This page has been fully proofread once and needs a second look.

ಸಂಗ್ರಹರಾಮಾಯಣ
 
*
ರಾಮನ ಬಾಣಗಳಿಗೆ ರಕ್ಕಸರು ಬಲಿಯಾಗುವ ಮುನ್ನ, ಲಂಕೆಯ
ವೈಭವ ಅಳಿದು ಹೋಗುವ ಮುನ್ನ, ಲಂಕೇಶ್ವರನ ವೈಭವದ ಅಸ್ಥಿಪಂಜರದ
ಅಚ್ಚು ಭವಿಷ್ಯದಲ್ಲಿ ಮೂಡುವ ಮುನ್ನ ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡು.
 

 
ನಾನು ಹೆದರಿ ಈ ಮಾತನ್ನಾಡುತ್ತಿಲ್ಲ. ಕೃಪಣತೆಗೊ, ಮೋಹಕ್ಕೊ,
ಡಾಂಬಿಕತೆಗೊ ಬಲಿಯಾಗಿ ಹೀಗೆ ನುಡಿಯುತ್ತಿಲ್ಲ. ' ಹಿತವನ್ನು ಯಥಾರ್ಥ
ವನ್ನು ಕೇಳುವ ಇಚ್ಛೆಯಿದ್ದರೆ ನನ್ನ ಮಾತನ್ನು ಆಲಿಸಬೇಕು."
 

 
ಮೇಘನಾದನಿಗೆ ಈ ಮಾತು ಹಿಡಿಸಲಿಲ್ಲ. ಅವನು ಸಿಡುಕಿ ನಿಂದಲೆ
ಎದುರಾಡಿದನು :
 
೧೬೫
 

 
" ಮಹೇಂದ್ರನನ್ನು ಗೆದ್ದ ನಮಗೆ ಮಾನವನಿಂದ ಭಯ- ವೇನು ???
"
 
ವಿಭೀಷಣನು ಮತ್ತೆ ಸಮಾಧಾನದ ಮಾತುಗಳನ್ನಾಡಿದನು:

 
"
ಇವನಿನ್ನೂ ಹುಡುಗ, ರಾಜತಂತ್ರದ ಅರಿವಿಲ್ಲ. ಲೋಕದ ಪರಿಜ್ಞಾನ-
ವಿಲ್ಲ. ರಾಜಕಾರಣದಲ್ಲಿ ಬಾಯಿಹಾಕಿ ಅಧಿಕಪ್ರಸಂಗ- ಕ್ಕೆಳಸುತ್ತಿದ್ದಾನೆ. ಪ್ರಭು
ಅವನ ಮಾತನ್ನು ಲಕ್ಷಿಸಬಾರದು. ನಾವೀಗ ರಾಮನಿಗೆ ಶರಣಾಗಬೇಕು. "
 

 
ರಾವಣನು ಹಿತದ ನುಡಿಗಳನ್ನೊಪ್ಪುವ ಸ್ಥಿತಿಯಲ್ಲಿರಲಿಲ್ಲ. ಅವನ
ಅಭಿಪ್ರಾಯವೂ ವಿಭೀಷಣನಿಗೆ ವಿರುದ್ಧವಾಗಿಯೇ ಇತ್ತು :
 

 
" ನೀನು ಮಿತ್ರರ ಸೋಗಿನಿಂದ ನನಗೆ ಕೇಡನ್ನು ಬಯಸುವ ಶತ್ರು.
ಇನ್ನೊಬ್ಬರಾದರೆ ಕೊಂದುಬಿಡುತ್ತಿದ್ದೆ. ನೀನು ನನ್ನ ರಾಜ್ಯದಲ್ಲಿರುವುದು ನನಗೆ
ಬೇಕಿಲ್ಲ.
 
33
 
(C
 
"
 
" ಏನಿದ್ದರೂ ನೀನು ನನಗೆ ಹಿರಿಯ. ಅದರಿಂದ ನೀನಾಡಿದ ಬಿರುನುಡಿ
ಗಳನ್ನು ಸಹಿಸಿದ್ದೇನೆ. ಕೆಟ್ಟ ಮಾತುಗಳನ್ನು ನುಂಗಿ- ಕೊಂಡಿದ್ದೇನೆ. ನಿನಗೆ
ಮಂಗಳವಾಗಲಿ. ನಾನು ಹೊರಟೆ. "
 

 
ವಿಭೀಷಣ ಸಭೆಯಿಂದ ಹೊರನಡೆದ. ಧಾರ್ಮಿಕರಾದ ನಾಲ್ವರು ಸಚಿ
ವರೂ ಅವನ ಜತೆ ಬಂದರು. ಅವರೊಡನೆ ವಿಭೀಷಣನು ಆಕಾಶ ಮಾರ್ಗದಿಂದ
ರಾಮನಿದ್ದೆಡೆಗೆ ಬಂದು ಹೀಗೆ ವಿನಂತಿಸಿಕೊಂಡನು :
 

 
"
ಕಪೀಶ್ವರರೆ ! ನಾನು ರಾವಣನ ತಮ್ಮ ವಿಭೀಷಣ, ರಾಮಭಕ್ತ

ಎನ್ನುವ ಕಾರಣದಿಂದ ರಾವಣನಿಂದ ಅವಮಾನಿತನಾಗಿ ಬಂದಿದ್ದೇನೆ.
ಕರುಣಾಳುವಾದ ರಾಮಚಂದ್ರನ ಪದತಲದಲ್ಲಿ ಆಸರೆಯನ್ನು ಪಡೆಯಲು
ಬಂದಿದ್ದೇನೆ."