This page has not been fully proofread.

ಮಿಂಚಿನಬಳ್ಳಿ
 
ಮಧುಪಾನ ಮತ್ತರಾಗಿದ್ದಾರೆ. ಹೀಗೆ ಸಂತಸದಿಂದ ರಾಮನ ಗುಣಗಾನ
ಮಾಡುತ್ತ ಕಪಿಸೇನೆ ಸಾಗಿತು.
 
೧೬೨
 
ಕಪಿಗಳೊಡನೆ ರಾಮಚಂದ್ರನು ತೆಂಕಣ ದಿಸೆಗೆ ಮುಂದುವರಿದನು.
ವಿಂಧ್ಯ-ಸಹ್ಯ-ಮಲಯಗಳನ್ನು ದಾಟಿ ಮಹೇಂದ್ರಪರ್ವತದ ಬಳಿಗೆ
ಬಂದೂ ಆಯಿತು. ರಾಮಚಂದ್ರನು ಒಮ್ಮೆ ಮಾಹೇಂದ್ರದ ಮೇಲೇರಿ ಉದ್ವೇಗ
ವಾಗಿ ಬೊಬ್ಬಿರಿವ ಕಡಲನ್ನು ದಿಟ್ಟಿಸಿದನು. ಕಪಿಗಳ ಸೈನ್ಯಸಾಗರಕ್ಕೆ ಎದು
ರಾಳಿಯಂತಿತ್ತು ಈ ಜಲಸಾಗರ !
 
ಮಾಹೇಂದ್ರದ ಕೆಳಗೆ ವಿಶಾಲವಾದ ದಂಡೆಯಲ್ಲಿ ಕಪಿವೃಂದ ಬೀಡು
ಬಿಟ್ಟಿತು. ರಾಮಚಂದ್ರನು ಸಮುದ್ರರಾಜನನ್ನು ದಾರಿ ಬಿಟ್ಟು ಕೊಡುವಂತೆ
ಪ್ರಾರ್ಥಿಸಿ ಕಡಲ ತಡಿಯಲ್ಲಿ ಪವಡಿಸಿದನು. ದರ್ಭವೇ ತಲ್ಪ. ಬಲಗೈಯೇ
ದಿಂಬು ! ಶೇಷಶಯನನು ದರ್ಭಶಯನನಾದನು. ವಿಶ್ವೇಶ್ವರನೂ ವಿನಯದ
ಮೂರ್ತಿಯಾಗಿ ಸಮುದ್ರವನ್ನು ಯಾಚಿಸಿದನು.
 
*
 
*
 
ಇತ್ತ ರಾವಣನು ಮಯನನ್ನು ಕರೆಯಿಸಿ ಹೊಸ ಲಂಕೆಯನ್ನೇ ಕಟ್ಟಿಸಿ
ದನು. ಸುಟ್ಟು ಹೋದ ಚಿಹ್ನೆಯೂ ಕಾಣಿಸದಂತೆ ಹೊಸ ನಗರದ ನಿರ್ಮಾಣ-
ವಾಯಿತು. ಕೂಡಲೇ ಮಂತ್ರಿಗಳನ್ನು ಕರೆದು ಸಭೆಸೇರಿಸಿ ಮಂತಾಲೋಚನೆಗೆ
ತೊಡಗಿದನು :
 
* ವೀರನಾದ ಹನುಮಂತನ ಪೌರುಷವನ್ನು ನಾವೆಲ್ಲ ಕಂಡಿದ್ದೇವೆ.
ರಾಮನ ಕಿಂಕರನೇ ಇಂಥವನಾದರೆ ರಾಮನ ಬಲವೆಂಥದೋ ! ಅವನು
ಕಡಲನ್ನು ಬತ್ತಿಸಿಯಾದರೂ ಸಂಭನಗೊಳಿಸಿಯಾದರೂ ದಾಟಿ ಬಂದಾನು.
ಲಂಕೆಗೆ ಸಂಕಟ ಪ್ರಾಪ್ತವಾದಂತೆ ಕಾಣುತ್ತದೆ. ನಿಮ್ಮೆಲ್ಲರ ನೀತಿ ಶಾಸ್ತ್ರದ
ಕೌಶಲ್ಯವನ್ನು ತೋರಿಸುವ ಕಾಲ ಈಗ ಸನ್ನಿಹಿತವಾಗಿದೆ."
 
ಆಗ ವಿಭೀಷಣನು ರಾಜಾಸನಕ್ಕೆ ಕೈ ಮುಗಿದು ವಿಜ್ಞಾಪಿಸಿಕೊಂಡನು :
* ಲಂಕೆಯು ನಾಶವಾಗದಿರುವುದಕ್ಕಾಗಿ ಸೀತೆಯನ್ನು ರಾಮನಿಗೆ ಒಪ್ಪಿಸ
ಬೇಕು. ಬ್ರಹ್ಮ ರುದ್ರಾದಿಗಳೂ ಯಾರ ಕಿಂಕರರೋ ಅಂಥ ರಾಮಚಂದ್ರನಿಗೆ
ಅವನ ಧರ್ಮಪತ್ನಿಯನ್ನು ಒಪ್ಪಿಸಬೇಕು. ಇದೇ ನನ್ನ ನನ್ನ ವಿಜ್ಞಾಪನೆ. "