This page has been fully proofread once and needs a second look.

ಯುದ್ಧ ಕಾಂಡ
 

 
ಅಣ್ಣನಿಗೆ ಬೇಡಾದ ತಮ್ಮ
 

 
ರಾಮಚಂದ್ರನ ಅನುಗ್ರಹ ದೃಷ್ಟಿ ಹನುಮಂತನ ಕಡೆಗೆ ಹರಿಯಿತು.
ಮುಕ್ತಕಂಠದಿಂದ ಹನುಮಂತನನ್ನು ಹೊಗಳಿದನು :
 

 
"ಪೌರುಷದಲ್ಲಿ ಹನುಮಂತನಿಗೆ ಎಣೆಯಾದವರಿಲ್ಲ. ಅವನಿಗೆ ಕಡಲನ್ನು
ದಾಟುವುದು ಒಂದು ಆಟ; ರಾವಣನು ಹುಲ್ಲುಕಡ್ಡಿ- ಗಿಂತ ಕಡೆ !"
 

 
ಮುಂದಿನ ಕಾಠ್ರ್ಯಕ್ರಮವೆಂದರೆ ಲಂಕೆಗೆ ಪಯಣ. ರಾಮನೂ ಹನು-
ಮಂತನೂ ಮಂತ್ರಾಲೋಚನೆ ನಡೆಸಿದರು. ಕಡಲಿಗೆ ಸೇತುವೆಯನ್ನು ಕಟ್ಟುವುದೇ
ಸರಿ ಎಂದು ನಿರ್ಣಯವಾಯಿತು. ಹನುಮಂತನ ವಿವರಣೆಯಂತೆ ಲಂಕಾಪುರ
ದುರ್ಗಮವಾಗಿದೆ. ರಾಕ್ಷಸ ಸೈನ್ಯ ಅಪಾರವಾಗಿದೆ. ಆದರೆ ಇದನ್ನಾಲಿಸುವಾಗ

ರಾಮಚಂದ್ರನ ಮುಖದಲ್ಲಿ ಮುಗುಳುನಗೆ ಮಾಯವಾಗಲಿಲ್ಲ; ಮಿನುಗುತ್ತಲೇ
ಇತ್ತು. ಅವನ ಉತ್ತರವೂ ಮುಗುಳುನಗೆಯಲ್ಲಿಯೇ ಅರಳಿತ್ತು !
 

 
"ಬೆಂಕಿಗೊಡ್ಡಿದ ಹತ್ತಿಯಂತೆ ರಾವಣನ ಲಂಕೆಯ ಪಾಡಾಗ- ಲಿದೆ.
ಇವತ್ತು ಉತ್ತರಾ ಫಲ್ಯುಗುನಿ; ಶುಭದಿನ. ಇಂದು ಮಧ್ಯಾಹ್ನವೇ ಪಯಣ ಹೊರ
ಡುವುದು ಇಷ್ಟವಾಗಿದೆ. ಶುಭಸ್ಯ ಶೀಘ್ರಮ್."
 

 
ಪಯಣದ ಸಿದ್ಧತೆ ನಡೆಯಿತು. ರಾಮಚಂದ್ರ ಹನುಮಂತನ ಹೆಗಲ
ನ್ನೇರಿದನು. ಲಕ್ಷ್ಮಣ ಅಂಗದನ ಹೆಗಲಮೇಲೆ ಕುಳಿತನು. ರಾಮನ ಮತ್ತು
ಸುಗ್ರೀವನ ಆಜ್ಞೆಯಂತೆ ಸೇನೆ ಹೊರಟಿತು. ಸೇನಾಪತಿಯಾದ ನೀಲ ಮುಂದೆ
ನಡೆದನು. ಎಡ-ಬಲಗಳಲ್ಲಿ ಋಷಭ ಮತ್ತು ಗಂಧಮಾದನ. ಸುಷೇಣ,
ಜಾಂಬವಂತ
ಮೊದಲಾದವರು ಮಧ್ಯಭಾಗದಲ್ಲಿದ್ದರು. ಸುಗ್ರೀವ ಲಕ್ಷ್ಮಣ
-
ರೊಡನೆ ರಾಮಚಂದ್ರನೂ ಸೇನಾಮಧ್ಯದಲ್ಲಿ ವಿರಾಜಿಸಿದನು. ಪನಸಾದಿಗಳು
ಸೇನಾ ಚಕ್ರದ ರಕ್ಷಣೆಯ ಹೊರೆ ಹೊತ್ತು ಸುತ್ತ ನಡೆದರು.
 

 
ಗುಡುಗುವ ಮೋಡಗಳಂತೆ ಗರಿಮೂಡಿದ ಬೆಟ್ಟಗಳಂತೆ ನಡೆಯಿತು ಕಪಿ
ಸೇನೆ. ಕೆಲವರು ಮರಗಳಿಂದ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದಾರೆ. ಕೆಲವರು