This page has not been fully proofread.

ಯುದ್ಧ ಕಾಂಡ
 
ಅಣ್ಣನಿಗೆ ಬೇಡಾದ ತಮ್ಮ
 
ರಾಮಚಂದ್ರನ ಅನುಗ್ರಹ ದೃಷ್ಟಿ ಹನುಮಂತನ ಕಡೆಗೆ ಹರಿಯಿತು.
ಮುಕ್ತಕಂಠದಿಂದ ಹನುಮಂತನನ್ನು ಹೊಗಳಿದನು :
 
"ಪೌರುಷದಲ್ಲಿ ಹನುಮಂತನಿಗೆ ಎಣೆಯಾದವರಿಲ್ಲ. ಅವನಿಗೆ ಕಡಲನ್ನು
ದಾಟುವುದು ಒಂದು ಆಟ; ರಾವಣನು ಹುಲ್ಲುಕಡ್ಡಿಗಿಂತ ಕಡೆ !"
 
ಮುಂದಿನ ಕಾಠ್ಯಕ್ರಮವೆಂದರೆ ಲಂಕೆಗೆ ಪಯಣ. ರಾಮನೂ ಹನು-
ಮಂತನೂ ಮಂತ್ರಾಲೋಚನೆ ನಡೆಸಿದರು. ಕಡಲಿಗೆ ಸೇತುವೆಯನ್ನು ಕಟ್ಟುವುದೇ
ಸರಿ ಎಂದು ನಿರ್ಣಯವಾಯಿತು. ಹನುಮಂತನ ವಿವರಣೆಯಂತೆ ಲಂಕಾಪುರ
ದುರ್ಗಮವಾಗಿದೆ. ರಾಕ್ಷಸ ಸೈನ್ಯ ಅಪಾರವಾಗಿದೆ. ಆದರೆ ಇದನ್ನಾಲಿಸುವಾಗ
ರಾಮಚಂದ್ರನ ಮುಖದಲ್ಲಿ ಮುಗುಳುನಗೆ ಮಾಯವಾಗಲಿಲ್ಲ; ಮಿನುಗುತ್ತಲೇ
ಇತ್ತು. ಅವನ ಉತ್ತರವೂ ಮುಗುಳುನಗೆಯಲ್ಲಿಯೇ ಅರಳಿತ್ತು !
 
"ಬೆಂಕಿಗೊಡ್ಡಿದ ಹತ್ತಿಯಂತೆ ರಾವಣನ ಲಂಕೆಯ ಪಾಡಾಗಲಿದೆ.
ಇವತ್ತು ಉತ್ತರಾ ಫಲ್ಯುನಿ; ಶುಭದಿನ. ಇಂದು ಮಧ್ಯಾಹ್ನವೇ ಪಯಣ ಹೊರ
ಡುವುದು ಇಷ್ಟವಾಗಿದೆ. ಶುಭಸ್ಯ ಶೀಘ್ರ."
 
ಪಯಣದ ಸಿದ್ಧತೆ ನಡೆಯಿತು. ರಾಮಚಂದ್ರ ಹನುಮಂತನ ಹೆಗಲ
ನ್ನೇರಿದನು. ಲಕ್ಷ್ಮಣ ಅಂಗದನ ಹೆಗಲಮೇಲೆ ಕುಳಿತನು. ರಾಮನ ಮತ್ತು
ಸುಗ್ರೀವನ ಆಜ್ಞೆಯಂತೆ ಸೇನೆ ಹೊರಟಿತು. ಸೇನಾಪತಿಯಾದ ನೀಲ ಮುಂದೆ
ನಡೆದನು. ಎಡ-ಬಲಗಳಲ್ಲಿ ಋಷಭ ಮತ್ತು ಗಂಧಮಾದನ. ಸುಷೇಣ,
ಜಾಂಬವಂತ ಮೊದಲಾದವರು ಮಧ್ಯಭಾಗದಲ್ಲಿದ್ದರು. ಸುಗ್ರೀವ ಲಕ್ಷ್ಮಣ
ರೊಡನೆ ರಾಮಚಂದ್ರನೂ ಸೇನಾಮಧ್ಯದಲ್ಲಿ ವಿರಾಜಿಸಿದನು. ಪನಸಾದಿಗಳು
ಸೇನಾ ಚಕ್ರದ ರಕ್ಷಣೆಯ ಹೊರೆ ಹೊತ್ತು ಸುತ್ತ ನಡೆದರು.
 
ಗುಡುಗುವ ಮೋಡಗಳಂತೆ ಗರಿಮೂಡಿದ ಬೆಟ್ಟಗಳಂತೆ ನಡೆಯಿತು ಕಪಿ
ಸೇನೆ. ಕೆಲವರು ಮರಗಳಿಂದ ಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದಾರೆ. ಕೆಲವರು