರು :
"ನಿನಗೆ ನಾವು ಹೇಳುವಂಥದೇನಿದೆ ? ನಿನಗೆ ಅರಿಯದುದೆಂದಿದೆಯೆ ?
ಆದರೂ ನಾವು ನಮ್ಮ ಅಭಿಪ್ರಾಯಗಳನ್ನರುಹಬೇಕು.
ಅದು ನಿನ್ನ ಆಜ್ಞೆ.
ಅದನ್ನು ಪಾಲಿಸುವುದು ನಮ್ಮ ಕರ್ತವ್ಯ."
ಮೊದಲು ಅಂಗದನು ತನ್ನ ಸಮ್ಮತಿಯನ್ನು ನಿವೇದಿಸಿದನು:
"ಸ್ನೇಹದ ಮುಖವಾಡ ಹೊತ್ತು ಬಂದರೂ ಶತ್ರುವಿನ ಕಡೆಯಿಂದ ಬಂದ
ವರು ನಂಬಲು ಯೋಗ್ಯರಲ್ಲ. ಅವರು ಸ್ನೇಹದಿಂದಲೇ ಕರುಳು ಕತ್ತರಿಸಿ
ಯಾರು."
ಶರಭನದೂ ಇದಕ್ಕೆ ಸಮ್ಮತಿಯಿತ್ತು :
"ಅಪರಿಚಿತನ ಗೆಳೆತನ ಅಪಾಯಕಾರಿ, ಪರೀಕ್ಷಿಸದೆ ಅಂಥವರಿಗೆ ಸಲುಗೆ
ಕೊಡಬಾರದು. ವಿಷದ ಹಣ್ಣಿನಂತೆ ಅಂಥವರ ಸಹವಾಸ ಭಯಾನಕವಾಗಿದೆ."
ಜಾಂಬವಂತನೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದನು:
"ರಾಕ್ಷಸರನ್ನು ಎಂದಿಗೂ ನಂಬಬಾರದು. ಅವರು ಕಪಟದ ಆಕರ-
ವಾಗಿದ್ದಾರೆ. ಪರೀಕ್ಷಿಸದೆ ಯಾರೊಡನೆಯೂ ನಾವು ಸ್ನೇಹಯಾಚನೆಯನ್ನು
ಮಾಡಬಾರದು." ಮೈಂದನೂ ಕೂಡ ತನ್ನ ಸಂಶಯವನ್ನು ವ್ಯಕ್ತಪಡಿಸಿದನು :
46
ಅವನ ಮಾತು ರೀತಿ, ಆಕಾರ, ನಡತೆ ಎಲ್ಲವೂ ಸಂಶಯಾಸ್ಪದ-
ವಾಗಿದೆ. ಅವನ ಪರೀಕ್ಷೆ ನಡೆದು ತಕ್ಕ ಚಿಕಿತ್ಸೆ ಮಾಡಬೇಕು. ರೋಗದಂತೆ
ಶತ್ರುಗಳು ಒಡನಾಡಿಗಳಾಗಿ ಬೆಳೆದು ಕೊರಳು ಹಿಚುಕುವಂತಾಗಬಾರದು, "