This page has been fully proofread once and needs a second look.

೧೩
 
ಸಂಗ್ರಹರಾಮಾಯಣ
 
ಆಗ ರಾವಣನ ಮಾತು ಗುಡಿಗಿನಂತೆ ಮೊಳಗಿತು :
 
*

 
"
ಜಗದ ಒಡೆಯನೆಂದರೆ ನಾನು, ವಿಜಯವೆಂದರೆ ನನ್ನದು.

ಕಾಡಾಡಿಗಳಿಗೆ ಏನು ಸಾಮರ್ಥ್ಯ? ಎಂಥ ವಿಜಯ ? ಇದು ರಾಜ ಸಭೆ,
ಇಲ್ಲಿ ಮಕ್ಕಳಾಟಿಕೆಯ ಮಾತನ್ನಾಡಬಾರದು."
 

 
ಪ್ರಹಸ್ತ-ಸುಪಾರ್ಶ್ವ ಮೊದಲಾದ ಮಂತ್ರಿಗಳೂ ತಮ್ಮ ಪ್ರಜ್ಞಾ ಬಲಕ್ಕೆ
ತೋರಿದಂತೆ ಹೀಗೆ ನಿವೇದಿಸಿಕೊಂಡರು :
 
66
 

 
" ಎಲ್ಲ ಲೋಕಗಳೂ ನಿನ್ನ ಹಿಡಿತದಲ್ಲಿವೆ. ಮಹಾಪ್ರಭು, ಲೋಕ
ಪಾಲ<error>ಕರೆಲ್ಲಿ</error> <fix>ಕರೆಲ್ಲ</fix> ನಿನಗೆ ಶರಣಾಗಿದ್ದಾರೆ. ಕಾಡಿನಲ್ಲಿ ಅಲೆವ ಮನುಷ್ಯ ಮಾತ್ರನಾದ

ರಾಮನಿಂದ ನಿನಗೆ ಭಯವೆ ? ಇನ್ನು ಕಪಿಗಳ ಸೇನೆ ಮಾಂಸ ಪ್ರಿಯರಾದ
ರಾಕ್ಷಸರಿಗೆ ಒಂದೊಂದು ಕಪಿಯೂ ಆಹಾರ. ಅವು ಗಳಿಂದ ನಮಗೆ ಭಯವಿಲ್ಲ.
ಹನುಮಂತ ಜೀವ ಸಹಿತನಾಗಿ ಇಲ್ಲಿಂದ ಮರಳಿದ್ದು ಅವನ ಪುಣ್ಯದ ಫಲ.
ನಿನ್ನ ಹುಬ್ಬಿನ ಕುಣಿತಕ್ಕೆ ಮೂರು ಲೋಕವೂ ದಿಗಿಲುಗೊಳ್ಳುತ್ತಿದೆ. ನಿನಗೆ

ಯಾರ ಭಯ ? ಸೀತೆಯನ್ನು ಬಲಾತ್ಕರಿಸಿ ಭೋಗಿಸಬಹುದಲ್ಲ ! "
 

 
ರಾವಣನು ಮುಗುಳುನಗುತ್ತ ಉತ್ತರಿಸಿದನು:
 

 
"ನೀವನ್ನುವ ಮಾತು ನಿಜ. ಆದರೆ ಇಲ್ಲಿ ಒಂದು ರಹಸ್ಯವಿದೆ. ಹಿಂದೆ
ನಾನು ಪುಂಜಕಸ್ಥಲೆಯೆಂಬಾಕೆಯ ಸೌಂದರ್ಯಕ್ಕೆ ಮೋಹಿತನಾಗಿ ಬಲಾತ್ಕರಿ
ಸಿದೆ. ಆಗ ಬ್ರಹ್ಮನು 'ಯಾವಳನ್ನಾದರೂ ಬಲಾತ್ಕರಿಸಿದೆಯಾದರೆ ನಿನ್ನ ತಲೆ
ಸಿಡಿದುಹೋಗಲಿ' ಎಂದು ಶಪಿಸಿದನು. ಈ ಶಾಪವೇ ಸೀತೆಯ ಪಾತಿವ್ರತ್ಯವನ್ನು
ಕಾಪಾಡು ತ್ತಿದೆ. ಸೀತೆಯನ್ನು ನಾನು ಬಲಾತ್ಕರಿಸಲಾರೆ ! ನನಗೆ ಶಾಪ-
ವಾದದ್ದು ಸೀತೆಗೆ ವರವಾಗಿ ನಿಂತಿದೆ !
 

 
ನನ್ನ ಬಾಣಗಳ ರುಚಿ ರಾಮನಿಗಿನ್ನೂ ತಿಳಿದಿಲ್ಲ. ಎಂತಲೇ ಅವನ
ಆಟೋಪ ನಡೆದಿದೆ. ಕುಂಭಕರ್ಣ-ಇಂದ್ರಜಿತ್ತು ಮೊದ- ಲಾದವರಲ್ಲಿ ಒಬ್ಬೊಬ್ಬನೇ
ಸಾಕು. ಶತ್ರುಗಳ ಸಂತಾನವನ್ನು ನಿರ್ಮೂಲ ಮಾಡಲಿಕ್ಕೆ. ನನ್ನ ತೋಳಿನ
ತೀಟೆಯನ್ನು ಪರಿ- ಹರಿಸುವ ಶತ್ರುವನ್ನು ವಿಧಿ ಸೃಷ್ಟಿಸಲಾರ. "
 

 
ರಾವಣನ ಹೊಗಳು ಮಾತುಗಳನ್ನು ಕೇಳಿ ವಿಭೀಷಣನಿಗೆ ನಗು ಬಂತು.
ಅಣ್ಣನನ್ನು ಸರಿ ದಾರಿಗೆ ತರಬೇಕು ಎಂದು ಅವನು ಪುನಃ ವಿನಂತಿಸಿಕೊಂಡನು.