2023-03-15 15:35:51 by ambuda-bot
This page has not been fully proofread.
ಮಿಂಚಿನಬಳ್ಳಿ
"ಯುಕ್ತಿ, ಬಲವಿಲ್ಲದೆ ಶಾಸ್ತ್ರದ ಪರಿಜ್ಞಾನವಿಲ್ಲದೆ, ಅನುಭವಿಗಳ ಒಡನಾಟ
ವಿಲ್ಲದೆ ಮನಬಂದಂತೆ ಗಳಹುವ ಮೂರ್ಖರಿಗೆ ಮಂತ್ರ ಸಭೆಯಲ್ಲಿ ತಾಣವಿಲ್ಲ.
ಮಂತ್ರಿಯಾದವನು ವಿನಯ ಸಂಪನ್ನನಾಗಿರಬೇಕು. ನೈತಿಕ ಬಲವುಳ್ಳವನಾಗಿರ
ಬೇಕು. ಧರ್ಮಾಧರ್ಮಗಳನ್ನು ಬಲ್ಲವನಾಗಿರಬೇಕು. ಪೂರ್ವಾಪರಗಳನ್ನು
ತಿಳಿದು ನಿರೂಪಿಸುವ ವಿವೇಕಿಯಾಗಿರಬೇಕು. ರಾಜತಂತ್ರಗಳನ್ನರಿಯದ ಗಾಂಪ
ರೊಡನೆ ಮಾಡುವ ಮಂತ್ರಾಲೋಚನ ನಪುಂಸಕನ ರತಿಯಂತೆ ನಿರ್ವೀಯ್ರವಾ
ಗಿದೆ ! ನಿನ್ನ ಮಂತ್ರಿಗಳು ಈ ದೋಷಗಳಿಗೆ ನೆಲೆವನೆ. ಒಂದು ಗುಣವೂ ಅವ
ರಲ್ಲಿ ಕಾಣದಾಗಿದೆ. ಇವರ ಮಂತ್ರಾಲೋಚನೆ ನಿನ್ನನ್ನು ಅನರ್ಥಕ್ಕೆ ಸೆಳೆಯು-
ತಿದೆ ಎಂದು ನನಗನಿಸುತ್ತಿದೆ. ಸಾಕು ಈ ಷಂಡಪ್ರಣಯ.
G೬೪
ಮಹರ್ಷಿ ಪುಲರ ವಂಶದಲ್ಲಿ ಹುಟ್ಟಿದವನು ನೀನು. ಶಾಸ್ತ್ರ ತಂತ್ರ
ಗಳನ್ನು ಬಲ್ಲವನು. ಲೋಕನಿಂದಿತವಾದ ವರ್ತನೆ ನಿನಗೆ ತರವಲ್ಲ. ಈ
ಹೆಣ್ಣಿನ ಹುಚ್ಚನ್ನು ಬಿಟ್ಟು ಬಿಡು. ನೀನು ಮೂರು ಲೋಕಗಳನ್ನೂ ಗೆದ್ದ
ಮಹಾವೀರ ಎಂದುಕೊಳ್ಳುತ್ತಿರುವೆಯಲ್ಲ. ನಿನ್ನನ್ನು ಪೀಡಿಸುತ್ತಿರುವ ಕಾಮ
ದೇವನನ್ನು ನೀನು ನಿಗ್ರಹಿಸದಾದೆ. ಎಲ್ಲಿ ತ್ರಿಲೋಕ ವಿಜಯ ! ನಿನ್ನ ವಿಕತನ
ಗಳಿಗೆ ಏನು ಬೆಲೆ ಬಂತು ? ಈ ಸ್ತ್ರೀ ಮೋಹವನ್ನು ತೊರೆದುಬಿಡು. ಆಗ ನೀನು
ನಿಜಕ್ಕೂ ತ್ರಿಲೋಕ ವಿಜಯಿಯಾಗುವೆ.
ಪತಿವ್ರತೆಯಾದ ಹೆಣ್ಣನ್ನು ಕೆಣಕುವುದು ಹುಡುಗಾಟವಲ್ಲ. ಹೂವಿನ
ಮಾಲೆಯೆಂದು ಬಗೆದು ಮಲಗಿದ ಹಾವನ್ನು ಕೆಣಕುತ್ತಿರುವೆ. ಮಹಾರಾಜ,
ಕೈಮುಗಿದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ರಾಮನೊಡನೆ ಜಗಳ ಬೇಡ,
ಆ ಕರುಣಾಳುವಿನೊಡನೆ ಕಲಹಬೇಡ, ಸೀತೆಯನ್ನು ಅವನಿಗೆ ಒಪ್ಪಿಸಿ ಬಿಡು.
ನೀನು ಅಧರ್ಮದ ಹಾದಿಯನ್ನೇ ತುಳಿದೆಯಾದರೆ ಧರ್ಮಪ್ರಿಯರಾದ
ಬಂಧುಗಳು ನಿನ್ನೊಡನೆ ಬಾಳಲಾರರು. ಕೆಟ್ಟ ಯೋಚನೆ ಮನದಲ್ಲಿ ಸುಳಿಯ
ದಿರಲಿ, ಲಂಕೆಯಲ್ಲಿ ಅಧರ್ಮ ತಾಂಡವವಾಡದಿರಲಿ, ಸೀತೆಯನ್ನು ರಾಮನಿಗೆ
ಒಪ್ಪಿಸಿಬಿಡು.
ರಾಮನ ಅನುಗ್ರಹದ ಮುಂದೆ ಎಲ್ಲ ಸಂಪತ್ತೂ ಸಣ್ಣದು. ಅವನು
ಸಂತುಷ್ಟನಾದರೆ ಎಲ್ಲವೂ ಇದೆ. ಅವನು ಮುನಿದರೆ ಸರ್ವನಾಶ, ಲೋಕ
ನಾಥನಾದ ರಾಮನಿಗೆ ಸೀತೆಯನ್ನು ಒಪ್ಪಿಸಿಬಿಡು.