This page has been fully proofread once and needs a second look.

ಸಂಗ್ರಹರಾಮಾಯಣ
 
ಮಾಯವಾದಂತಾಯಿತು.
 
ಹನುಮಂತನು ಖಂಡಿತವಾಗಿ ಸೀತೆಯನ್ನು
ನೋಡಿ ಬಂದಿರಬೇಕು. ಕೆಲಸವನ್ನು ಪೂರೈಸದೆ ಬಂದಿದ್ದರೆ ಅವನು ಹೀಗೆ
ಆನಂದದ ಸಿಂಹನಾದವನ್ನು ಮಾಡು ತ್ತಿರಲಿಲ್ಲ ಎಂಬ ಜಾಂಬವಂತನ ವಾದ
ಕಪಿಗಳೆಲ್ಲರಿಗೂ ಯುಕ್ತವೆನಿಸಿತು. ಸಂತಸದಿಂದ ಕಪಿಗಳು ಹಾರಿದರು-
ಕುಣಿದರು.
 
CKE
 

 
ಮಾಹೇಂದ್ರ ಪರ್ವತದಲ್ಲಿ ಇಳಿದ ಹನುಮಂತನಿಗೆ ಕಪಿಗಳು ಹೂ-ಹಣ್ಣು
ಗಳಿಂದ ಉಪಚರಿಸಿದರು.
 
ಮಾಹೇಂದ್ರ ಪರ್ವತದಲ್ಲಿ ಇಳಿದ ಹನುಮಂತನಿಗೆ ಕಪಿಗಳು ಹೂ-ಹಣ್ಣು
ಹನುಮಂತನು ಉಲ್ಲಸಿತನಾಗಿ ನುಡಿದನು :
" ರಾಮನ ಪತ್ನಿಯನ್ನು ಕಂಡು ಬಂದೆ." ಕಪಿಗಳೆಲ್ಲರೂ ಏಕಕಂಠದಿಂದ ಹರ್ಷ
ಧ್ವನಿಗೈದರು. ಹನುಮಂತನಿಂದ ಒಂದೊಂದು ಮಾತನ್ನೂ ಬಾರಿ ಬಾರಿ
ಕೇಳಿ ವಿವರವನ್ನೆಲ್ಲ ತಿಳಿದುಕೊಂಡರು; ಹನುಮಂತನನ್ನು ಮನವಾರ
 
ಸಾರೆ ಕೊಂಡಾಡಿದರು.
 

 
ಉತ್ತರಮುಖವಾಗಿ ಕಪಿಗಳ ತಂಡವು ಹೊರಟಿತು. ದಾರಿಯ- ಲ್ಲಿ ಮಧುವನ
ಕಾಣಿಸಿತು. ಹನುಮಂತನ ಮತ್ತು ಅಂಗದನ ಒಪ್ಪಿಗೆಯನ್ನು ಪಡೆದ ಕಪಿಗಳು
ಸಂತಸದಿಂದ ಯಥೇಷ್ಟವಾಗಿ ಮಧುಪಾನ ಮಾಡಿದರು.
 

 
ಆ ಕಾಡನ್ನು ದಧಿಮುಖನು ಕಾಯುತ್ತಿದ್ದನು. ಅವನು ಸುಗ್ರೀವನ
ಸೋದರಮಾವ ಬೇರೆ. ಆದರೆ ಉಲ್ಲಸಿತರಾದ ಕಪಿಗಳು ಅವನನ್ನು ಅವನ
ಕೆಲಸದಾಳುಗಳನ್ನು ಅಲಕ್ಷಿಸಿ ಅವಮಾನಿಸಿ ಬಿಟ್ಟರು. ಅವನು ಸಿಟ್ಟುಕೊಂಡು
ಸುಗ್ರೀವನೆಡೆಗೆ ದೂರು- ಕೊಂಡೊಯ್ದನು. ಈ ವಾರ್ತೆಯನ್ನು ಕೇಳಿದ ಸುಗ್ರೀ-
ವನು ರಾಮನ ಬಳಿ ನುಡಿದನು:
 

 
" ರಾಮಚಂದ್ರ, ಹನುಮಂತನು ಸೀತೆಯನ್ನು ಕಂಡು- ಬಂದಿರಬೇಕು.
ಅದರಿಂದಲೇ ಅವರು ಮಧುವನದಲ್ಲಿ ಸಂತಸದ ಮಧುಪಾನವನ್ನು ಮಾಡು-
ತ್ತಿದ್ದಾರೆ.
 
""
 

 
ಕಪಿಗಳನ್ನು ಕೂಡಲೇ ಕರೆದು ತರುವಂತೆ ಸುಗ್ರೀವನು ದಧಿಮುಖನನ್ನೆ
ಹಿಂದಕಟ್ಟಿದನು. ದಿಗಿಲುಗೊಂಡ ದಧಿಮುಖನು ಬಂದು ವಿಜ್ಞಾಪಿಸಿಕೊಂಡನು:
*

"
ಮಹಾರಾಜ ಸುಗ್ರೀವನು ನಿಮ್ಮನ್ನು ಕೂಡಲೇ ಬರಹೇಳಿದ್ದಾನೆ."
 

ಕಪಿ
ಗಳೆಲ್ಲ ತ್ವರಿತವಾಗಿ ಬಂದು ಹನುಮಂತನೊಡನೆ ರಾಮಚರಣಗಳಿಗೆರಗಿದರು.