This page has been fully proofread once and needs a second look.
ಮಿಂಚಿನಬಳ್ಳಿ
ಹನುಮಂತನು " ಜನಕ ತನಯೆಯನ್ನು ಕಂಡು ಬಂದೆ " ಎಂದ ಮಾತ್ರಕ್ಕೆ ರಾಮಚಂದ್ರನ ಮುಖದಲ್ಲಿ ನಗೆಮಲ್ಲಿಗೆ- ಯರಳಿತು. ಲಕ್ಷ್ಮಣನು ಹಿಗ್ಗಿ ಹಿರಿಯಾದನು. ಸುಗ್ರೀವನು ಸಂತಸ ದಲ್ಲಿ ಉಬ್ಬಿಹೋದನು. ಮಾರುತಿ ಎಲ್ಲ ವಿಷಯವನ್ನೂ ವಿವರ ವಾಗಿ ತಿಳಿಸಿದನು; ಸೀತೆಯ ಸಂದೇಶವನ್ನೂ ಅರುಹಿದನು. ಚಿತ್ರಕೂಟದಲ್ಲಿ ಕಾಗೆಯ ಕಣ್ಣು ಕುಕ್ಕಿದ ಕಥೆಯನ್ನೂ ಹೇಳಿ- ದನು. ಅಭಿಜ್ಞಾನವೆಂದು ಕೊಟ್ಟ ಚೂಡಾಮಣಿಯನ್ನೂ ಒಪ್ಪಿಸಿದನು.
G
ರಾಮ-ಸೀತೆಯರು ಆಡುತ್ತಿರುವ ಲೀಲಾನಾಟಕದಲ್ಲಿ ಹನುಮಂತನು ತನ್ನ ಪಾತ್ರದ ವಿಡಂಬನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದನು. ರಾಮ-
ಚಂದ್ರನು ಸಂತುಷ್ಟನಾಗಿ ಭಕ್ತಾಗ್ರಣಿಯಾದ ಹನುಮಂತನನ್ನು ಬಿಗಿದಪ್ಪಿ