2023-03-15 15:35:49 by ambuda-bot
This page has not been fully proofread.
ಸಂಗ್ರಹರಾಮಾಯಣ
ಮಾಯವಾದಂತಾಯಿತು.
ಹನುಮಂತನು ಖಂಡಿತವಾಗಿ ಸೀತೆಯನ್ನು
ನೋಡಿ ಬಂದಿರಬೇಕು. ಕೆಲಸವನ್ನು ಪೂರೈಸದೆ ಬಂದಿದ್ದರೆ ಅವನು ಹೀಗೆ
ಆನಂದದ ಸಿಂಹನಾದವನ್ನು ಮಾಡುತ್ತಿರಲಿಲ್ಲ ಎಂಬ ಜಾಂಬವಂತನ ವಾದ
ಕಪಿಗಳೆಲ್ಲರಿಗೂ ಯುಕ್ತವೆನಿಸಿತು. ಸಂತಸದಿಂದ ಕಪಿಗಳು ಹಾರಿದರು-
ಕುಣಿದರು.
CKE
ಗಳಿಂದ ಉಪಚರಿಸಿದರು.
ಮಾಹೇಂದ್ರ ಪರ್ವತದಲ್ಲಿ ಇಳಿದ ಹನುಮಂತನಿಗೆ ಕಪಿಗಳು ಹೂ-ಹಣ್ಣು
ಹನುಮಂತನು ಉಲ್ಲಸಿತನಾಗಿ ನುಡಿದನು :
"ರಾಮನ ಪತ್ನಿಯನ್ನು ಕಂಡು ಬಂದೆ." ಕಪಿಗಳೆಲ್ಲರೂ ಏಕಕಂಠದಿಂದ ಹರ್ಷ
ಧ್ವನಿಗೈದರು. ಹನುಮಂತನಿಂದ ಒಂದೊಂದು ಮಾತನ್ನೂ ಬಾರಿ ಬಾರಿ
ಕೇಳಿ ವಿವರವನ್ನೆಲ್ಲ ತಿಳಿದುಕೊಂಡರು; ಹನುಮಂತನನ್ನು ಮನವಾರ
ಕೊಂಡಾಡಿದರು.
ಉತ್ತರಮುಖವಾಗಿ ಕಪಿಗಳ ತಂಡವು ಹೊರಟಿತು. ದಾರಿಯಲ್ಲಿ ಮಧುವನ
ಕಾಣಿಸಿತು. ಹನುಮಂತನ ಮತ್ತು ಅಂಗದನ ಒಪ್ಪಿಗೆಯನ್ನು ಪಡೆದ ಕಪಿಗಳು
ಸಂತಸದಿಂದ ಯಥೇಷ್ಟವಾಗಿ ಮಧುಪಾನ ಮಾಡಿದರು.
ಆ ಕಾಡನ್ನು ದಧಿಮುಖನು ಕಾಯುತ್ತಿದ್ದನು. ಅವನು ಸುಗ್ರೀವನ
ಸೋದರಮಾವ ಬೇರೆ. ಆದರೆ ಉಲ್ಲಸಿತರಾದ ಕಪಿಗಳು ಅವನನ್ನು ಅವನ
ಕೆಲಸದಾಳುಗಳನ್ನು ಅಲಕ್ಷಿಸಿ ಅವಮಾನಿಸಿಬಿಟ್ಟರು. ಅವನು ಸಿಟ್ಟುಕೊಂಡು
ಸುಗ್ರೀವನೆಡೆಗೆ ದೂರುಕೊಂಡೊಯ್ದನು. ಈ ವಾರ್ತೆಯನ್ನು ಕೇಳಿದ ಸುಗ್ರೀ-
ವನು ರಾಮನ ಬಳಿ ನುಡಿದನು:
" ರಾಮಚಂದ್ರ, ಹನುಮಂತನು ಸೀತೆಯನ್ನು ಕಂಡುಬಂದಿರಬೇಕು.
ಅದರಿಂದಲೇ ಅವರು ಮಧುವನದಲ್ಲಿ ಸಂತಸದ ಮಧುಪಾನವನ್ನು ಮಾಡು-
ತ್ತಿದ್ದಾರೆ.
""
ಕಪಿಗಳನ್ನು ಕೂಡಲೇ ಕರೆದು ತರುವಂತೆ ಸುಗ್ರೀವನು ದಧಿಮುಖನನ್ನೆ
ಹಿಂದಕಟ್ಟಿದನು. ದಿಗಿಲುಗೊಂಡ ದಧಿಮುಖನು ಬಂದು ವಿಜ್ಞಾಪಿಸಿಕೊಂಡನು:
* ಮಹಾರಾಜ ಸುಗ್ರೀವನು ನಿಮ್ಮನ್ನು ಕೂಡಲೇ ಬರಹೇಳಿದ್ದಾನೆ."
ಗಳೆಲ್ಲ ತ್ವರಿತವಾಗಿ ಬಂದು ಹನುಮಂತನೊಡನೆ ರಾಮಚರಣಗಳಿಗೆರಗಿದರು.