This page has not been fully proofread.

ಸಂಗ್ರಹರಾಮಾಯಣ
 
(6
 
* ಲಂಕಾಧೀಶ್ವರ ! ನಾವು ಕಾಡಿನಲ್ಲಿರುವವರು, ಹಣ್ಣು ಹಂಪಲು ತಿನ್ನು
ವವರು. ನಮ್ಮ ಸ್ವಭಾವಕ್ಕನುಗುಣವಾಗಿ ನಿನ್ನ ಕಾಡನ್ನೂ ಸೂರೆಗೊಳಿಸಿದೆ.
ಇಷ್ಟಕ್ಕೆಯೆ ನೀನು ಕೋಪಿಸಿಕೊಳ್ಳುವುದು ತರವಲ್ಲ.
 
62
 
ಇನ್ನು ನಿನ್ನ ಸೈನ್ಯ ನಾಶದ ವಿಚಾರ. ನನ್ನನ್ನು ಕೊಲ್ಲಬಂದವರನ್ನು
ಸುಮ್ಮನೆ ನೋಡುತ್ತಿರುವುದಕ್ಕಾಗುತ್ತದೆಯೆ ? ನಾನೂ ಹೋರಾಡಿದೆ. ಪಾಪ !
ಅವರೆಲ್ಲ ಜೀವ ತೊರೆದು ಬಿಟ್ಟರು ! ನಾನೇನು ಮಾಡಲಿ ! ನಿನ್ನ ಬ್ರಹ್ಮಾಸ್ತ್ರ
ಕೂಡ ನನ್ನನ್ನು ಬಂಧಿಸಲಾರದು. ನಿನ್ನ ಮಗನ ಪರಾಕ್ರಮಕ್ಕಾಗಿ ಹೆಮ್ಮೆ
ಪಟ್ಟುಕೊಳ್ಳಬೇಡ.
 
ನಾನು ರಾಮಚಂದ್ರನ ದೂತ. ವಾಯುದೇವರ ಮಗ, ನಿನ್ನನ್ನು
ನೋಡಬೇಕೆಂದು ಬಯಸಿ ನಾನಾಗಿಯೆ ಬಂದೆ. ಬ್ರಹ್ಮಾಸ್ತ್ರ ಒಂದು ನೆವ
ಅಷ್ಟೆ. ನೀನು ಸೀತೆಯನ್ನು ರಾಮಚಂದ್ರನಿಗೆ ಒಪ್ಪಿಸಿ ಕ್ಷಮೆ ಕೇಳಿದೆಯಾದರೆ
ನನ್ನ ಪ್ರಭು ಇನ್ನಾದರೂ ನಿನ್ನ ಕಳ್ಳತನವನ್ನು ಕ್ಷಮಿಸುವನು.
 
ಇದಕ್ಕೆ ಒಪ್ಪದೆ ಹೋದರೆ ರಾಮ-ಲಕ್ಷ್ಮಣರನ್ನೂ ಕಪಿರಾಜನಾದ
ಸುಗ್ರೀವನನ್ನೂ ನೀನು ಸದ್ಯದಲ್ಲಿ ರಣರಂಗಣದಲ್ಲಿ ಕಾಣುವೆ. ಬ್ರಹ್ಮ ರುದ್ರಾದಿ
ಗಳೂ ರಾಮಬಾಣವನ್ನು ತಡೆದುಕೊಳ್ಳಲಾರರು. ನೀನು ಯಾವ ಲೆಕ್ಕ !
ಅವಿವೇಕಿಯಂತೆ ಯುದ್ಧಕ್ಕಿಳಿಯಬೇಡ. ಲಂಕೆಯಲ್ಲಿ ರಕ್ತದ ಹೊಳೆ ಹರಿಯದಿರ
ಲೆಂದು ರಾಮನಿಗೆ ಶರಣಾಗು, ನಾನೇ ನಿನ್ನನ್ನು ತೀರಿಸಿಬಿಡಬಹುದಿತ್ತು. ಆದರೆ
ನನ್ನ ಪ್ರಭುವಿನ ಶತ್ರುವನ್ನು ನಾನು ಸಂಹರಿಸಬಾರದು. ಅದು ಅವನಿಗೇ
 
ಮಾಸಲು."
 
ರಾವಣನು ಕನಲಿ ಕೆಂಡವಾಗಿ ಈ ಕಪಿಯನ್ನು ಕೊಂದುಬಿಡಿ" ಎಂದು
ಆಜ್ಞಾಪಿಸಿದನು. ಒಡನೆ ಧರ್ಮಾತ್ಮನಾದ ವಿಭೀಷಣನು "ದೂತರನ್ನು ಕೊಲ್ಲು
ವುದು ನೀತಿಯಲ್ಲ" ಎಂದು ತಡೆದನು. ಕೊನೆಗೆ ಬಾಲವನ್ನು ಸುಟ್ಟು ವಿರೂಪ
ಗೊಳಿಸಬೇಕು ಎಂದು ತೀರ್ಮಾನವಾಯಿತು.
 
ರಾಜಾಜ್ಞೆಯಂತೆ ರಾಕ್ಷಸರು ಈ ಹನುಮಂತನ ಬಾಲಕ್ಕೆ ಬಟ್ಟೆ ಸುತ್ತ
ತೊಡಗಿದರು. ಆ ಬಾಲ ಸುತ್ತಿದಷ್ಟು ಉದ್ದ ಬೆಳೆಯುತ್ತಿತ್ತು. ಹೇಗೋ ಕಷ್ಟ
ದಿಂದ ಬಾಲವನ್ನೆಲ್ಲ ಬಟ್ಟೆಯಿಂದ ಸುತ್ತಿ ಬೆಂಕಿ ಹೊತ್ತಿಸಿದರು,