This page has not been fully proofread.

ಮಿಂಚಿನಬಳ್ಳಿ
 
ಗಾಳಿಗೂ ಬೆಂಕಿಗೂ ಗೆಳೆತನವಲ್ಲವೆ ? ಗಾಳಿಯ ಮಗನನ್ನು ಅದು
ಸುಡಲೇ ಇಲ್ಲ. ಬಾಲದ ಬಟ್ಟೆಗೆಲ್ಲ ಬೆಂಕಿ ಹತ್ತಿ ಮುಗಿಲೆತ್ತರಕ್ಕೆ ಜ್ವಾಲೆ ಹರ
ಡಿತ್ತು. ಕೂಡಲೆ ಹನುಮಂತನು ರಕ್ಕಸರ ಹಿಡಿತದಿಂದ ತಪ್ಪಿಸಿಕೊಂಡು ಬಾಲದ
ಬೆಂಕಿಯಿಂದ ಲಂಕೆಯನ್ನೆ ಸುಡತೊಡಗಿದನು. ಜನ ಭಯದಿಂದ ಓಡತೊಡಗಿ
ದರು. ಎಲ್ಲಿ ನೋಡಿದರೂ ಬೊಬ್ಬೆ-ಹಾರಾಟ-ಚೀರಾಟ. ಲಂಕೆಯೆಲ್ಲ ಬೆಂಕಿ
ಯಲ್ಲಿ ಮುಳುಗಿಹೋಗಿತ್ತು. ಕೆಲವೆಡೆ ಸುಟ್ಟ ಮನೆಗಳು, ಕೆಲವಡೆ ಕರಕಿಹೋದ
ಕೈ-ಕಾಲಗಳು, ಕೆಲವೆಡೆ ಮುಗಿಲೆತ್ತರಕ್ಕೆ ಜಿಗಿದು ಉರಿವ ಬೆಂಕಿಯ ಕೋಲಾ
ಹಲ. ಕ್ಷಣಾರ್ಧದಲ್ಲಿ ಲಂಕೆ ಮಸಣವಾಯಿತು. ಸಿರಿಯನಾಡು ನರಕವಾಯಿತು.
 
C೫೮
 
ಲಂಕೆಯನ್ನು ಬೆಂಕಿಯಲ್ಲಿ ಅದ್ದಿ, ಹನುಮಂತ ಸಮುದ್ರಕ್ಕೆ ಹಾರಿದನು.
ರಾಕ್ಷಸರ ಮಾರಣಹೋಮ ಮಾಡಿದ ಮೇಲೆ ಅವಭ್ಯಥಸ್ನಾನ ಮಾಡ-
ಬೇಕಲ್ಲವೆ ?
 
ಹನುಮಂತ ಲಂಕೆಯನ್ನೆಲ್ಲ ಸುಟ್ಟಿದ್ದರೂ ಸೀತೆಗೆ ನೆಲೆಯಾದ ಶಿಂಶಪೆ
ಯನ್ನು ಸುಟ್ಟಿರಲಿಲ್ಲ. ವಿಭೀಷಣನ ಮನೆಯನ್ನೂ ಸುಟ್ಟಿರಲಿಲ್ಲ. ಧರ್ಮಾತ್ಮ
ರೆಂದರೆ ಅಷ್ಟು ಗೌರವ ಆತನಿಗೆ. ಇತ್ತ ಸೀತೆ 'ಬೆಂಕಿಯಿಂದ ಹನುಮಂತನಿಗೆ
ಏನೂ ಆಪತ್ತು ಬಾರದಿರಲಿ' ಎಂದು ಅಗ್ನಿದೇವನನ್ನು ಪ್ರಾರ್ಥಿಸುತ್ತಿದ್ದಳು.
ವಿಭೀಷಣನ ಪತ್ನಿ ಸಾಧಿ ಸುರಮೆ ಬಳಿಯಲ್ಲಿ ಕುಳಿತು ಸಂತೈಕೆಯ ಮಾತ
ನಾಡುತ್ತಿದ್ದಳು. ಹನುಮಂತನು ಹೊರಡುವ ಮುನ್ನ ಸೀತೆಯ ಬಳಿಗೆ ಬಂದು
ಹೋಗುವದಕ್ಕೆ ಅಪ್ಪಣೆ ಬೇಡಿದನು. "ರಾಮಚಂದ್ರನನ್ನು ಬೇಗ ಬರುವಂತೆ
ಹೇಳು" ಎಂದು ಹೇಳಿ ಸೀತೆ ಆತನನ್ನು ಹರಸಿ ಕಳಸಿದಳು.
 
ಸಮುದ್ರವನ್ನು ದಾಟುವದಕ್ಕಾಗಿ ಲಂಬ ಪರ್ವತವನ್ನೇರಿ ನಿಂತ ಹನು-
ಮಂತ ಮೊದಲಿನಂತೆಯೇ ಮಹಾಕಾಯನಾಗಿ ಬೆಳೆದನು. ಹಾರುವ ಭರದಲ್ಲಿ
ಕಾಲಿನ ತುಳಿತಕ್ಕೆ ಸಿಕ್ಕಿದ ಪರ್ವತ ಶಿಖರ, ನೆಲ ಸಮವಾಗುವಂತೆ ಕುಸಿಯಿತು.
ಹನುಮಂತನ ಮಹಾಕಾಯ ಬಾನಂಗಳವನ್ನು ಮುಟ್ಟಿತು. ಅವನ ಚಾಚಿದ
ತೋಳುಗಳು ಎಣ್ದೆಸೆಗಳನ್ನೂ ತನ್ನಡೆಗೆ ಸೆಳೆದುಕೊಳ್ಳುವಂತೆ ಕಾಣಿಸುತ್ತಿತ್ತು.
ಬ್ರಹ್ಮಾಂಡವನ್ನೇ ಭೇದಿಸುವಂತೆ ಅವನ ತಲೆ ಉನ್ನತವಾಗಿ ಎತ್ತಿ ನಿಂತಿತ್ತು,
 
ಹನುಮಂತನ ಸಿಂಹನಾದವನ್ನು ಕೇಳಿ ಜಾಂಬವಂತ, ಅಂಗದ ಮೊದಲಾ
ದವರಿಗೆ ಜೀವ ಬಂದಂತಾಯಿತು. ಕವಿದಿದ್ದ ನಿರಾಶೆ, ದೈನ್ಯ ಎತ್ತಲೋ