2023-03-15 15:35:50 by ambuda-bot
This page has not been fully proofread.
೧೩
ಸಂಗ್ರಹರಾಮಾಯಣ
ಆಗ ರಾವಣನ ಮಾತು ಗುಡಿಗಿನಂತೆ ಮೊಳಗಿತು :
* ಜಗದ ಒಡೆಯನೆಂದರೆ ನಾನು, ವಿಜಯವೆಂದರೆ ನನ್ನದು.
ಕಾಡಾಡಿಗಳಿಗೆ ಏನು ಸಾಮರ್ಥ್ಯ? ಎಂಥ ವಿಜಯ ? ಇದು ರಾಜ ಸಭೆ,
ಇಲ್ಲಿ ಮಕ್ಕಳಾಟಿಕೆಯ ಮಾತನ್ನಾಡಬಾರದು."
ಪ್ರಹಸ್ತ-ಸುಪಾರ್ಶ್ವ ಮೊದಲಾದ ಮಂತ್ರಿಗಳೂ ತಮ್ಮ ಪ್ರಜ್ಞಾ ಬಲಕ್ಕೆ
ತೋರಿದಂತೆ ಹೀಗೆ ನಿವೇದಿಸಿಕೊಂಡರು :
66
" ಎಲ್ಲ ಲೋಕಗಳೂ ನಿನ್ನ ಹಿಡಿತದಲ್ಲಿವೆ. ಮಹಾಪ್ರಭು, ಲೋಕ
ಪಾಲಕರೆಲ್ಲಿ ನಿನಗೆ ಶರಣಾಗಿದ್ದಾರೆ. ಕಾಡಿನಲ್ಲಿ ಅಲೆವ ಮನುಷ್ಯ ಮಾತ್ರನಾದ
ರಾಮನಿಂದ ನಿನಗೆ ಭಯವೆ ? ಇನ್ನು ಕಪಿಗಳ ಸೇನೆ ಮಾಂಸಪ್ರಿಯರಾದ
ರಾಕ್ಷಸರಿಗೆ ಒಂದೊಂದು ಕಪಿಯೂ ಆಹಾರ. ಅವುಗಳಿಂದ ನಮಗೆ ಭಯವಿಲ್ಲ.
ಹನುಮಂತ ಜೀವ ಸಹಿತನಾಗಿ ಇಲ್ಲಿಂದ ಮರಳಿದ್ದು ಅವನ ಪುಣ್ಯದ ಫಲ.
ನಿನ್ನ ಹುಬ್ಬಿನ ಕುಣಿತಕ್ಕೆ ಮೂರು ಲೋಕವೂ ದಿಗಿಲುಗೊಳ್ಳುತ್ತಿದೆ. ನಿನಗೆ
ಯಾರ ಭಯ ? ಸೀತೆಯನ್ನು ಬಲಾತ್ಕರಿಸಿ ಭೋಗಿಸಬಹುದಲ್ಲ ! "
ರಾವಣನು ಮುಗುಳುನಗುತ್ತ ಉತ್ತರಿಸಿದನು:
"ನೀವನ್ನುವ ಮಾತು ನಿಜ. ಆದರೆ ಇಲ್ಲಿ ಒಂದು ರಹಸ್ಯವಿದೆ. ಹಿಂದೆ
ನಾನು ಪುಂಜಕಸ್ಥಲೆಯೆಂಬಾಕೆಯ ಸೌಂದರ್ಯಕ್ಕೆ ಮೋಹಿತನಾಗಿ ಬಲಾತ್ಕರಿ
ಸಿದೆ. ಆಗ ಬ್ರಹ್ಮನು 'ಯಾವಳನ್ನಾದರೂ ಬಲಾತ್ಕರಿಸಿದೆಯಾದರೆ ನಿನ್ನ ತಲೆ
ಸಿಡಿದುಹೋಗಲಿ' ಎಂದು ಶಪಿಸಿದನು. ಈ ಶಾಪವೇ ಸೀತೆಯ ಪಾತಿವ್ರತ್ಯವನ್ನು
ಕಾಪಾಡುತ್ತಿದೆ. ಸೀತೆಯನ್ನು ನಾನು ಬಲಾತ್ಕರಿಸಲಾರೆ ! ನನಗೆ ಶಾಪ-
ವಾದದ್ದು ಸೀತೆಗೆ ವರವಾಗಿ ನಿಂತಿದೆ !
ನನ್ನ ಬಾಣಗಳ ರುಚಿ ರಾಮನಿಗಿನ್ನೂ ತಿಳಿದಿಲ್ಲ. ಎಂತಲೇ ಅವನ
ಆಟೋಪ ನಡೆದಿದೆ. ಕುಂಭಕರ್ಣ-ಇಂದ್ರಜಿತ್ತು ಮೊದಲಾದವರಲ್ಲಿ ಒಬ್ಬೊಬ್ಬನೇ
ಸಾಕು. ಶತ್ರುಗಳ ಸಂತಾನವನ್ನು ನಿರ್ಮೂಲ ಮಾಡಲಿಕ್ಕೆ. ನನ್ನ ತೋಳಿನ
ತೀಟೆಯನ್ನು ಪರಿಹರಿಸುವ ಶತ್ರುವನ್ನು ವಿಧಿ ಸೃಷ್ಟಿಸಲಾರ."
ರಾವಣನ ಹೊಗಳು ಮಾತುಗಳನ್ನು ಕೇಳಿ ವಿಭೀಷಣನಿಗೆ ನಗು ಬಂತು.
ಅಣ್ಣನನ್ನು ಸರಿ ದಾರಿಗೆ ತರಬೇಕು ಎಂದು ಅವನು ಪುನಃ ವಿನಂತಿಸಿಕೊಂಡನು.