2023-03-15 15:35:51 by ambuda-bot
This page has not been fully proofread.
ಸಂಗ್ರಹರಾಮಾಯಣ
* ರಾಮನ ಬಾಣಗಳಿಗೆ ರಕ್ಕಸರು ಬಲಿಯಾಗುವ ಮುನ್ನ, ಲಂಕೆಯ
ವೈಭವ ಅಳಿದು ಹೋಗುವ ಮುನ್ನ, ಲಂಕೇಶ್ವರನ ವೈಭವದ ಅಸ್ಥಿಪಂಜರದ
ಅಚ್ಚು ಭವಿಷ್ಯದಲ್ಲಿ ಮೂಡುವ ಮುನ್ನ ಸೀತೆಯನ್ನು ರಾಮನಿಗೆ ಒಪ್ಪಿಸಿಬಿಡು.
ನಾನು ಹೆದರಿ ಈ ಮಾತನ್ನಾಡುತ್ತಿಲ್ಲ. ಕೃಪಣತೆಗೊ, ಮೋಹಕ್ಕೊ,
ಡಾಂಬಿಕತೆಗೊ ಬಲಿಯಾಗಿ ಹೀಗೆ ನುಡಿಯುತ್ತಿಲ್ಲ. ' ಹಿತವನ್ನು ಯಥಾರ್ಥ
ವನ್ನು ಕೇಳುವ ಇಚ್ಛೆಯಿದ್ದರೆ ನನ್ನ ಮಾತನ್ನು ಆಲಿಸಬೇಕು."
ಮೇಘನಾದನಿಗೆ ಈ ಮಾತು ಹಿಡಿಸಲಿಲ್ಲ. ಅವನು ಸಿಡುಕಿನಿಂದಲೆ
ಎದುರಾಡಿದನು :
೧೬೫
" ಮಹೇಂದ್ರನನ್ನು ಗೆದ್ದ ನಮಗೆ ಮಾನವನಿಂದ ಭಯವೇನು ???
ವಿಭೀಷಣನು ಮತ್ತೆ ಸಮಾಧಾನದ ಮಾತುಗಳನ್ನಾಡಿದನು:
ಇವನಿನ್ನೂ ಹುಡುಗ, ರಾಜತಂತ್ರದ ಅರಿವಿಲ್ಲ. ಲೋಕದ ಪರಿಜ್ಞಾನ-
ವಿಲ್ಲ. ರಾಜಕಾರಣದಲ್ಲಿ ಬಾಯಿಹಾಕಿ ಅಧಿಕಪ್ರಸಂಗಕ್ಕೆಳಸುತ್ತಿದ್ದಾನೆ. ಪ್ರಭು
ಅವನ ಮಾತನ್ನು ಲಕ್ಷಿಸಬಾರದು. ನಾವೀಗ ರಾಮನಿಗೆ ಶರಣಾಗಬೇಕು. "
ರಾವಣನು ಹಿತದ ನುಡಿಗಳನ್ನೊಪ್ಪುವ ಸ್ಥಿತಿಯಲ್ಲಿರಲಿಲ್ಲ. ಅವನ
ಅಭಿಪ್ರಾಯವೂ ವಿಭೀಷಣನಿಗೆ ವಿರುದ್ಧವಾಗಿಯೇ ಇತ್ತು :
" ನೀನು ಮಿತ್ರರ ಸೋಗಿನಿಂದ ನನಗೆ ಕೇಡನ್ನು ಬಯಸುವ ಶತ್ರು.
ಇನ್ನೊಬ್ಬರಾದರೆ ಕೊಂದುಬಿಡುತ್ತಿದ್ದೆ. ನೀನು ನನ್ನ ರಾಜ್ಯದಲ್ಲಿರುವುದು ನನಗೆ
ಬೇಕಿಲ್ಲ.
33
(C
" ಏನಿದ್ದರೂ ನೀನು ನನಗೆ ಹಿರಿಯ. ಅದರಿಂದ ನೀನಾಡಿದ ಬಿರುನುಡಿ
ಗಳನ್ನು ಸಹಿಸಿದ್ದೇನೆ. ಕೆಟ್ಟ ಮಾತುಗಳನ್ನು ನುಂಗಿಕೊಂಡಿದ್ದೇನೆ. ನಿನಗೆ
ಮಂಗಳವಾಗಲಿ. ನಾನು ಹೊರಟೆ. "
ವಿಭೀಷಣ ಸಭೆಯಿಂದ ಹೊರನಡೆದ. ಧಾರ್ಮಿಕರಾದ ನಾಲ್ವರು ಸಚಿ
ವರೂ ಅವನ ಜತೆ ಬಂದರು. ಅವರೊಡನೆ ವಿಭೀಷಣನು ಆಕಾಶ ಮಾರ್ಗದಿಂದ
ರಾಮನಿದ್ದೆಡೆಗೆ ಬಂದು ಹೀಗೆ ವಿನಂತಿಸಿಕೊಂಡನು :
ಕಪೀಶ್ವರರೆ ! ನಾನು ರಾವಣನ ತಮ್ಮ ವಿಭೀಷಣ, ರಾಮಭಕ್ತ
ಎನ್ನುವ ಕಾರಣದಿಂದ ರಾವಣನಿಂದ ಅವಮಾನಿತನಾಗಿ ಬಂದಿದ್ದೇನೆ.
ಕರುಣಾಳುವಾದ ರಾಮಚಂದ್ರನ ಪದತಲದಲ್ಲಿ ಆಸರೆಯನ್ನು ಪಡೆಯಲು
ಬಂದಿದ್ದೇನೆ."